ಶಿರಸಿ : 17 ವರ್ಷದ ಬಾಲಕಿಯೋರ್ವಳ ಮೇಲೆ ಸಂಬಂಧಿ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ಶಿರಸಿಯ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈಗಾಗಲೇ ಆರೋಪಿ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೊನ್ನಾವರದ ಹಳದೀಪುರದ ಅರುಣ ಶಿವು ಮುಕ್ರಿ ಎಂಬಾತ ಅತ್ಯಾಚಾರವೆಸಗಿರುವ ಆರೋಪಿ. ತನ್ನ ಸಂಬಂಧಿಕರೊಬ್ಬರ ಮಗಳ ಮೇಲೆ ಪುಸಲಾಯಿಸಿ ದೈಹಿಕ ಸಂಬಂಧ ಬೆಳೆಸಿದ್ದಾನೆ. ಈ ವಿಷಯ ಬಾಲಕಿಯಿಂದ ತಿಳಿದ ಮನೆಯವರು ಮದುವೆಗೂ ಸಹ ಒಪ್ಪಿದ್ದರೆನ್ನಲಾಗಿದೆ. ಈ ನಡುವೆ ಬಾಲಕಿ ಗರ್ಭಿಣಿಯಾಗಿದ್ದು, ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಆರೋಪಿ ವಿರುದ್ಧ ಪೊಕ್ಸೋ ಕಾಯ್ದೆಯಡಿ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.