ETV Bharat / state

ಐಎಸ್​​ಡಿ ಕರೆ ಪರಿವರ್ತನೆ ಪ್ರಕರಣ: ಭಟ್ಕಳದಲ್ಲಿ ಓರ್ವನ ಬಂಧನ - One arrested for ISD call conversion case

ಐಎಸ್​​ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಯು ವಂಚಿಸುತ್ತಿದ್ದ ಭಟ್ಕಳ ಮೂಲದ ವ್ಯಕ್ತಿಯನ್ನು ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

Bhatkala
ಭಟ್ಕಳದಲ್ಲಿ ಓರ್ವನ ಬಂಧನ
author img

By

Published : Jun 14, 2021, 9:54 AM IST

ಭಟ್ಕಳ (ಉತ್ತರಕನ್ನಡ): ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತನೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಭಟ್ಕಳದಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಭಟ್ಕಳ ತಾಲೂಕಿನ ನವಾಯತ್ ಕಾಲೋನಿಯ ತಕಿಯಾ ಸ್ಟ್ರೀಟ್ ನಿವಾಸಿ ನಿಸಾರ್ ಮಹಮ್ಮದ್ ಮುಕ್ತೇಸರ ಬಂಧಿತ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ISD ಕರೆ ಪರಿವರ್ತನೆ ಪ್ರಕರಣ: 15 ಸಿಮ್ ಬಾಕ್ಸ್ ಸಮೇತ ನಾಲ್ವರ ಬಂಧನ

ಬೆಂಗಳೂರಿನ ಬಿಟಿಎಂ ಲೇಔಟ್​​​​​​​​​​ನಲ್ಲಿ ಜಾಲವೊಂದು ಅನಧಿಕೃತ ಟೆಲಿಫೋನ್ ಎಕ್ಸ್​​​ಚೇಂಜ್ ಮೂಲಕ ಐಎಸ್​​ಡಿ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಯು ವಂಚಿಸುತ್ತಿತ್ತು. ಈ ಸಂಬಂಧ ಇಬ್ರಾಹಿಂ ಮತ್ತು ಗೌತಮ್ ಎಂಬುವರನ್ನು ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅವರ ಬಂಧನವಾಗುತ್ತಿದ್ದಂತೆ ನಿಸಾರ್ ಬೆಂಗಳೂರಿನಿಂದ ಭಟ್ಕಳಕ್ಕೆ ಬಂದಿದ್ದ.

ಆರೋಪಿ ನಿಸಾರ್ ಒಂದೇ ಬಾರಿಗೆ 32 ಸಿಮ್ ಕಾರ್ಡ್​ಗಳನ್ನು ಬಳಸುವ ಸಿಮ್ ಬಾಕ್ಸ್ ಹೊಂದಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಐಎಸ್​​ಡಿ ಕರೆ ಪರಿವರ್ತನೆ ಪ್ರಕರಣ: ಮಾಹಿತಿ ಪಡೆದ ರಾಷ್ಟ್ರೀಯ ತನಿಖಾ ಸಂಸ್ಥೆಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.