ಕಾರವಾರ: ಹಾಲು ತುಂಬಿದ್ದ ಟ್ಯಾಂಕರ್ ಬ್ರೇಕ್ ಫೇಲ್ ಆದ ಕಾರಣ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದ ಬಳಿ ನಡೆಯಿತು. ತಮಿಳುನಾಡು ಮೂಲದ ಟ್ಯಾಂಕರ್ ಇದಾಗಿದ್ದು, ಮಹಾರಾಷ್ಟ್ರದ ಕೊಲ್ಲಾಪುರದಿಂದ ಕೇರಳಕ್ಕೆ ಸುಮಾರು 20,000 ಲೀಟರ್ ಹಾಲು ತುಂಬಿಕೊಂಡು ಸಾಗುತ್ತಿತ್ತು. ಟ್ಯಾಂಕರ್ ಯು ಟರ್ನ್ ತೆಗೆದುಕೊಳ್ಳುವ ವೇಳೆ ರಸ್ತೆ ಮೇಲೆ ಬಿದ್ದಿದೆ. ಟ್ಯಾಂಕರ್ ಪಲ್ಟಿಯಾದ ಹೊಡೆತಕ್ಕೆ ಟ್ಯಾಂಕರ್ನಲ್ಲಿ ರಂಧ್ರವಾಗಿ ಹಾಲು ಸಂಪೂರ್ಣ ಹೊರ ಸೋರಿಕೆಯಾಗಿದೆ.
ಇದರಿಂದ ಟ್ಯಾಂಕರ್ನಲ್ಲಿದ್ದ ಸಾವಿರಾರು ಲೀಟರ್ ಹಾಲು ರಸ್ತೆ ಪಾಲಾಗಿದ್ದು, ಸೋರಿಕೆಯಾಗುತ್ತಿದ್ದ ಹಾಲನ್ನು ವಾಹನ ಸವಾರರು, ಪ್ರಯಾಣಿಕರು ನಾ ಮುಂದೆ ತಾ ಮುಂದೆ ಎಂಬಂತೆ ಬಾಟಲಿ, ಬಕೆಟ್, ಡಬ್ಬಿಗಳಿಂದ ತುಂಬಿಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂತು. ಸಾವಿರಾರು ಲೀಟರ್ ಹಾಲು ಕ್ಷಣಾರ್ಧದಲ್ಲಿ ಟ್ಯಾಂಕರ್ನಿಂದ ಸಂಪೂರ್ಣ ಸೋರಿಕೆಯಾಗಿ ಘಟ್ಟದ ಇಳಿಜಾರಿನ ತುಂಬೆಲ್ಲಾ ಹಳ್ಳವಾಗಿ ಹರಿಯಿತು. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.
ಇದನ್ನೂ ಓದಿ: ಚಾಮರಾಜನಗರ: ಪಿಕ್ ಅಪ್-ಟ್ಯಾಂಕರ್ ನಡುವೆ ಡಿಕ್ಕಿ; ಇಬ್ಬರು ಸಾವು