ETV Bharat / state

ಅಂಕೋಲಾದಲ್ಲಿ ಗುಂಡಿನ ಸದ್ದು; ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆ - karwar crime news

ಆಸ್ತಿ ಕಲಹದ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆಯಾಗಿರುವ ಘಟನೆ ಅಂಕೋಲಾ ಪಟ್ಟಣದ ಮಠಾಕೇರಿಯಲ್ಲಿ ನಡೆದಿದೆ.

Retired army soldier,ನಿವೃತ್ತ ಸೈನಿಕ
author img

By

Published : Jul 28, 2019, 12:01 AM IST

ಕಾರವಾರ: ನಿವೃತ್ತ ಸೈನಿಕನಿಂದ ನಾದಿನಿ, ಮಗ ಹತ್ಯೆಯಾಗಿದ್ದಾರೆ. ಆಸ್ತಿ ಕಲಹದಿಂದ ಸಿಟ್ಟಿಗೆದ್ದ ಮಾಜಿ ಸೈನಿಕ ತನ್ನ ಸಹೋದರನ ಪತ್ನಿ ಹಾಗೂ ಪುತ್ರನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಬಾಲಕ ಮತ್ತು ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಂಕೋಲಾ ಪಟ್ಟಣದ ಮಠಾಕೇರಿಯಲ್ಲಿ ನಡೆದಿದೆ.

ಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಪೊಲೀಸ್​ ಅಧಿಕಾರಿಗಳು

ಭೂ ಸೇನೆಯ ನಿವೃತ್ತ ಹವಾಲ್ದಾರ ಅಜಯ್​ ಪ್ರಭು ಗುಂಡು ಹಾರಿಸಿದ ಆರೋಪಿ. ತಾಲೂಕಿನ ಮಠಕೇರಿಯ ಅಮಿತ್​ ಮಗ ಅನೋಜ್ (09) ಮತ್ತು ಅಮಿತ್ ಅವರ ಪತ್ನಿ ಮೇಧಾ (40) ಮೃತರು. ಅಜಯ್​ ಮತ್ತು ಅಮಿತ್​ ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ಆರೋಪಿ ಅಜಯ್ ಕುಡಿದ ಅಮಲಿನಲ್ಲಿ ತಮ್ಮನ ಮನೆಗೆ ಬಂದಿದ್ದನು. ಈ ವೇಳೆ ಅಮಿತ್ ಮನೆಯಲ್ಲಿ ಇರಲಿಲ್ಲ. ಮೇಧಾ ಮಗನಿಗೆ ಪಾಠ ಹೇಳಿಕೊಡುತ್ತಿದ್ದರು.

Karwar
ಮೃತ ಬಾಲಕ

ಈ ವೇಳೆ ಏಕಾಏಕಿ ಅಜಯ್​ ಡಬಲ್ ಬ್ಯಾರಲ್ ನಾಡ ಬಂದೂಕಿನಿಂದ ಗುಂಡಿನ‌ ದಾಳಿ ನಡೆಸಿದ್ದಾನೆ. ಪರಿಣಾಮ ತಾಯಿ-ಮಗ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:Body:ಅಂಕೋಲಾದಲ್ಲಿ ಗುಂಡಿನ ಸದ್ದು... ತಮ್ಮನ ಮಗನನ್ನೆ ಹತ್ಯೆ ಮಾಡಿದ ನಿವೃತ್ತ ಸೈನಿಕ

ಕಾರವಾರ: ಆಸ್ತಿ ಕಲಹದಿಂದ ಸಿಟ್ಟಿಗೆದ್ದ ಮಾಜಿ ಸೈನಿಕನೋರ್ವ ತನ್ನ ಸಹೋದರನ ಪತ್ನಿ ಹಾಗೂ ಪುತ್ರನ ಮೇಲೆ ಗುಂಡಿನ ದಾಳಿ ನಡೆಸಿದ್ದು, ಪರಿಣಾಮ ಬಾಲಕ ಸ್ಥಳದಲ್ಲಿಯೇ ಮೃತಪಟ್ಟು, ಮಹಿಳೆ ಗಂಭೀರಗೊಂಡಿರುವ ಘಟನೆ ಅಂಕೋಲಾ ಪಟ್ಟಣದ ಮಠಾಕೇರಿಯಲ್ಲಿ ಶನಿವಾರ ನಡೆದಿದೆ.
ತಾಲ್ಲೂಕಿನ ಮಠಕೇರಿಯ ಅಮಿತ್ ಪ್ರಭು ಪುತ್ರ ಅನೋಜ್ (೯) ಮೃತಪಟ್ಟ ಬಾಲಕ. ಇನ್ನು ಅಮಿತ್ ಅವರ ಪತ್ನಿ ಮೇಧಾ (೪೦) ಗಂಭೀರವಾಗಿ ಗಾಯಗೊಂಡಿದ್ದು, ಅಂಕೋಲಾ ಪ್ರಾಥಮಿಕ ಕೇಂದ್ರದಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಕೊಂಡೊಯ್ಯಲಾಗಿದೆ.
ಭೂ ಸೇನೆಯ ನಿವೃತ್ತ ಹವಾಲ್ದಾರ ಅಜಯ ಪ್ರಭು (45) ಗುಂಡು ಹಾರಿಸಿದ ಆರೋಪಿ. ಈತ ಮತ್ತು ಈತನ ತಮ್ಮ ಅಮಿತ್ ಪ್ರಭು ಒಂದೇ ಕಟ್ಟಡದಲ್ಲಿ ವಾಸವಾಗಿದ್ದರು. ಆರೋಪಿ ಅಜಯ್ ಕುಡಿದ ಅಮಲಿನಲ್ಲಿ ತಮ್ಮನ ಮನೆಗೆ ಬಂದಿದ್ದ. ಆದರೆ ಈ ವೇಳೆ ಅಮಿತ್ ಮನೆಯಲ್ಲಿ ಇರಲಿಲ್ಲ. ಪಾಠ ಹೇಳಿಕೊಡುತ್ತಿದ್ದ ತಾಯಿ‌ ಮೇಧಾ ಮಗನಿಗರ ಪಾಠ ಹೇಳಿಕೊಡುತ್ತಿದ್ದಳು.
ಆದರೆ ಏಕಾಏಕಿ ಬಂದಿದ್ದ ಈತ ಡಬಲ್ ಬ್ಯಾರಲ್ ನಾಡಬಂದೂಕಿನಿಂದ ಗುಂಡಿನ‌ದಾಳಿ ನಡೆಸಿದ್ದ. ಘಟನೆಯಲ್ಲಿ ಗುಂಡು ತಾಗಿ ಮಗು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೇಧಾ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.