ETV Bharat / state

ಪುಸ್ತಕದಲ್ಲಿ ಪಠ್ಯವಿಲ್ಲದಿದ್ದರೂ ಪತ್ರ ಬರೆಯುತ್ತಿದ್ದಾರೆ: ಸಚಿವ ಕೋಟ

ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಮಾತನಾಡಿದ್ದಾರೆ.

minister kota shrinivas poojari
ಸಚಿವ ಕೋಟ ಶ್ರೀನಿವಾಸ್ ಪೂಜಾರಿ
author img

By

Published : Jun 3, 2022, 7:07 PM IST

ಕಾರವಾರ(ಉತ್ತರಕನ್ನಡ): ಕೆಲವರು ಪಠ್ಯಪುಸ್ತಕಗಳಲ್ಲಿ ತಮ್ಮ ಪಾಠ ತೆಗೆಯಿರಿ ಎಂದು ಪತ್ರಗಳನ್ನು ಬರೆಯುತ್ತಿದ್ದಾರೆ. ಪಠ್ಯದಲ್ಲಿ ಅವರ ಪಾಠವೇ ಇಲ್ಲ. ಇನ್ನು ತೆಗೆಯಿರಿ ಎಂದರೆ ಎಲ್ಲಿಂದ ತೆಗೆಯುವುದು ಎಂದು ಸಚಿವ ಕೋಟ ಶ್ರೀನಿವಾಸ್ ಪೂಜಾರಿ ವ್ಯಂಗ್ಯವಾಡಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯತೆಯನ್ನು ಬಿಂಬಿಸುವ ವಾತಾವರಣ ನಿರ್ಮಿಸಲು ಇರುವ ವ್ಯವಸ್ಥೆಗಳಲ್ಲಿ ಪಠ್ಯ-ಪುಸ್ತಕಗಳು ಕೂಡ ಒಂದು ವ್ಯವಸ್ಥೆ. ಪಠ್ಯ- ಪುಸ್ತಕಗಳಲ್ಲಿ ರಾಷ್ಟ್ರಿಯತೆ, ರಾಷ್ಟ್ರಭಕ್ತಿ ತುಂಬುವುದು ತಪ್ಪಲ್ಲ. ಅನೇಕ ಬಾರಿ ಪಠ್ಯ-ಪುಸ್ತಕಗಳ ಬದಲಾವಣೆಯಾಗಿದೆ. ನಾನು ಓದುವಾಗ ಈಶ್ವರ, ಗಣಪತಿಯ ಚಿತ್ರಗಳು ಪಠ್ಯದಲ್ಲಿದ್ದವು. ಆದರೆ ಅಂದಿನ ಈ ಪುಸ್ತಕಗಳನ್ನು ಬದಲಾಯಿಸಿದವರು ಯಾರು? ಎಂದು ಪ್ರಶ್ನಿಸಿದರು.

ಪಠ್ಯ-ಪುಸ್ತಕದಲ್ಲಿ ಅನೇಕ ಬದಲಾವಣೆಗಳಾಗುತ್ತವೆ. ಈಗಲೂ ಕೂಡ ನಮ್ಮ ಸರ್ಕಾರ ಅನೇಕ ವಿಚಾರಗಳನ್ನು ತರಲು ಪಠ್ಯ- ಪುಸ್ತಕದ ಪರಿಷ್ಕಣರಣೆಗೆ ಸಮಿತಿಯೊಂದನ್ನು ರಚಿಸಿದೆ. ಆ ತಜ್ಞರ ಸಮಿತಿ ಕೆಲವು ಸೂಕ್ಷ್ಮತೆ, ರಾಷ್ಟ್ರೀಯತೆಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಮಕ್ಕಳಿಗೆ ರಾಷ್ಟ್ರಭಕ್ತಿ ಎಂದರೆ ಏನು ಎನ್ನುವುದನ್ನು ಹೇಳುವುದು ಪಠ್ಯದಲ್ಲಿ ಅವಶಕ್ಯತೆ ಇದೆ ಎಂದು ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ ಎಂದರು.

ಸಚಿವ ಕೋಟ ಶ್ರೀನಿವಾಸ್ ಪೂಜಾರಿ

ಹಿಜಾಬ್ ವಿಚಾರ ನಮ್ಮ ಸರ್ಕಾರದಲ್ಲಿ ಮುಗಿದು ಹೋದ ಅಧ್ಯಾಯ. ಹಿಜಾಬ್ ಹಾಕಿಕೊಂಡು ಬಂದಿದ್ದೇ ಅಶಾಂತಿ ಸೃಷ್ಟಿಸುವುದಕ್ಕಾಗಿ. ಈ ದೇಶದ ನೆಲ- ಜಲ- ಸಂವಿಧಾನವನ್ನು ಸ್ವೀಕರಿಸುತ್ತೇನೆ ಎಂದು ಹೇಳಿವವರು ಕೋರ್ಟ್​ಗೆ ವಿರುದ್ಧವಾಗಿ ನಡೆದುಕೊಳ್ಳುವುದು ಸರಿಯಲ್ಲ. ಆದೇಶದ ವಿರುದ್ಧ ನಡೆದುಕೊಂಡ ಎಲ್ಲರ ವಿರುದ್ಧವೂ ಕ್ರಮವಾಗುತ್ತದೆ ಎಂದರು. ಲೌಡ್‌ಸ್ಪೀಕರ್ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಸುಪ್ರೀಂಕೋರ್ಟ್ ಆದೇಶ ಅನುಷ್ಠಾನ ಮಾಡಲು ಎಲ್ಲ ಕಡೆ ನಿರ್ದೇಶನ ನೀಡಿದೆ. ಹೀಗಾಗಿ ಯಾವುದೇ ಧರ್ಮ, ಜಾತಿ, ಜನಾಂಗವನ್ನು ನೋಡದೇ ಕೆಲವು ಕಡೆ ತೆಗೆದಿದ್ದಾರೆ, ಇನ್ನೂ ಕೆಲವು ಕಡೆ ತೆರವು ಮಾಡುತ್ತಿದ್ದಾರೆ ಎಂದರು.

ಇದನ್ನೂ ಓದಿ: ಶಿಕ್ಷಕ - ಪದವೀಧರ ಕ್ಷೇತ್ರದ ಚುನಾವಣೆ ಮತದಾನದ ಅವಧಿ ವಿಸ್ತರಿಸಿ: ಬಿಜೆಪಿ ಮನವಿ

ಯಕ್ಷಗಾನಕ್ಕೆ ಸಂಬಂಧಿಸಿದಂತೆ ಆಯಾ ವ್ಯಾಪ್ತಿಯ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ಸೀಮಿತಿ ಶಬ್ದದಲ್ಲಿ ಮಾಡಲಾಗುತ್ತದೆ. ಆದರೂ ಅದಕ್ಕೇನು ವ್ಯವಸ್ಥೆಗಳನ್ನು ಮಾಡಬೇಕೆಂದು ಯೋಚನೆ ಮಾಡುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.