ಕಾರವಾರ: ಲಾಕ್ ಡೌನ್ ಎಫೆಕ್ಟ್ ಅಕ್ಷಯ ತೃತೀಯಕ್ಕೂ ತಟ್ಟಿದ್ದು, ನಗರದಲ್ಲಿ ಬಹುತೇಕ ಚಿನ್ನದ ಅಂಗಡಿಗಳು ಬಾಗಿಲು ಮುಚ್ಚಿದ ಪರಿಣಾಮ ಆಭರಣ ಪ್ರಿಯರಿಗೆ ನಿರಾಸೆ ಮೂಡಿದೆ.
ಕೊರೊನಾ ಹಾವಳಿಯಿಂದಾಗಿ ಲಾಕ್ಡೌನ್ ಮುಂದುವರಿದಿದ್ದು, ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಯಾವುದೇ ವ್ಯಾಪರಕ್ಕೆ ಅನುಮತಿ ನೀಡಿಲ್ಲ. ಪರಿಣಾಮ ಕಾರವಾರದಲ್ಲಿ ಅಕ್ಷಯ ತೃತೀಯದ ನಡುವೆಯೂ ಎಲ್ಲ ಆಭರಣ ಅಂಗಡಿಗಳು ಬಂದ್ ಆಗಿವೆ.
ಹೇಗಾದರೂ ಶುಭ ದಿನದಂದು ಆಭರಣ ಖರೀದಿಸುವ ಆತುರದಲ್ಲಿದ್ದ ಅದೆಷ್ಟೋ ಆಭರಣ ಪ್ರಿಯರಿಗೆ ಲಾಕ್ ಡೌನ್ ಶಾಕ್ ನೀಡಿದೆ.
ಇನ್ನು, ಅಕ್ಷಯ ತೃತೀಯದಂದು ಆಭರಣ ಖರೀದಿಸಿದರೆ ಐಶ್ವರ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಇದರಿಂದ ಪ್ರತಿ ವರ್ಷವೂ ಚಿನ್ನದ ಅಂಗಡಿಗಳಿಗೆ ಮುಗಿಬಿದ್ದು ಇಷ್ಟದ ಆಭರಣಗಳನ್ನು ಖರೀದಿಸುತ್ತಿದ್ದರು. ಆದರೆ ಈ ಬಾರಿ ಕೊರೊನಾ ಹಾವಳಿಯಿಂದಾಗಿ ಈ ಎಲ್ಲ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ.