ಭಟ್ಕಳ: ತಾಲೂಕಿನ ಜಾಲಿ ಬೀಚ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
![marijuana case in uttara kannada](https://etvbharatimages.akamaized.net/etvbharat/prod-images/kn-bkl-01-four-arrested-for-selling-marijuana-kac-10002_15092020201610_1509f_1600181170_920.jpg)
ಆರೋಪಿಗಳು ಮಂಗಳವಾರ ಭಟ್ಕಳದ ಜಾಲಿ ಬೀಚ್ ರಸ್ತೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಮಾರು 250 ಗ್ರಾಂ ಗಾಂಜಾ ಇರಿಸಿಕೊಂಡು ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಆರೋಪಿಗಳಿಂದ ಒಂದು ಬೈಕ್, ಕಾರು ಸೇರಿದಂತೆ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. 5,700 ನಗದನ್ನು ವಶಪಡಿಸಿಕೊಂಡಿದ್ದಾರೆ.