ETV Bharat / state

ಕಾರವಾರದಲ್ಲಿ ಧರೆಗುರುಳಿದ ಬೃಹತ್ ಮರ... ತಪ್ಪಿದ ಭಾರೀ ಅನಾಹುತ - karwar news

ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಮಹಾತ್ಮ ಗಾಂಧಿ ರಸ್ತೆಯ ನಗರಸಭೆ ಮುಂಭಾಗದಲ್ಲಿದ್ದ ಬೃಹದಾಕಾರದ ಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್ ಬೀದಿಬದಿ ವ್ಯಾಪಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Large tree felldown in karwar
ಕಾರವಾರದಲ್ಲಿ ಧರೆಗುರುಳಿದ ಬೃಹತ್ ಮರ...ತಪ್ಪಿದ ಭಾರಿ ಅನಾಹುತ
author img

By

Published : Jul 10, 2020, 5:37 PM IST

ಕಾರವಾರ: ನಗರದ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ಧರೆಗುರುಳಿದ್ದು, ಅದೃಷ್ಟವಶಾತ್ ಬೀದಿಬದಿ ವ್ಯಾಪಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರವಾರದಲ್ಲಿ ಧರೆಗುರುಳಿದ ಬೃಹತ್ ಮರ... ತಪ್ಪಿದ ಭಾರೀ ಅನಾಹುತ

ಇಂದು ಗಾಳಿ-ಮಳೆಗೆ ಮಹಾತ್ಮ ಗಾಂಧಿ ರಸ್ತೆಯ ನಗರಸಭೆ ಮುಂಭಾಗದಲ್ಲಿದ್ದ ಬೃಹತ್ ಮರ ಬುಡ ಸಮೇತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಈ ಮರ ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಎರಡು ಲೈಟ್ ಕಂಬಗಳು ಮುರಿದು ಬಿದ್ದಿವೆ. ಮರದ ಬಳಿ ಬೀದಿಬದಿ ವ್ಯಾಪಾರಿಗಳು ಛತ್ರಿ, ರೇನ್ ​ಕೋಟ್, ಹಣ್ಣಿನ ವ್ಯಾಪಾರ ಮಾಡುತ್ತಿದ್ದು, ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮರ ಬಿದ್ದ ಪರಿಣಾಮ ಎರಡು ಬೈಕ್ ಜಖಂಗೊಂಡಿವೆ. ವಿಷಯ ತಿಳಿದ ಹೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದ್ದು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.