ETV Bharat / state

ಕಾಂಗ್ರೆಸ್​ನಿಂದ ಸೈಲ್, ಬಿಜೆಪಿಯಿಂದ ಬಹುತೇಕ ರೂಪಾಲಿ ಫಿಕ್ಸ್: ಅಸ್ನೋಟಿಕರ್ ನಡೆ ನಿಗೂಢ - ಆನಂದ ಅಸ್ನೋಟಿಕರ್

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ದಟ್ಟವಾಗಿದೆ.

karnataka-assembly-elections-2023-fight-between-congress-and-bjp-in-karwar-ankola-constituency
ಕಾಂಗ್ರೆಸ್​ನಿಂದ ಸೈಲ್, ಬಿಜೆಪಿಯಿಂದ ಬಹುತೇಕ ರೂಪಾಲಿ ಫಿಕ್ಸ್: ಕುತೂಹಲ ಹೆಚ್ಚಿಸಿದ ಅಸ್ನೋಟಿಕರ್ ನಡೆ
author img

By

Published : Apr 5, 2023, 7:52 PM IST

ಕಾರವಾರ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಮಾಜಿ ಶಾಸಕ ಸತೀಶ್ ಸೈಲ್‌ಗೆ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದು, ಬಿಜೆಪಿಯಲ್ಲಿ ಹಾಲಿ ಶಾಸಕಿ ರೂಪಾಲಿ ನಾಯ್ಕಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಆದರೆ, ಚುನಾವಣೆ ಘೋಷಣೆಯಾಗಿ ವಾರ ಕಳೆದರೂ ಸುಮ್ಮನಿದ್ದ ಜೆಡಿಎಸ್ ಮುಖಂಡ ಆನಂದ ಅಸ್ನೋಟಿಕರ್ ಇದೀಗ ಕ್ಷೇತ್ರದಲ್ಲಿ ಓಡಾಟ ನಡೆಸಿ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದು, ಕ್ಷೇತ್ರದ ಚುನಾವಣಾ ಕಣ ಕುತೂಹಲ ಹೆಚ್ಚಿಸುವಂತೆ ಮಾಡಿದೆ.

ಕಳೆದ ಬಾರಿ ಕಾಂಗ್ರೆಸ್‌ ಭದ್ರಕೋಟೆಯಂತಿದ್ದ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಅಂದಿನ ಶಾಸಕ ಸತೀಶ್ ಸೈಲ್ ಸ್ಪರ್ಧಿಸಿದ್ದರು. ಆದರೆ 45,071 ಮತಗಳೊಂದಿಗೆ ಮೂರನೇ ಸ್ಥಾನಕ್ಕೆ ಕುಸಿದಿದ್ದರು. ಕೊನೆ ಗಳಿಗೆಯಲ್ಲಿ ರಾಜಕೀಯಕ್ಕೆ ಬಂದು ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಆನಂದ್ ಅಸ್ನೋಟಿಕರ್ 46,275 ಮತಗಳಿಂದ ಎರಡನೇ ಸ್ಥಾನ ಪಡೆದಿದ್ದರು. ಇಬ್ಬರನ್ನು ಹಿಂದಿಕ್ಕಿದ್ದ ರೂಪಾಲಿ ನಾಯ್ಕ 60,339 ಮತಗಳನ್ನು ಪಡೆದಿದ್ದರು. ಸುಮಾರು 15 ಸಾವಿರ ಮತಗಳ ಅಂತರದಿಂದ ಐತಿಹಾಸಿಕ ಗೆಲುವು ದಾಖಲಿಸಿದ್ದರು.

ಕ್ಷೇತ್ರದಲ್ಲಿ ಗೆಲುವು ಸಾಧಿಸಿದವರು..: ಈ ಕ್ಷೇತ್ರ ಕಾಂಗ್ರೆಸ್​ನ​ ಭದ್ರಕೋಟೆ. ಹಲವು ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆದ್ದು ವಿಧಾನಸಭೆ ಪ್ರವೇಶ ಪಡೆದಿದ್ದಾರೆ. 1952ರಲ್ಲಿ ಎಸ್.ಡಿ. ಗಾಂವಕರ್ (ಕಾಂಗ್ರೆಸ್), 1962ರಲ್ಲಿ ಬಿ.ಪಿ.ಕದಂ (ಎಂಇಎಸ್), 1967ರಲ್ಲಿ ಬಿ.ಪಿ.ಕದಂ (ಸ್ವತಂತ್ರ) ಜಯಗಳಿಸಿದ್ದರು. 1972ರಲ್ಲಿ ಬಿಪಿ ಕದಂ, 1978ರಲ್ಲಿ ವೈಗಂಣಕರ್ ದತ್ತಾತ್ರಯ ವಿಟ್ಟು, 1983, 1985 ಮತ್ತು 1989ರಲ್ಲಿ ಪ್ರಭಾಕರ್ ರಾಣೆ ಕಾಂಗ್ರೆಸ್​ನಿಂದ ಗೆಲುವು ಕಂಡಿದ್ದರು.

ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಹಿತಿ
ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಹಿತಿ

1994ರಲ್ಲಿ ಕೆಸಿಪಿ ಗೆದ್ದಿದ್ದ ವಸಂತ ಅಸ್ನೋಟಿಕರ್, 1999ರಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿ ಜಯ ದಾಖಲಿಸಿದ್ದರು. 2004ರಲ್ಲಿ ಬಿಜೆಪಿಯಿಂದ ಗಂಗಾಧರ ಭಟ್ ಆಯ್ಕೆಯಾಗಿದ್ದರು. ನಂತರ 2008ರಲ್ಲಿ ಆನಂದ ಅಸ್ನೋಟಿಕರ್ ಮೂಲಕ ಮತ್ತೆ ಕಾಂಗ್ರೆಸ್​ ಗೆಲುವು ಸಾಧಿಸಿತ್ತು. ಆದರೆ, ಇದೇ ವರ್ಷದ ಕಾಂಗ್ರೆಸ್​ ತೊರೆದು ಆನಂದ ಅಸ್ನೋಟಿಕರ್ ಬಿಜೆಪಿ ಸೇರಿದ್ದರು. ಆಗ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದರು. 2013ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಸತೀಶ ಸೈಲ್ ಗೆಲುವು ಸಾಧಿಸಿದ್ದರು. ಕಳೆದ 2018ರ ಚುನಾವಣೆಯಲ್ಲಿ ರೂಪಾಲಿ ನಾಯ್ಕ ಬಿಜೆಪಿಯಿಂದ ಗೆಲುವು ಸಾಧಿಸಿದ್ದಾರೆ.

ಟಿಕೆಟ್ ಸಿಕ್ಕರೂ ಪ್ರಚಾರದಲ್ಲಿ ಹಿಂದೆ ಬಿದ್ದ ಕಾಂಗ್ರೆಸ್: ಈ ಬಾರಿ ಮಾಜಿ ಶಾಸಕ ಸತೀಶ್ ಸೈಲ್‌ಗೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿಯೇ ಟಿಕೆಟ್ ಘೋಷಣೆಯಾಗಿದೆ. ಟಿಕೆಟ್ ನಿರೀಕ್ಷೆ ಇದ್ದರೂ ಬಹಿರಂಗವಾಗಿ ಅಷ್ಟೊಂದು ಪ್ರಚಾರ ನಡೆಸದ ಸೈಲ್ ಇದೀಗ ಓಡಾಟ ಚುರುಕುಗೊಳಿಸಿದ್ದಾರೆ. ಕಾರವಾರದಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿ ತೆರೆದು ಮುಖಂಡರು ಕಾರ್ಯಕರ್ತರನ್ನು ಭೇಟಿ ಮಾಡಿ ಮತಬೇಟೆ ಆರಂಭಿಸಿದ್ದಾರೆ. ಆದರೆ, ಈವರೆಗೂ ಯಾವುದೇ ದೊಡ್ಡ ಮಟ್ಟದ ಸಭೆ ಸಮಾರಂಭ ನಡೆಸಿಲ್ಲ. ರಾಜ್ಯ ನಾಯಕರು ಕೂಡ ಕ್ಷೇತ್ರಕ್ಕೆ ಆಗಮಿಸಿಲ್ಲ ಎಂಬ ಮಾತುಗಳು ಪಕ್ಷದ ಕಾರ್ಯಕರ್ತರಲ್ಲಿ ಕೇಳಿ ಬರುತ್ತಿವೆ. ಕಾಂಗ್ರೆಸ್​ನಿಂದ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಚೈತ್ರಾ ಕೊಠಾರ್ಕರ ನಿಲ್ಲುವುದಾಗಿ ಪ್ರಕಟಿಸಿದ್ದಾರೆ.

ಗೊಂದಲದಲ್ಲಿ ಆನಂದ ಅಸ್ನೋಟಿಕರ್: ಮತ್ತೊಂದೆಡೆ, ಜೆಡಿಎಸ್‌ನಿಂದ ಗೆಲುವು ಕಷ್ಟ ಎಂದು ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಆನಂದ್ ಅಸ್ನೋಟಿಕರ್ ಪ್ರಯತ್ನ ನಡೆಸಿದ್ದರು. ಎಲ್ಲಿಯೂ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಕಾಂಗ್ರೆಸ್ ಬೆಂಬಲಿಸಲು ಮುಂದಾಗಿದ್ದಾರೆ ಎನ್ನಲಾಗಿತ್ತು. ಆದರೆ, ಮಂಗಳವಾರ ಕಾರವಾರ ಕ್ಷೇತ್ರದಲ್ಲಿ ವಿವಿಧ ಸಮುದಾಯದ ಮುಖಂಡರ ಮನೆಗಳಿಗೆ ತೆರಳಿ ಅಭಿಪ್ರಾಯ ಸಂಗ್ರಹ ನಡೆಸಿದ್ದು ಕುತೂಹಲಕ್ಕೆ ಕಾರಣವಾಗಿದೆ.

ಬಿಜೆಪಿಯಲ್ಲಿ ಹಲವು ಟಿಕೆಟ್​ ಆಕಾಂಕ್ಷಿಗಳು: ಬಿಜೆಪಿಯಲ್ಲಿ ಶಾಸಕಿ ರೂಪಾಲಿ ನಾಯ್ಕಗೆ ಬಹುತೇಕ ಟಿಕೆಟ್ ಖಚಿತವಾಗಿದೆ. ಕಳೆದೊಂದು ವರ್ಷದಿಂದಲೇ ಚುನಾವಣಾ ಸಿದ್ದತೆ ನಡೆಸಿದ್ದ ಅವರು ಈಗಾಗಲೇ ಹಲವು ಸಮಾರಂಭಗಳನ್ನು ನಡೆಸುತ್ತಿದ್ಧಾರೆ. ರಾಜ್ಯ, ರಾಷ್ಟ್ರ ಮಟ್ಟದ ನಾಯಕರನ್ನು ಕರೆಸಿ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ.

ಕ್ಷೇತ್ರದಾದ್ಯಂತ ಓಡಾಟ ನಡೆಸಿ ಇತರೆ ಪಕ್ಷದ ಮುಖಂಡರನ್ನೂ ತಮ್ಮತ್ತ ಸೆಳೆದುಕೊಳ್ಳುವ ಕಸರತ್ತು ನಡೆಸಿದ್ದಾರೆ. ಇದೇ ವೇಳೆ ಬಿಜೆಪಿಯ ಸ್ಥಳೀಯ ಕೆಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಇರುವ ಆರೋಪ ಶಾಸಕಿ ಮೇಲಿದ್ದು, ಅಸಮಾಧಾನಕ್ಕೆ ಕಾರಣವಾಗಿದೆ. ಅಲ್ಲದೇ, ಇತರ ಪಕ್ಷದವರನ್ನು ಬರಮಾಡಿಕೊಳ್ಳುತ್ತಿರುವ ಬಗ್ಗೆಯೂ ಪಕ್ಷದಲ್ಲಿ ಆಕ್ಷೇಪಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಹಲವರು ಟಿಕೆಟ್ ಆಕಾಂಕ್ಷಿಗಳಿದ್ದು, ಟಿಕೆಟ್​ಗಾಗಿ ಪ್ರಯತ್ನ ನಡೆಸಿದ್ದಾರೆ.

ಮೀನುಗಾರರ ಮೇಲುಗೈ ಕ್ಷೇತ್ರ: ಕ್ಷೇತ್ರದಲ್ಲಿ ಮೀನುಗಾರರು, ಕೋಮಾರಪಂಥ ಸಮಾಜ, ಹಾಲಕ್ಕಿ ಸಮುದಾಯದ ಹೆಚ್ಚು ಮತಗಳಿದ್ದು ನಿರ್ಣಾಯಕವಾಗಲಿದೆ. ಒಟ್ಟು 2,17,686 ಮಂದಿ ಮತದಾರರಿದ್ದಾರೆ. ಈ ಪೈಕಿ 1,08,130 ಪುರುಷರು, 1,09,552 ಮಹಿಳೆಯರು ಹಾಗೂ ನಾಲ್ವರು ಇತರ ಮತದಾರರು ಸೇರಿದ್ದಾರೆ. ಕ್ಷೇತ್ರದಲ್ಲಿ ಸಾಗರಮಾಲಾ ಯೋಜನೆಗೆ ಮೀನುಗಾರರಿಂದ ತೀವ್ರ ವಿರೋಧ ಇದೆ. ಸೀಬರ್ಡ್ ನಿರಾಶ್ರಿತರ ಪರಿಹಾರ, ಅರಣ್ಯ ಅತಿಕ್ರಮಣದ ಸಮಸ್ಯೆ, ನೆರೆ ಹಾವಳಿಗೊಳಗಾದವರಿಗೆ ಪರಿಹಾರ ಪೂರ್ಣಪ್ರಮಾಣದಲ್ಲಿ ಸಿಗದೆ ಸಮಸ್ಯೆಯಾಗಿ ಉಳಿದಿದೆ.

ಇದನ್ನೂ ಓದಿ: ವಿರೋಧದ ಅಲೆಯಲ್ಲಿ "ಸಾಗರ" ಈಜಿ ದಾಟುವರೇ ಹಾಲಪ್ಪ, ಬೇಳೂರು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.