ETV Bharat / state

ವಾಡಿಕೆಗಿಂತ ಅಧಿಕ ಮಳೆ; ಅಪಾರ ಪ್ರಮಾಣದ ಬೆಳೆ ಹಾನಿ - varada river

ಈಚೆಗಿನ ವರ್ಷಗಳಲ್ಲೇ ಅತೀ ಹೆಚ್ಚು ಮಳೆ ಆದ ಕಾರಣ ಬೆಳೆಗಳೆಲ್ಲ ಮಳೆಗೆ ಆಹುತಿಯಾಗಿವೆ. ಭತ್ತದ ಗದ್ದೆಗಳೆಲ್ಲಾ ನೀರಿನಿಂದ ಮುಳುಗಿವೆ. ಸರ್ಕಾರ ಮಾತ್ರ ಪರಿಹಾರ ನೀಡುವಲ್ಲಿ ಆಸಕ್ತಿ ತೋರುಸುತ್ತಿಲ್ಲ ಎಂದು ಕೃಷಿಕರು ಚಿಂತೆಗೀಡಾಗಿದ್ದಾರೆ.

ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
author img

By

Published : Aug 30, 2019, 11:17 PM IST

ಶಿರಸಿ: ಆಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಶಿರಸಿ ಉಪವಿಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಗಳಿಗೆ ಹಾನಿಯಾಗಿದ್ದು, ಸುಮಾರು 4079.28 ಹೇಕ್ಟೇರ್ ಪ್ರದೇಶಗಳ ನಷ್ಟದಿಂದಾಗಿ 20.45 ಕೋಟಿ ಪರಿಹಾರ ವಿತರಿಸಬೇಕಾಗಿದೆ.

ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಶಿರಸಿ ಉಪವಿಭಾಗದಲ್ಲಿ 4092.58 ಹೆಕ್ಟೇರ್ ಪ್ರದೇಶ ಮಳೆಯಿಂದ ಹಾನಿಗೀಡಾಗಿದ್ದು, ಅದರಲ್ಲಿ 4079.28 ಹೆಕ್ಟೇರ್ ಪ್ರದೇಶ ಪರಿಹಾರ ವಿತರಿಸಲು ಅರ್ಹವಾಗಿದೆ. ಅವುಗಳಲ್ಲಿ 49.6 ಹೆಕ್ಟೇರ್ ಪ್ರದೇಶಕ್ಕೆ 6.13 ಲಕ್ಷ ರೂ. ಹಣವನ್ನು ಮಂಜೂರು ಮಾಡಲಾಗಿದ್ದು,13.27 ಹೆಕ್ಟೇರ್ ಪ್ರದೇಶವನ್ನು ಪರಿಹಾರ ವಿತರಣೆಯಿಂದ ತಿರಸ್ಕರಿಸಲಾಗಿದೆ.

ಉಪವಿಭಾಗದ ಮುಂಡಗೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, 2128 ಹೆಕ್ಟೇರ್ ಪ್ರದೇಶದಿಂದ 91.6 ಲಕ್ಷ ರೂ ಪರಿಹಾರ ನೀಡಬೇಕಿದೆ. ಅದೇ ರೀತಿ ಸಿದ್ದಾಪುರದಲ್ಲಿ 1471.38 ಹೆಕ್ಟೇರ್ ಪ್ರದೇಶದಿಂದ 100.04 ಲಕ್ಷ, ಶಿರಸಿಯಲ್ಲಿ 34.3 ಹೆಕ್ಟೇರ್ ಪ್ರದೇಶದಿಂದ 4.1ಲಕ್ಷ ಹಾಗೂ ಯಲ್ಲಾಪುರದಲ್ಲಿ 445 ಹೆಕ್ಟೇರ್ ಪ್ರದೇಶದಿಂದ 1808.08 ಲಕ್ಷ ರೂ.ಪರಿಹಾರ ವಿತರಿಸಬೇಕಾಗಿದೆ.

ಮುಂಡಗೋಡಿನಲ್ಲಿ ಅತಿ ಹೆಚ್ಚಿನ ಕೃಷಿ ಭೂಮಿಗೆ ಹಾನಿಯಾಗಿದ್ದು, ಯಲ್ಲಾಪುರದಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಮುಂಡಗೋಡಿನಲ್ಲಿ 15.44 ಹೆಕ್ಟೇರ್ ಪ್ರದೇಶದಿಂದ 2.19 ಲಕ್ಷ, ಶಿರಸಿಯಲ್ಲಿ 34.16 ಹೆಕ್ಟೇರ್ ಪ್ರದೇಶದಿಂದ 3.94 ಲಕ್ಷ ರೂ. ವಿತರಿಸಲಾಗಿದ್ದು, ಶಿರಸಿಯಲ್ಲಿ 11.43 ಹೆಕ್ಟೇರ್ ಹಾಗೂ ಮುಂಡಗೋಡಿನಲ್ಲಿ 1.84 ಹೆಕ್ಟೇರ್ ಪ್ರದೇಶವನ್ನು ಪರಿಹಾರಕ್ಕೆ ಅರ್ಹವಾಗಿಲ್ಲ ಎಂದು ತಿರಸ್ಕರಿಸಲಾಗಿದೆ. ಇನ್ನು ಸಂಪೂರ್ಣ ಹಾನಿಯ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಷ್ಟದ ಸಂಖ್ಯೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ವರದಾ ನದಿಯ ನೀರಿನಿಂದ ಅಪಾರ ಪ್ರಮಾಣದಲ್ಲಿ ಭತ್ತ, ಜೋಳ, ಅಡಿಕೆ ತೋಟಗಳಿಗೆ ಹಾನಿಯಾಗಿದ್ದು, ನಾಟಿ ಮಾಡಿದ್ದ ಭತ್ತ ಕೊಳೆತು ಹೋಗಿದೆ. ಇನ್ನು ಬೇಡ್ತಿ ನದಿಯಿಂದ ಉಂಟಾದ ಪ್ರವಾಹದಿಂದ ಯಲ್ಲಾಪುರ ಭಾಗದ ತೋಟಗಳು ಸಂಪೂರ್ಣ ಹಾನಿಯಾಗಿದ್ದು, ಕೆಜಿ ಗಟ್ಟಲೆ ಮಣ್ಣು ತೋಟದಲ್ಲಿ ನಿಂತಿದೆ. ಅದೇ ರೀತಿ ಮುಂಡಗೋಡಿನಲ್ಲಿ ಚಿಗಳ್ಳಿ ಡ್ಯಾಂ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸಿದ್ದಾಪುರದ ಅಕ್ಕುಂಜಿ ಭಾಗದಲ್ಲಿ ಭತ್ತದ ಗದ್ದೆಗಳಿಗೆ ಹಾನಿಯಾಗಿದೆ.

ರಾಜ್ಯ ಸರ್ಕಾರ ಕೇವಲ 10 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಇದನ್ನು ಪ್ರವಾಹದಲ್ಲಿ ಮೃತಪಟ್ಟವರ ಮನೆಗಳಿಗೆ, ಮನೆ ಬಿದ್ದ ಕಡೆಗಳಲ್ಲಿ ವಿತರಣೆ ಮಾಡಲಾಗುತ್ತಿದೆ.‌ ಕೃಷಿ ಹಾನಿಯ ಪ್ರಮಾಣ ದೊಡ್ಡದಿದ್ದು, ಶೀಘ್ರವೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಆ ಭಾಗದ ಕೃಷಿಕರು ಆಗ್ರಹಿಸಿದ್ದಾರೆ. ‌

Intro:ಶಿರಸಿ :
ಅಗಸ್ಟ್ ಮೊದಲ ವಾರದಲ್ಲಿ ಸುರಿದ ಭಾರೀ ಮಳೆಗೆ ಶಿರಸಿ ಉಪವಿಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಕೃಷಿ ಹಾನಿಯಾಗಿದ್ದು, ಸುಮಾರು ೪೦೭೯.೨೮ ಹೇಕ್ಟೇರ್ ಪ್ರದೇಶಗಳ ನಷ್ಟದಿಂದಾಗಿ ೨೦೦೪.೫೪ ಲಕ್ಷ ( ೨೦.೪೫ ಕೋಟಿ) ಪರಿಹಾರ ವಿತರಿಸಬೇಕಾಗಿದೆ.

ಶಿರಸಿ ಉಪವಿಭಾಗದಲ್ಲಿ ೪೦೯೨.೫೮ ಹೆಕ್ಟೇರ್ ಪ್ರದೇಶ ಹಾನಿಗೀಡಾಗಿದ್ದು, ಅದರಲ್ಲಿ ೪೦೭೯.೨೮ ಹೆಕ್ಟೇರ್ ಪ್ರದೇಶ ಪರಿಹಾರ ವಿತರಿಸಲು ಅರ್ಹವಾಗಿದೆ. ಅವುಗಳಲ್ಲಿ ೪೯.೬ ಹೆಕ್ಟೇರ್ ಪ್ರದೇಶಕ್ಕೆ ೬.೧೩ ಲಕ್ಷ ರೂ. ಹಣವನ್ನು ಮಂಜೂರಿ ಮಾಡಲಾಗಿದ್ದು, ೧೩.೨೭ ಹೆಕ್ಟೇರ್ ಪ್ರದೇಶವನ್ನು ತಿರಸ್ಕರಿಸಲಾಗಿದೆ.

ಉಪವಿಭಾಗದ ಮುಂಡಗೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದ್ದು, ೨೧೨೮.೬ ಹೆಕ್ಟೇರ್ ಪ್ರದೇಶದಿಂದ ೯೧.೬ ಲಕ್ಷ ರೂ ಪರಿಹಾರ ನೀಡಬೇಕಿದೆ. ಅದೇ ರೀತಿ ಸಿದ್ದಾಪುರದಲ್ಲಿ ೧೪೭೧.೩೮ ಹೆಕ್ಟೇರ್ ಪ್ರದೇಶದಿಂದ ೧೦೦.೦೪ ಲಕ್ಷ, ಶಿರಸಿಯಲ್ಲಿ ೩೪.೩ ಹೆಕ್ಟೇರ್ ಪ್ರದೇಶದಿಂದ ೪.೧ ಲಕ್ಷ ಹಾಗೂ ಯಲ್ಲಾಪುರದಲ್ಲಿ ೪೪೫ ಹೆಕ್ಟೇರ್ ಪ್ರದೇಶದಿಂದ ೧೮೦೮.೮ ಲಕ್ಷ ರೂ. ವಿತರಿಸಬೇಕಾಗಿದೆ.

ಮುಂಡಗೋಡಿನಲ್ಲಿ ಅತಿ ಹೆಚ್ಚಿನ ಕ್ಷೇತ್ರಕ್ಕೆ ಹಾನಿಯಾಗಿದ್ದು, ಯಲ್ಲಾಪುರದಲ್ಲಿ ಹೆಚ್ಚಿನ ನಷ್ಟ ಉಂಟಾಗಿದೆ. ಮುಂಡಗೋಡಿನಲ್ಲಿ ೧೫.೪೪ ಹೆಕ್ಟೇರ್ ಪ್ರದೇಶದಿಂದ ೨.೧೯ ಲಕ್ಷ, ಶಿರಸಿಯಲ್ಲಿ ೩೪.೧೬ ಹೆಕ್ಟೇರ್ ಪ್ರದೇಶದಿಂದ ೩.೯೪ ಲಕ್ಷ ರೂ. ವಿತರಿಸಲಾಗಿದ್ದು, ಶಿರಸಿಯಲ್ಲಿ ೧೧.೪೩ ಹೆಕ್ಟೇರ್ ಹಾಗೂ ಮುಂಡಗೋಡಿನಲ್ಲಿ ೧.೮೪ ಹೆಕ್ಟೇರ್ ಪ್ರದೇಶವನ್ನು ಪರಿಹಾರಕ್ಕೆ ಅರ್ಹತೆಯಿಲ್ಲ ಎಂದು ತಿರಸ್ಕರಿಸಲಾಗಿದೆ. ಇನ್ನು ಸಂಪೂರ್ಣ ಹಾನಿಯ ಕುರಿತು ಸಮೀಕ್ಷೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ನಷ್ಟದ ಸಂಖ್ಯೆ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.‌

ವರದಾ ನದಿಯ ನೀರಿನಿಂದ ಅಪಾರ ಪ್ರಮಾಣದಲ್ಲಿ ಭತ್ತ, ಜೋಳ, ಅಡಿಕೆ ತೋಟಗಳಿಗೆ ಹಾನಿಯಾಗಿದ್ದು, ನೆಟ್ಟಿ ಮಾಡಿದ್ದ ಭತ್ತ ಕೊಳೆತು ಹೋಗಿದೆ. ಇನ್ನು ಬೇಡ್ತಿ Body:ನದಿಯಿಂದ ಯಲ್ಲಾಪುರ ಭಾಗದ ತೋಟಗಳು ಸಂಪೂರ್ಣ ಹಾನಿಯಾಗಿದ್ದು, ಕೆಜಿ ಗಟ್ಟಲೆ ಮಣ್ಣು ತೋಟದಲ್ಲಿ ನಿಂತಿದೆ. ಅದೇ ರೀತಿ ಮುಂಡಗೋಡಿನಲ್ಲಿ ಚಿಗಳ್ಳಿ ಡ್ಯಾಂ ಒಡೆದು ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸಿದ್ದಾಪುರದ ಅಕ್ಕುಂಜಿ ಭಾಗದಲ್ಲಿ ಭತ್ತದ ಕ್ಷೇತ್ರಗಳಿಗೆ ಹಾನಿಯಾಗಿದೆ.

ರಾಜ್ಯ ಸರ್ಕಾರ ಕೇವಲ ೧೦ ಕೋಟಿ ರೂ. ಮಾತ್ರ ಬಿಡುಗಡೆ ಮಾಡಿದ್ದು, ಇದನ್ನು ಪ್ರವಾಹದಲ್ಲಿ ಮೃತಪಟ್ಟವರ ಮನೆಗಳಿಗೆ, ಮನೆ ಬಿದ್ದ ಕಡೆಗಳಲ್ಲಿ ನೀಡಲಾಗುತ್ತಿದೆ.‌ ಕೃಷಿ ಹಾನಿಯ ಪ್ರಮಾಣ ದೊಡ್ಡದಿದ್ದು, ಶೀಘ್ರವೇ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ. ‌
...........
ಸಂದೇಶ ಭಟ್ ಶಿರಸಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.