ಕಾರವಾರ: ಓಮಿನಿ ಹಾಗೂ ಮೀನಿನ ಪಿಕ್ಅಪ್ ವಾಹನ ಡಿಕ್ಕಿಯಾಗಿ ಮದುವೆ ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದ ಐವರು ಗಾಯಗೊಂಡಿರುವ ಘಟನೆ ಕಾರವಾರ ತಾಲೂಕಿನ ಚಿತ್ತಾಕುಲದಲ್ಲಿ ನಡೆದಿದೆ.
ಗಾಯಗೊಂಡವರನ್ನು ಕುಮಟಾ ತಾಲೂಕಿನ ಹೆರವಟ್ಟಾದವರು ಎಂದು ಗುರುತಿಸಲಾಗಿದೆ. ಒಟ್ಟು ಎರಡು ಓಮಿನಿ ಹಾಗೂ ಒಂದು ಕಾರಿನ ಮೂಲಕ ಗೋವಾದ ಕಾಣಕೋಣಕ್ಕೆ ಮದುವೆ ನಿಶ್ಚಿತಾರ್ಥಕ್ಕೆ ಹೊರಟಿದ್ದರು. ಆದರೆ ಚಿತ್ತಾಕುಲ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಮಿನಿ ಹಾಗೂ ಪಿಕ್ಅಪ್ ವಾಹನ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು, ಓಮಿನಿಯಲ್ಲಿದ್ದ ಮಗು ಸೇರಿ ಆರು ಜನರ ಪೈಕಿ ಐವರು ಗಾಯಗೊಂಡಿದ್ದಾರೆ. ಓರ್ವನ ಸ್ಥಿತಿ ಗಂಭಿರವಾಗಿದೆ.
ತಕ್ಷಣ ಎಲ್ಲ ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದ ರಭಸಕ್ಕೆ ಹೊಸ ಓಮಿನಿ ನುಜ್ಜುಗುಜ್ಜಾಗಿದೆ. ಇನ್ನು ಸ್ಥಳಕ್ಕೆ ಭೇಟಿ ನೀಡಿರುವ ಚಿತ್ತಾಕುಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.