ETV Bharat / state

ಜೂ.23ಕ್ಕೆ ದುಬೈಯಿಂದ ಮಂಗಳೂರಿಗೆ ಮತ್ತೊಂದು ವಿಮಾನ ಹಾರಲು ಸಿದ್ಧ

ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವವರು ತಮ್ಮ ತಾಯ್ನಾಡಿಗೆ ಮರಳಲು ಇಚ್ಚಿಸುವವರು ngtairline@hotmail.com ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ ರವಾನಿಸಬೇಕೆಂದು ಕೋರಲಾಗಿದೆ.

flight
ವಿಮಾನ
author img

By

Published : Jun 16, 2020, 1:09 PM IST

ಭಟ್ಕಳ: ಭಟ್ಕಳದ ಉದ್ಯಮಿ ಹಾಗೂ ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಅತಿಕುರ್ ರಹಮಾನ್​​​ ಮುನೀರ್​​ ಅ​ವರು ದುಬೈಯಲ್ಲಿ ಸಿಲುಕಿಕೊಂಡಿದ್ದ 184 ಮಂದಿಯನ್ನು ಚಾರ್ಟೆಡ್ ವಿಮಾನದ ಮೂಲಕ ಸುರಕ್ಷಿತವಾಗಿ ಭಟ್ಕಳಕ್ಕೆ ತಲುಪಿಸುವಲ್ಲಿ ಯಶಸ್ವಿಯಾದ ಬೆನ್ನಲ್ಲೇ ಜೂನ್23 ರಂದು ರಾಸ್ - ಅಲ್ - ಖೈಮಾ ವಿಮಾನ ನಿಲ್ದಾಣದಿಂದ ಮಂಗಳೂರಿಗೆ ಹಾರಲು ಮತ್ತೊಂದು ಚಾರ್ಟೆಡ್​ ವಿಮಾನ ಸಿದ್ಧಗೊಂಡಿದೆ.

ಕೊರೊನಾ ಲಾಕ್​ಡೌನ್ ಕಾರಣ ಭಟ್ಕಳ ಮತ್ತು ಸುತ್ತಮುತ್ತಲಿನ 600ಕ್ಕೂ ಹೆಚ್ಚು ಮಂದಿ ದುಬೈಯಲ್ಲಿ ಸಂಕಷ್ಟದೊಂದಿಗೆ ಬದುಕುತ್ತಿದ್ದಾರೆ. ಲಾಕ್​ಡೌನ್​ನಿಂದಾಗಿ ಹತಾಶರಾಗಿರುವ ಅವರು ತಮ್ಮ ತಾಯ್ನಾಡಿಗೆ ಮರಳು ಬಯಸಿದ್ದಾರೆ. ಇವರನ್ನು ಭಾರತಕ್ಕೆ ಕಳುಹಿಸಲು ಸರ್ಕಾರ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ನಮ್ಮ ಮೊದಲ ಚಾರ್ಟೆಡ್ ವಿಮಾನ 184 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ತಲುಪಿಸಿದ ನಂತರ ನಮ್ಮಲ್ಲಿ ಭರವಸೆಯೊಂದು ಮೂಡಿದೆ. ಇನ್ನುಳಿದ ಜನರನ್ನೂ ಭಟ್ಕಳಕ್ಕೆ ಕಳುಹಿಸುವ ನಿರ್ಧಾರವನ್ನು ಕೈಗೊಂಡಿದ್ದೇವೆ. ಜೂನ್ 23ರಂದು 210 ಪ್ರಯಾಣಿಕರನ್ನು ಬಾಡಿಗೆ ವಿಮಾನದ ಮೂಲಕ ಭಟ್ಕಳ ತಲುಪಿಸಲಾಗುವುದು ಎಂದು ದುಬೈಯ ನೂಹಾ ಜನರಲ್ ಟ್ರೆಡಿಂಗ್ಸ್​ನ ಮಾಲೀಕ ಉದ್ಯಮಿ ಅತಿಕುರ್ ರಹಮಾನ್​​​​ ಮಾಹಿತಿ ನೀಡಿದ್ದಾರೆ.

ಮಂಗಳೂರು ಹಾಗೂ ಭಟ್ಕಳದಲ್ಲಿ ಅವರಿಗೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದು, ಮೊದಲ ವಿಮಾನ ಮಂಗಳೂರು ತಲುಪುತ್ತಿದ್ದಂತೆ ಭಟ್ಕಳ ಮುಸ್ಲಿಮ್ ಜಮಾ ಅತ್ ಮಂಗಳೂರಿನ ಸದಸ್ಯರು ಪ್ರಯಾಣಿಕರನ್ನು ಉತ್ತಮ ರೀತಿಯಲ್ಲಿ ಸ್ವಾಗತಿಸಿದ್ದು, ಅವರಿಗೆ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದರು. ಅಲ್ಲದೇ ಮಂಗಳೂರಿನಿಂದ ಭಟ್ಕಳಕ್ಕೆ ಹೋಗಲು ಖಾಸಗಿ ಬಸ್ ವ್ಯವಸ್ಥೆಯನ್ನು ಮಾಡಿದ್ದರು. ಭಟ್ಕಳದಲ್ಲಿಯೂ ಮಜ್ಲಿಸೆ ಇಸ್ಲಾಹ್ ತಂಝೀಮ್ ಸದಸ್ಯರು ಪ್ರಯಾಣಿಕರನ್ನು ಉತ್ತಮ ರೀತಿಯಲ್ಲಿ ಬರಮಾಡಿಕೊಂಡು ಅವರಿಗೆ ಯಾವುದೇ ತೊಂದರೆಯಾಗದಂತೆ ಅಂಜುಮನ್ ವಸತಿ ನಿಲಯ ಹಾಗೂ ಹೋಟೆಲ್​ಗಳಲ್ಲಿ ಕ್ವಾರೆಂಟೈನ್ ಮಾಡುವಲ್ಲಿ ಸಹಕರಿಸಿದ್ದಾರೆ.

ಮೊದಲ ವಿಮಾನ ಹಾರಾಟದ ಯಶಸ್ವಿ ಅನುಭವದ ನಂತರ ಈಗ ಉತ್ತರಕನ್ನಡ ಜಿಲ್ಲಾಧಿಕಾರಿಗಳು ಹಾಗೂ ತಂಝೀಮ್ ಸಂಸ್ಥೆ ಹಸಿರು ನಿಶಾನೆಯನ್ನು ತೋರಿಸಿದ್ದು ಜೂನ್ 23ರಂದು ಎರಡನೇ ಚಾರ್ಟೆಡ್ ವಿಮಾನ ಹಾರಾಟಕ್ಕೆ ಸಿದ್ಧತೆ ನಡೆಸಿರುವ ಉದ್ಯಮಿ ಅತಿಕುರ್ ರಹಮಾನ್​​ ಮುನೀರ್​ ತಮ್ಮ ತಂದೆಯಂತೆ ರಾಷ್ಟ್ರ ಮತ್ತು ಸಮುದಾಯದ ಸೇವೆ ಮಾಡುವ ಉತ್ಸಾಹ ಹೊಂದಿದ್ದಾರೆ.

ಯುಎಇಯ ವಿವಿಧ ನಗರಗಳಲ್ಲಿ ಸಿಲುಕಿರುವವರು ತಮ್ಮ ತಾಯ್ನಾಡಿಗೆ ಮರಳಲು ಇಚ್ಚಿಸುವವರು ngtairline@hotmail.com ಈ ಮೇಲ್ ವಿಳಾಸಕ್ಕೆ ತಮ್ಮ ಸಂಪೂರ್ಣ ಮಾಹಿತಿ ಅಂದರೆ, ಪಾಸ್​ಪೋರ್ಟ್​ ಕಾಪಿಯ ಮೊದಲ ಮತ್ತು ಕೊನೆಯ ಪುಟದ ನಕಲು ಪ್ರತಿ, ದುಬೈಯ ಮೊಬೈಲ್ ಸಂಖ್ಯೆ, ಭಾರತದ ಮೊಬೈಲ್ ಸಂಖ್ಯೆ, ವೀಸಾ ವಿವರ, ಹಾಗೂ ಪ್ರಯಾಣಕ್ಕೆ ಕಾರಣವನ್ನು ತಿಳಿಸಿ, ಈ ಮೇಲಿನ ಎಲ್ಲವನ್ನೂ ರವಾನಿಸಬೇಕೆಂದು ಕೋರಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.