ETV Bharat / state

ಭಟ್ಕಳದಲ್ಲಿ ಕೊರೊನಾ ತಂದ ಆತಂಕ... ಸ್ವಯಂಪ್ರೇರಿತ ಲಾಕ್​​ಡೌನ್​​ಗೆ ಒಳಗಾದ ಜನತೆ - Corona Latest News

ತಾಲೂಕಿನ ಮುರುಡೇಶ್ವರದಲ್ಲಿನ ವ್ಯಪಾರಸ್ಥರು ಮಧ್ಯಾಹ್ನ 2 ಗಂಟೆಯ ಬಳಿಕ ಅಂಗಡಿ ಮುಂಗಟ್ಟು ಬಂದ್​​​​ ಮಾಡುವ ನಿರ್ಧಾರಕ್ಕೆ ಬಂದಿದ್ದು, ಜಿಲ್ಲಾಡಳಿತಕ್ಕೆ ನೆರವಾಗಿದ್ದಾರೆ. ಈಗಾಗಲೇ ಪಟ್ಟಣದ ಜಾಲಿ ಹಾಗೂ ಹೇಬಳೆ ಭಾಗದಲ್ಲಿ 2 ಗಂಟೆಯ ಬಳಿಕ ಲಾಕ್​ಡೌನ್​ ಮಾಡಲು ಜಿಲ್ಲಾಡಳಿತ ಆದೇಶ ನೀಡಿತ್ತು.

People who have been voluntary lockdown in  Bhatkal in fear of corona
ಭಟ್ಕಳದಲ್ಲಿ ಕೊರೊನಾ ತಂದ ಆತಂಕ...ಸ್ವಯಂಪ್ರೇರಿತ ಲಾಕ್​​ಡೌನ್​​ಗೆ ಒಳಗಾದ ಜನತೆ
author img

By

Published : Jul 8, 2020, 6:45 PM IST

ಭಟ್ಕಳ (ಉ.ಕ): ತಾಲೂಕಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಭಟ್ಕಳ, ಜಾಲಿ ಹಾಗೂ ಹೇಬಳೆ ಭಾಗದಲ್ಲಿ ಮಧ್ಯಾಹ್ನ 2 ಗಂಟೆಯ ಬಳಿಕ ಲಾಕ್​ಡೌನ್​​​ ಮಾಡಲು ಆದೇಶ ನೀಡಲಾಗಿದೆ.

ಈ ನಡುವೆ ಮುರುಡೇಶ್ವರ ಹಾಗೂ ಶಿರಾಲಿಯಲ್ಲಿಯೂ ಜನತೆ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಬಂದ್ ಮಾಡಿ ಆಡಳಿತಕ್ಕೆ ನೆರವಾಗಿದ್ದಾರೆ.

ಭಟ್ಕಳದಲ್ಲಿ ಕೊರೊನಾ ತಂದ ಆತಂಕ... ಸ್ವಯಂಪ್ರೇರಿತ ಲಾಕ್​​ಡೌನ್​​ಗೆ ಒಳಗಾದ ಜನತೆ

ತಾಲೂಕಿನ ಮುರುಡೇಶ್ವರದಲ್ಲಿನ ಕಿರಾಣಿ ವ್ಯಾಪಾರಿಗಳು, ಮೊಬೈಲ್ ಶಾಪ್​​​ಗಳು, ತರಕಾರಿ ಅಂಗಡಿಗಳು ಹಾಗೂ ಸಣ್ಣಪುಟ್ಟ ಅಂಗಡಿದಾರರು ಬೆಳಗ್ಗೆ 6ರಿಂದ ಮದ್ಯಾಹ್ನ 2 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡಿ, ಕೆಲವು ದಿನಗಳವರೆಗೆ ಮದ್ಯಾಹ್ನ 2 ಗಂಟೆಯ ನಂತರ ವ್ಯವಹಾರವನ್ನು ಸ್ಥಗಿತಗೊಳಿಸಲು ಸ್ವಯಂಪ್ರೇರಣೆಯಿಂದ ನಿರ್ಧರಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಕಿರಾಣಿ ವ್ಯಾಪಾರಿ ರಾಘವೇಂದ್ರ ಗಾಯತೊಂಡೆ, ದಿನ ಕಳೆದಂತೆ ಕೊರೊನಾ ಮಹಾಮಾರಿ ಹೆಚ್ಚಾಗುತ್ತಿದ್ದು, ತಾಲೂಕಿನ ಪಟ್ಟಣ ಪ್ರದೇಶ, ಜಾಲಿ ಭಾಗದಲ್ಲಿ 2 ಗಂಟೆಯ ನಂತರ ವ್ಯಾಪಾರ ಬಂದ್ ಮಾಡಲಾಗಿದೆ. ಅದರಂತೆ ಮುರುಡೇಶ್ವರ ಭಾಗದ ವ್ಯಾಪಾರಿಗಳೆಲ್ಲರೂ ಸೇರಿ ಸ್ವಯಂಪ್ರೇರಿತರಾಗಿ ಮಧ್ಯಾಹ್ನ 2 ಗಂಟೆಯ ನಂತರ ಅಂಗಡಿಗಳನ್ನು ಮುಚ್ಚಲಿದ್ದೇವೆ ಎಂದರು.

ಇನ್ನೋರ್ವ ವ್ಯಾಪಾರಸ್ಥ ಶಂಕರ ನಾಯ್ಕ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚಾಗಿ ವ್ಯಾಪಿಸುತ್ತಿರುವ ಕೊರೊನಾ ಮಹಾಮಾರಿ ನಮ್ಮನ್ನು ಭಯಪಡಿಸುತ್ತಿದೆ. ಬೆಳಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮುರುಡೇಶ್ವರದಲ್ಲಿನ ಅಂಗಡಿ-ಮುಂಗಟ್ಟುಗಳು ತೆರೆದಿರುತ್ತವೆ. ನಂತರ ಸ್ವಯಂಪ್ರೇರಿತವಾಗಿ ಬಂದ್​​ ಮಾಡಲಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.