ETV Bharat / state

ಕೊರೊನಾ ವಿರುದ್ಧದ ಸಮರದಲ್ಲಿ ಕಾರ್ಮಿಕರಿಗೆ ರಾಜ್ಯ ಸರ್ಕಾರದ ಪರಿಹಾರ!

author img

By

Published : Mar 27, 2020, 8:50 PM IST

* ರೆಡ್ ಕ್ರಾಸ್‌ಗಳಿಗೆ ₹40 ಲಕ್ಷ * ಸ್ಯಾನಿಟೈಸರ್-ಮಾಸ್ಕ್‌ಗಾಗಿ ಪ್ರತಿ ಜಿಲ್ಲೆಗೆ ₹5.50 ಕೋಟಿ * 21 ಲಕ್ಷ ಕಟ್ಟಡ ಕಾರ್ಮಿಕರಿಗೆ ₹1000ನಂತೆ 210 ಕೋಟಿ‌ ಅನುದಾನ * ಕಾರ್ಮಿಕರಿಗೆ ಆಹಾರಕ್ಕಾಗಿ ₹15 ಲಕ್ಷ ಬಿಡುಗಡೆ

dsdd
ಕೊರೊನಾ ತಡೆಗಟ್ಟಲು ಸ್ವಯಂ ಪ್ರೇರಿತರಾಗಿ ಮನೆಯಲ್ಲಿರಬೇಕು:ಸಚಿವ ಹೆಬ್ಬಾರ್​ ಮನವಿ

ಶಿರಸಿ : ಕೊರೊನಾ ವೈರಸ್ ತಡೆಗೆ 21 ದಿನಗಳ ಕಾಲ‌ ಜನ ತಮಗೆ ತಾವೇ ಕಡಿವಾಣ ಹಾಕಿಕೊಂಡು ಮನೆಯಲ್ಲಿರಬೇಕು ಎಂದು ರಾಜ್ಯ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.

ವಿಡಿಯೋ ಮೂಲಕ ಸಂದೇಶ ನೀಡಿರುವ ಅವರು, ರೆಡ್ ಕ್ರಾಸ್‌ಗಳಿಗೆ 40 ಲಕ್ಷ ರೂ. ಹಣ ನೀಡಿ ಸಿದ್ಧತೆ ಮಾಡಲಾಗುತ್ತಿದೆ. ಸ್ಯಾನಿಟೈಸರ್ ಹಾಗೂ ಮಾಸ್ಕ್‌ಗಾಗಿ ಪ್ರತಿ ಜಿಲ್ಲೆಗೆ ಐದೂವರೆ ಕೋಟಿ ರೂ. ನೀಡುವ ವ್ಯವಸ್ಥೆ ಮಾಡಲಾಗಿದೆ. ಕಾರ್ಮಿಕ ಇಲಾಖೆಯಿಂದ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ. 21 ಲಕ್ಷ ಕಟ್ಟಡ ಕಾರ್ಮಿಕರಿಗೆ 1000ರೂ.ನಂತೆ 210 ಕೋಟಿ‌ ರೂ. ಹಣ ನೀಡಲು ಪ್ರಾರಂಭಿಸಿದ್ದೇವೆ. ಕಾರ್ಮಿಕರಿಗೆ ನೀಡುವ 15 ಲಕ್ಷ ಊಟದ ಹಣವನ್ನು ಕಾರ್ಮಿಕ ಇಲಾಖೆಯಿಂದ ಭರಿಸಲಾಗುವುದು. ಕಾರ್ಮಿಕರಿಗೆ ಯಾವುದೇ ಸಮಸ್ಯೆಯಿದ್ದರೆ 24 x7 155244 ನಂಬರ್‌ಗೆ ಕರೆ ಮಾಡಬಹುದು.

ಕಾರ್ಮಿಕರಿಗೆ ನೀಡುವ ರಜೆಯನ್ನು ಸಂಬಳ ಸಮೇತ ನೀಡಬೇಕು ಎಂದು ಕಟ್ಟಡ ಮಾಲೀಕರಿಗೆ ಆದೇಶಿಸಲಾಗಿದೆ. ಯಾವುದೇ ಕಾರಣಕ್ಕೂ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತಿಲ್ಲ. ಕಾಫಿ ತೋಟಗಳ ಕಾರ್ಮಿಕರಿಗೂ ಈ ಸೌಲಭ್ಯ ದೊರಕುವಂತೆ ಆದೇಶಿಸಲಾಗಿದೆ. ಸಂಘಟಿತ, ಅಸಂಘಟಿಕ ಕಾರ್ಮಿಕರ ಹಿತಕ್ಕಾಗಿ ಈ ನಿಯಮ ಜಾರಿಗೆ ತರಲಾಗಿದೆ. ನಿಯಮ ಮೀರಿ ಕೆಲಸ ಮಾಡಿಸಿ ಕಾರ್ಮಿಕರಿಗೆ ತೊಂದರೆ ಕೊಟ್ಟರೆ ಮಾಲೀಕರಿಗೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಸಚಿವ ಹೆಬ್ಬಾರ್​ ಎಚ್ಚರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.