ಭಟ್ಕಳ: ಹೃದಯಾಘಾತದಿಂದ ತಪಾಸಣೆಗೆ ತೆರಳಿದ್ದ ವೇಳೆ ಸರಿಯಾದ ಚಿಕಿತ್ಸೆ ಸಿಗದೆ ವ್ಯಕ್ತಿ ಮೃತ ಪಟ್ಟಿದ್ದಾನೆ ಎಂದು ಆರೋಪಿಸಿ ಸಹಾಯಕ ಆಯುಕ್ತರಿಗೆ ದೂರು ಸಹಿತ ಮನವಿ ಸಲ್ಲಿಸಲಾಯಿತು.
ಹೃದಯಾಘಾತಕ್ಕೊಳಗಾಗಿದ್ದ ವ್ಯಕ್ತಿಯನ್ನು ಮುರುಡೇಶ್ವರದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ತಪಾಸಣೆಗೆ ಕೊರೆದೊಯ್ದಾಗ ಆ್ಪತ್ರೆಯ ವೈದ್ಯೆ ಡಾ. ಪ್ರಿಯಾ ಅವರು ರೋಗಿಯ ತಪಾಸಣೆಗೆ ಮುಂದಾಗದೇ ನಿರಾಕರಿಸಿದರು. ಅವರ ನಿರ್ಲಕ್ಷ್ಯದಿಂದ ಚಿಕಿತ್ಸೆ ಸಿಗದೇ ಉಕ್ಮಾರಾಮ್ ಬರೋನಾ ಅವರು ಮೃತಪಟ್ಟಿದ್ದಾರೆಂದು ಮೃತನ ಪುತ್ರ ಹಿತೇಶ ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ, ವ್ಶೆದ್ಯೆಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸಿಕೊಡಬೇಕೆಂದು ಸಹಾಯಕ ಆಯುಕ್ತರಿಗೆ ದೂರು ಸಹಿತ ಮನವಿ ಸಲ್ಲಿಸಿದರು.
ರಾಜಸ್ಥಾನ ಮೂಲದ ವ್ಯಕ್ತಿ, ಮುರುಡೇಶ್ವರದಲ್ಲಿ ಬೇಕರಿ ಉದ್ಯಮ ನಡೆಸುತ್ತಿದ್ದ ಉಕ್ಮಾರಾಮ್ ಬೋರಾನ್ (65) ಮೃತ ರೋಗಿ. ಸೋಮವಾರ ಬೆಳಗ್ಗೆ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾಗಿದ್ದ ಇವರು ಖಾಸಗಿ ಕ್ಲಿನಿಕ್ಗೆ ತೆರಳಿದ್ದರು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಮರಳುತ್ತಿರುವುವಾಗ ಮೂರ್ಛೆ ಹೋಗಿದ್ದಾರೆ. ನಂತರ ಅಲ್ಲಿಂದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಚಿಕಿತ್ಸೆ ನೀಡಲು ಅಲ್ಲಿನ ವೈದ್ಯರು ನಿರಾಕರಿಸಿದ್ದಾರೆ. ಅಲ್ಲದೆ ಇಲ್ಲಿಂದ ಕರೆದುಕೊಂಡು ಹೋಗದಿದ್ದರೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಓದಿ: ಬೇಕರಿ ಉದ್ಯಮಿ ಸಾವು... ಮುರುಡೇಶ್ವರ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ನಿರ್ಲಕ್ಷ್ಯ ಆರೋಪ
ಮುರುಡೇಶ್ವರ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆ ಡಾ. ಪ್ರಿಯಾ ಅವರು ಪ್ರಥಮ ಚಿಕಿತ್ಸೆ ಮಾಡಿದ್ದರೆ ನನ್ನ ತಂದೆ ಬದುಕುತ್ತಿದ್ದರು. ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ನಾನು ನನ್ನ ತಂದೆ ತಾಯಿಯೊಂದಿಗೆ ವಾಸವಿದ್ದೇನೆ. ನನ್ನ ತಂದೆಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದು, ಈಗ ಈ ವೈದ್ಯರ ನಿರ್ಲಕ್ಷ್ಯದಿಂದ ನನ್ನ ತಂದೆಯನ್ನು ಕಳೆದುಕೊಂಡು ಅನಾಥನಾಗಿದ್ದೇನೆ. ಹುಕ್ಕಾರಾಮ್ ಬರೋನಾ ಅವರ ಪುತ್ರ ಹಿತೇಶ ಕಣ್ಣೀರು ಹಾಕಿದ್ದಾರೆ.
ಡ್ಯೂಟಿ ವೈದ್ಯರಾಗಿದ್ದ ಡಾ. ಪ್ರಿಯಾ ಅವರ ಮೇಲೆ ಸಹಾಯಕ ಆಯುಕ್ತರು, ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡು ನನ್ನ ತಂದೆಯ ಸಾವಿಗೆ ನ್ಯಾಯ ಒದಗಿಸಬೇಕು ಮತ್ತು ಅವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ಹಿತೇಶ ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ.