ಭಟ್ಕಳ (ಉತ್ತರ ಕನ್ನಡ): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸತತ 9ನೇ ಬಾರಿಗೆ ಗೆಲುವು ಸಾಧಿಸುವಲ್ಲಿ ವ್ಯಕ್ತಿಯೊಬ್ಬರು ಯಶಸ್ವಿಯಾಗಿದ್ದು, ಇವರ ಗೆಲುವು ಇತಿಹಾಸ ಸೃಷ್ಟಿಸಿದೆ.
ಭಟ್ಕಳ ತಾಲೂಕಿನ ಬೆಂಗ್ರೆ ಪಂಚಾಯಿತಿಯ ಹೆದ್ದಾರಿಮನೆಯ ವೆಂಕ್ಟಯ್ಯ ಬೈರುಮನೆ 9ನೇ ಬಾರಿ ಚುನಾವಣೆಯಲ್ಲಿ ಗೆದ್ದ ವ್ಯಕ್ತಿಯಾಗಿದ್ದು, ತಮ್ಮ 25ನೇ ವಯಸ್ಸಿನಲ್ಲಿ ಪ್ರಥಮ ಬಾರಿಗೆ 1978ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪ್ರಣವಾನಂದ ಸ್ವಾಮೀಜಿ
1978ರಿಂದ ಇಲ್ಲಿಯವರೆಗೆ ಸತತವಾಗಿ ಗೆಲ್ಲುತ್ತಿರುವ ಅವರು ಒಂದು ಬಾರಿ ಸರಪಂಚ್ ಆಗಿ ಆಯ್ಕೆಯಾಗಿದ್ದು, ಮೂರು ಬಾರಿ ಅಧ್ಯಕ್ಷರಾಗಿಯೂ ಆಯ್ಕೆಯಾಗಿದ್ದಾರೆ.