ETV Bharat / state

ಕೋವಿಡ್​ ಕುರಿತ ನನ್ನ ಪ್ರಶ್ನೆಗೆ ಇನ್ನೂ ಸಮರ್ಪಕ ಉತ್ತರ ಬಂದಿಲ್ಲ: ಅನಂತ ಕುಮಾರ ಹೆಗಡೆ

ಕೋವಿಡ್​ ಫ್ಲ್ಯೂ ಜ್ವರದಂತೆಯೇ ಇದ್ದು, ಇದಕ್ಕೆ ನಮ್ಮಲ್ಲಿನ ದೇಶಿಯ ಔಷಧಿಯೇ ಸಾಕಿದೆ. ಅದನ್ನು ದಿನನಿತ್ಯವೂ ನಾವು ಸೇವನೆ ಮಾಡಿದರೆ ಅದರಿಂದಲೇ ಕೊರೊನಾ ವಾಸಿಯಾಗಲಿದೆ ಎಂದರು.

author img

By

Published : Aug 10, 2020, 4:51 PM IST

ಸಂಸದ ಅನಂತ ಕುಮಾರ ಹೆಗಡೆ  ಹೇಳಿಕೆ
ಸಂಸದ ಅನಂತ ಕುಮಾರ ಹೆಗಡೆ ಹೇಳಿಕೆ

ಭಟ್ಕಳ: ಕೊರೊನಾ ಕುರಿತ ಬಹುತೇಕ ನನ್ನೆಲ್ಲ ಪ್ರಶ್ನೆಗೆಳಿಗೆ ಈತನಕ ಯಾವುದೇ ಸಮರ್ಪಕ ಉತ್ತರ ಲ್ಯಾಬ್ ಅಥವಾ ಇನ್ನಾವುದೇ ವಿಜ್ಞಾನಿಗಳಿಂದ ಬಂದಿಲ್ಲ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದರು.

ಸಂಸದ ಅನಂತ ಕುಮಾರ ಹೆಗಡೆ ಹೇಳಿಕೆ

ಮಣ್ಕುಳಿಯಲ್ಲಿ ಬಿಜೆಪಿ ನೂತನ ಕಚೇರಿಯ ಕಾರ್ಯಾಲಯವನ್ನು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು, ಈ ಕೊರೊನಾದಿಂದಾಗಿ ಆರ್ಥಿಕ ಚಟುವಟಿಕೆಗಳು ಸತ್ತು ಹೋಗಿವೆ. ಮೊದಲ ಹಂತದಲ್ಲಿ ಇದರ ಬಗ್ಗೆ ಸರ್ಕಾರಕ್ಕೂ ಅಂದಾಜುಗಳಿಲ್ಲದ ಕಾರಣ ಲಾಕ್​ಡೌನ್​ ಸೇರಿದಂತೆ ಸಾಕಷ್ಟು ಪ್ರಯತ್ನವನ್ನು ಮಾಡಿದರು. ತದನಂತರದಲ್ಲಿ ಇದರ ನಿಖರತೆ ಅರಿತಿದ್ದೇವೆ. ಇದೊಂದು ಫ್ಲೂ ಜ್ವರದಂತೆಯೇ ಇದ್ದು, ಇದಕ್ಕೆ ನಮ್ಮಲ್ಲಿನ ದೇಶಿಯ ಔಷಧಿಯೇ ಸಾಕಿದೆ. ಅದನ್ನು ದಿನನಿತ್ಯವೂ ನಾವು ಸೇವನೆ ಮಾಡಿದರೆ ಅದರಿಂದಲೇ ಕೊರೊನಾ ವಾಸಿಯಾಗಲಿದೆ ಎಂದರು.

ಮುಂದಿನ ದಿನದಲ್ಲಿ ನಮ್ಮ ಪಕ್ಕದ ಮನೆ ಸೇರಿದಂತೆ ಎಲ್ಲೆಡೆ ಕೊರೊನಾ ವ್ಯಾಪಿಸಲಿದೆ. ಮಾನಸಿಕವಾಗಿ ನಾವು ದೃಢವಾಗಬೇಕಿದೆ. ಆದರೆ ಈ ಫಾರ್ಮಾಸಿಟಿಕಲ್ ಅವರು ಹಣ ಮಾಡುವ ಲಾಬಿಯಿಂದ ಜನರಲ್ಲಿ ಭೂತ ಎಬ್ಬಿಸುವ ಕೆಲಸ ಮಾಡಿದ್ದಾರೆ. ಕೇವಲ 1.5-2 ಪ್ರತಿಶತ ಕೊರೊನಾದಿಂದ ಸಾವಾಗಿದೆ. ಮುಖ್ಯವಾಗಿ ಜನರು ಸಾಮಾಜಿಕ ಸ್ವಾಸ್ಥ್ಯ, ಸಾಮಾಜಿಕ ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ಬದುಕಬೇಕು ಎಂದು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.