ಕಾರವಾರ: ನಿಷೇಧಿತ ಲೈಟ್ ಫಿಶಿಂಗ್ ನಡೆಸುತ್ತಿದ್ದ ಗೋವಾ ಮೂಲದ ಎರಡು ಬೋಟುಗಳನ್ನು ವಶಕ್ಕೆ ಪಡೆದಿರುವ ಘಟನೆ ಕಾರವಾರ ಸಮೀಪದ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ನಡೆದಿದೆ.
ಗೋವಾ ಮೂಲದ ಮೆಕ್ಸಿ ಗ್ರೇಸ್-1 ಹಾಗೂ ಮೆರೀ ಗ್ರೇಸ್-2 ಹೆಸರಿನ ಎರಡು ಯಾಂತ್ರಿಕೃತ ಬೋಟ್ಗಳು ನಿಷೇಧಿತ ಅಕ್ರಮ ಲೈಟ್ ಮೀನುಗಾರಿಕೆಯಲ್ಲಿ ತೊಡಗಿದ್ದವು. ಈ ಬಗ್ಗೆ ಸ್ಥಳೀಯ ಮೀನುಗಾರರು ಇಂಡಿಯನ್ ಕೋಸ್ಟ್ ಗಾರ್ಡ್ನವರಿಗೆ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಶೀಘ್ರದಲ್ಲೇ ಸಿಡಿಯುತ್ತಂತೆ ಸಿಡಿ: ವಿಶ್ವನಾಥ್, ಯತ್ನಾಳ್ ಹೇಳಿಕೆಗೆ ಸಿಎಂ ಪ್ರತ್ಯುತ್ತರ
ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಬ್ಬಂದಿ ಮೀನುಗಾರಿಕೆಗೆ ಬಳಸುತ್ತಿದ್ದ ಜನರೇಟರ್, ಲೈಟ್ಸ್ ಸೇರಿ ಎರಡು ಬೋಟ್ಗಳನ್ನು ಹಿಡಿದು ಮೀನುಗಾರಿಕೆ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ.