ETV Bharat / state

2 ವರ್ಷ ಹಿಂದಿನ ಪೆಂಡಾಲ್ ಬಿಲ್ ಪಾವತಿಸದ ಜಿಲ್ಲಾಡಳಿತ: ಕಚೇರಿಗೆ ಅಲೆದು ಮಾಲೀಕ ಸುಸ್ತು

ಸದ್ಯ ಕರಾವಳಿ ಉತ್ಸವ ಆಯೋಜಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದರೆ 2020ರಲ್ಲಿ ನಡೆದ ಉತ್ಸವದ ಬಿಲ್​ಗಳನ್ನೇ ಸರ್ಕಾರ ಇನ್ನೂ ಸರಿಯಾಗಿ ನೀಡಿಲ್ಲ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.

2020 Kadambothsava
2020ರ ಕದಂಬೋತ್ಸವ
author img

By

Published : Nov 11, 2022, 8:48 AM IST

Updated : Nov 11, 2022, 9:17 AM IST

ಕಾರವಾರ: ಕನ್ನಡಿಗರ ಮೊದಲ ರಾಜಧಾನಿ ಬನವಾಸಿಯಲ್ಲಿ ಕದಂಬೋತ್ಸವವನ್ನು ಪ್ರತಿ ವರ್ಷ ಸರ್ಕಾರದ ವತಿಯಿಂದ ಆಚರಿಸಲಾಗುತ್ತದೆ. 2020ರ ನಂತರ ಕೋವಿಡ್ ಇನ್ನಿತರ ಕಾರಣದಿಂದ ಉತ್ಸವ ನಡೆದಿಲ್ಲ. ಆದರೆ, 2020ರಲ್ಲಿ ನಡೆದ ಸಿಎಂ ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಾಲ್​ನವರಿಗೆ ಸರ್ಕಾರ ಇನ್ನೂ ಬಿಲ್ಲನ್ನೇ ಪಾವತಿ ಮಾಡಿಲ್ಲ. ಕಳೆದ ಎರಡು ವರ್ಷದಿಂದ ಬಿಲ್​ಗಾಗಿ ಪೆಂಡಾಲ್ ಹಾಕಿದವರು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಪ್ರತೀ ವರ್ಷ ಕದಂಬೋತ್ಸವವನ್ನು ಸರ್ಕಾರ ಅದ್ಧೂರಿಯಾಗಿ ನಡೆಸುತ್ತದೆ. 2020ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಕೊನೆಯದಾಗಿ ಉತ್ಸವ ನಡೆದಿತ್ತು. ಕೊರೊನಾ ಇನ್ನಿತರ ಕಾರಣದಿಂದ ಬಳಿಕ ಆಚರಿಸಿರಲಿಲ್ಲ.

2 ವರ್ಷ ಹಿಂದಿನ ಪೆಂಡಾಲ್ ಬಿಲ್ ಪಾವತಿಸದ ಜಿಲ್ಲಾಡಳಿತ

ಸಿಎಂ ಯಡಿಯೂರಪ್ಪ ಉತ್ಸವಕ್ಕೆ ಆಗಮಿಸುತ್ತಾರೆ ಎನ್ನುವ ನಿಟ್ಟಿನಲ್ಲಿ ಪೆಂಡಾಲ್, ಕುರ್ಚಿ ಇನ್ನಿತರ ವಸ್ತುಗಳನ್ನು ಕಾರವಾರದ ಶಾಮಿಯಾನ ಮಾಲೀಕರೊಬ್ಬರಿಂದ ಹಾಕಿಸಲಾಗಿತ್ತು. ಅಂದಿನ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದರು. ಪೆಂಡಾಲ್ ಹಾಕಿದ್ದ ಸುಮಾರು 10 ಲಕ್ಷ ರೂಪಾಯಿ ಬಿಲ್ಲನ್ನು ಶಾಮಿಯಾನ ಮಾಲೀಕರು ಜಿಲ್ಲಾಡಳಿತಕ್ಕೆ ನೀಡಿದ್ದಾರೆ. ಮೂರನೇ ವರ್ಷಕ್ಕೆ ಕಾಲಿಟ್ಟರೂ ಇಂದಿಗೂ ಬಿಲ್ ಕೊಡದೇ ಶಾಮಿಯಾನ ಮಾಲೀಕರು ಪರದಾಡುವಂತಾಗಿದೆ. ಹೀಗಾಗಿ, ಸರ್ಕಾರದ ವಿರುದ್ದ ಶಾಮಿಯಾನ ಮಾಲೀಕ ಕಿಡಿಕಾರಿದ್ದಾರೆ.

ಕದಂಬೋತ್ಸವದ ಶಾಮಿಯಾನ ಟೆಂಡರ್ ಬೆಂಗಳೂರು ಮೂಲದ ನಂದಕಿಶೋರ್ ಎನ್ನುವವರಿಗೆ ಆಗಿತ್ತಂತೆ. ಸಿಎಂ ಆಗಮನ ಹಿನ್ನೆಲೆಯಲ್ಲಿ ಹೆಚ್ಚುವರಿ ವಸ್ತುಗಳು ಬೇಕೆಂದು ಕಾರವಾರದ ಶಾಮಿಯಾನ ಮಾಲೀಕನಿಂದ ಹಾಕಿಸಿದ್ದರು. ಒಟ್ಟು ಸುಮಾರು 23 ಲಕ್ಷ ರೂ ಬಿಲ್ ಆಗಿದ್ದು, ಬೆಂಗಳೂರಿನ ಶಾಮಿಯಾನ ಮಾಲೀಕನಿಗೂ ಬಿಲ್ ಮಂಜೂರಿ ಮಾಡಿಲ್ಲವಂತೆ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳ ಬಳಿ ಹಣ ಬಿಡುಗಡೆ ಮಾಡಿ ಎಂದು ಪ್ರತಿ ದಿನ ಓಡಾಡಿದರೂ ಇನ್ನೂ ಬಿಲ್​ ನೀಡದೆ ಶಾಮಿಯಾನ ಮಾಲೀಕನನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಮೂರು ವರ್ಷದಿಂದ ಬಿಲ್ ಆಗದೇ ಇರುವ ವಿಚಾರ ಗಮನಕ್ಕೆ ಬಂದಿಲ್ಲ. ವಿಚಾರಿಸಿ ಸಮಸ್ಯೆ ಬಗೆಹರಿಸುತ್ತೇನೆ ಎಂದರು..

ಸದ್ಯ ಕರಾವಳಿ ಉತ್ಸವ ಆಯೋಜನೆ ಮಾಡಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಮೊದಲು ಹಳೆಯ ಉತ್ಸವದ ಬಿಲ್​ಗಳನ್ನು ನೀಡಿ ನಂತರ ಕರಾವಳಿ ಉತ್ಸವ ಮಾಡಿ ಎನ್ನುವುದು ಶಾಮಿಯಾನ ಮಾಲೀಕರ ಆಗ್ರಹವಾಗಿದೆ.

ಇದನ್ನೂ ಓದಿ: ಕದಂಬೋತ್ಸವಕ್ಕೆ ಒಂದಿಲ್ಲೊಂದು ವಿಘ್ನ: ಕನ್ನಡದ ಮೊದಲ ರಾಜಧಾನಿಗಿಲ್ಲವೇ ಸರ್ಕಾರದ ಪ್ರೋತ್ಸಾಹ?

Last Updated : Nov 11, 2022, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.