ETV Bharat / state

ದೇಶವಿರೋಧಿ ಚಟುವಟಿಕೆ ನಡೆಸುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ: ಸಚಿವ ಹೆಬ್ಬಾರ್

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗುವ ಎಲ್ಲ ಸಂಘಟನೆಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು. ಯಾರು ದೇಶ ವಿರೋಧಿ ಚಟುವಟಿಕೆ ನಡೆಸುತ್ತಾರೋ ಅಂತಹವರ ಪರವಾಗಿ ನಿಲ್ಲಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್​ ಹೆಬ್ಬಾರ್​ ಹೇಳಿದ್ದಾರೆ.

minister-shivaram-hebbar-statement-on-pfi-ban
ದೇಶವಿರೋಧಿ ಚಟುವಟಿಕೆ ನಡೆಸುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ: ಸಚಿವ ಹೆಬ್ಬಾರ್
author img

By

Published : Sep 28, 2022, 3:15 PM IST

ಕಾರವಾರ (ಉತ್ತರಕನ್ನಡ): ದೇಶದ ಹಿತದೃಷ್ಟಿಯ ಪ್ರಶ್ನೆ ಬಂದಾಗ ಪಿಎಫ್ಐ ಮಾತ್ರವಲ್ಲ ದೇಶವಿರೋಧಿ ಚಟುವಟಿಕೆ ನಡೆಸುವ ಎಲ್ಲ ಸಂಘಟನೆಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾವೆಲ್ಲ ಸಂಘಟನೆಗಳು ದೇಶ ವಿರೋಧಿ ಕೆಲಸಗಳಿಗೆ ಕೈ ಹಾಕುತ್ತವೆಯೋ ಅಂತಹ ಸಂಘಟನೆಗಳ ಯಾವುದೇ ಜಾತಿ, ಧರ್ಮ ನೋಡಲ್ಲ. ಈ ಬಗ್ಗೆ ಸರ್ಕಾರ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುತ್ತದೆ ಎಂದರು.

ದೇಶವಿರೋಧಿ ಚಟುವಟಿಕೆ ನಡೆಸುವ ಎಲ್ಲ ಸಂಘಟನೆಗಳ ವಿರುದ್ಧ ಕ್ರಮ: ಸಚಿವ ಹೆಬ್ಬಾರ್

ಯಾರು ದೇಶ ವಿರೋಧಿ ಚಟುವಟಿಕೆ ನಡೆಸುತ್ತಾರೋ ಅಂತವರ ಪರವಾಗಿ ನಿಲ್ಲಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಸರಿಯಾದ ದಿಕ್ಕಿನಲ್ಲಿ ಈ ಕಾರ್ಯಾಚರಣೆ ನಡೆಯುತ್ತದೆ. ಪಿಎಫ್ಐ ಬ್ಯಾನ್ ವಿರೋಧಿಸಿ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ಬಗ್ಗೆ, ಅದು ಅವರ ಹಕ್ಕು, ದೇಶ ರಕ್ಷಣೆ ನಮ್ಮ ಹಕ್ಕು ಎಂದು ಸಚಿವ ಶಿವರಾಮ ಹೆಬ್ಬಾರ್ ಪ್ರತಿಕ್ರಿಯಿಸಿದರು.

ಇದನ್ನೂ ಓದಿ : ಸಿದ್ದರಾಮಯ್ಯ ಏನೇ ಘಟನೆ ಆದರೂ ಆರ್​ಎಸ್​ಎಸ್​ಗೆ ಲಿಂಕ್ ಮಾಡುತ್ತಾರೆ: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.