ETV Bharat / state

ಮದುವೆಯಾಗದೇ ಮಗು ಕರುಣಿಸಿದ್ದ ಕಿರಾತಕ: ಮೊಮ್ಮಗಳನ್ನು ನೋಡಲು ಬಂದ ಭಾವಿ ಅತ್ತೆಗೆ ಚಾಕು ಇರಿದ! - ಆಸ್ಪತ್ರೆಯಲ್ಲಿ ಮೊಮ್ಮಗಳನ್ನು ನೋಡಲು ಬಂದ ಬಾವಿ ಅತ್ತೆಗೆ ಚಾಕು ಇರಿದ ಯವಕ

ಮಗಳು ಹೆರಿಗೆಯಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಮನಗಂಡು ಯುವತಿಯ ತಾಯಿ ಮಗುವನ್ನು ನೋಡಲು ಆಗಮಿಸಿದ್ದು, ಈ ವೇಳೆಯೇ ಆರೋಪಿ ರಮಜಾನ್ ಇದಕ್ಕೆ ಆಕ್ಷೇಪಿಸಿ ರಾದ್ಧಾಂತ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ತೆರಳಿದ್ದರು.

ಮದುವೆಯಾಗದೆ ಮಗು ಹುಟ್ಟಿಸಿದ್ದ ಯುವಕ
ಮದುವೆಯಾಗದೆ ಮಗು ಹುಟ್ಟಿಸಿದ್ದ ಯುವಕ
author img

By

Published : May 19, 2022, 3:31 PM IST

Updated : May 19, 2022, 4:41 PM IST

ಕಾರವಾರ: ಆತ ಇನ್ನೂ ಮದುವೆಯಾಗದೇ ತನ್ನ ಪ್ರಿಯತಮೆಗೆ ಮಗು ಕರುಣಿಸಿದ್ದ. ಇಷ್ಟಾದರೂ ತನ್ನ ಮಗಳಿಗೆ ಮಗುವಾದ ಸುದ್ದಿ ಕೇಳಿ ಕುಟುಂಬದೊಂದಿಗೆ ಆಸ್ಪತ್ರೆಗೆ ಪೋಷಕರು ಆಗಮಿಸಿದ್ದರು. ಆದರೆ, ಅತ್ತೆಯೊಂದಿಗೆ ಖ್ಯಾತೆ ತೆಗೆದ‌ ಅಳಿಯ ಚಾಕುವಿನಿಂದ ಇರಿದಿದ್ದು, ಇದೀಗ ಅತ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಳೆ.

ಮದುವೆಗೂ ಮುನ್ನ ಮಗು ಕರುಣಿಸಿದ ಕುಡುಕ: ಕದ್ರಾ ಮೂಲದ ಮಹಿಳೆ ಚಾಕು ಇರಿತಕ್ಕೆ ಒಳಗಾದವರು, ದಾಂಡೇಲಿ ಮೂಲದ ರಮಜಾನ್ (25) ಚಾಕು ಹಾಕಿದ ಆರೋಪಿ. ಈತ ಕಳೆದ ಒಂದು ವರ್ಷದ ಹಿಂದೆ ಯುವತಿಯೊಬ್ಬಳನ್ನು ಪ್ರೀತಿಸುತ್ತಿರುವುದಾಗಿ ಹೇಳಿ ಮನೆಯಿಂದ ಆಕೆಯನ್ನು ಕರೆದುಕೊಂಡು ಹೋಗಿ ದಾಂಡೇಲಿಯಲ್ಲಿ ನೆಲೆಸಿದ್ದ. ಬಳಿಕ ಆಕೆಯನ್ನು ಮದುವೆಯಾಗದೇ ಹಾಗೆ ಇಟ್ಟುಕೊಂಡಿದ್ದನ್ನಲ್ಲದೇ ಒಂದು ಹೆಣ್ಣು ಮಗುವಿನ ಜನ್ಮಕ್ಕೂ ಕಾರಣವಾಗಿದ್ದಾನೆ.

ಮಗಳು ಹೆರಿಗೆಯಾಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ಮನಗಂಡು ಯುವತಿಯ ತಾಯಿ ಮಗುವನ್ನು ನೋಡಲು ಆಗಮಿಸಿದ್ದು, ಈ ವೇಳೆಯೇ ಆರೋಪಿ ರಮಜಾನ್ ಆಕ್ಷೇಪಿಸಿ ರಾದ್ಧಾಂತ ಮಾಡಿದ್ದ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕಾಗಮಿಸಿದ್ದ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿ ತೆರಳಿದ್ದರು.

ಮದುವೆಯಾಗದೇ ಮಗು ಕರುಣಿಸಿದ್ದ ಕಿರಾತಕ: ಮೊಮ್ಮಗಳನ್ನು ನೋಡಲು ಬಂದ ಭಾವಿ ಅತ್ತೆಗೆ ಚಾಕು ಇರಿದ!

ಮನವಿ ಮಾಡಿಕೊಂಡ ಭಾವಿ ಅತ್ತೆ: ಇದಾದ ನಂತರ ಮತ್ತೆ ಕುಡಿದು ಆಸ್ಪತ್ರೆಗೆ ಬಂದ ಯುವಕ ತನ್ನ ಭಾವಿ ಅತ್ತೆಯ ಬಳಿ ಗಲಾಟೆ ಆರಂಭಿಸಿದ್ದಾನೆ. ಇದೇ ವೇಳೆ ಮಹಿಳೆ ಸಹ, ನೀನು‌ ನನ್ನ ಮಗಳನ್ನು ನಮಗೂ ತಿಳಿಸದೇ ಕರೆದೊಯ್ದು ಮದುವೆಯೂ ಆಗದೇ ಮಗು ಆಗುವಂತೆ ಮಾಡಿದ್ದಿಯಾ ಇನ್ನಾದರೂ ಆಕೆಯನ್ನು ಮದುವೆಯಾಗು ಎಂದು ಕೇಳಿ ಕೊಂಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಯುವಕ ಪೂರ್ವಯೋಜಿತವಾಗಿ ತಂದಿದ್ದ ಚಾಕುವಿನಿಂದ ಮಹಿಳೆಯ ಹೊಟ್ಟೆಗೆ ಚುಚ್ಚಿದ್ದಾನೆ. ಇದೇ ವೇಳೆ, ಎಚ್ಚೆತ್ತ ಜನರ ಯುವಕನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.

ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ಮಹಿಳೆಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಪಿ ರಮಜಾನ್​​​​ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕೊಳಚೆ ನೀರು, ಮುಳ್ಳು ತುಂಬಿದ ಕೆರೆಯಲ್ಲಿ ಈಜಿ ಟಿಸಿ ಸರಿಪಡಿಸಿದ ಪವರ್ ಮ್ಯಾನ್!

Last Updated : May 19, 2022, 4:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.