ETV Bharat / state

ಜಾಲಿ ಪಟ್ಟಣ ಪಂಚಾಯತ್: ಅಧ್ಯಕ್ಷರಾಗಿ ಬಿಬಿ ಶಮೀಮ್, ಉಪಾಧ್ಯಕ್ಷರಾಗಿ ಫರ್ಹಾನಾ ಇಕ್ಕೆರಿ ಆಯ್ಕೆ

ಭಟ್ಕಳದ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಬಿಬಿ ಶಮೀಮ್ ಪಿರ್ಜಾದೆ ಮತ್ತು ಉಪಾಧ್ಯಕ್ಷರಾಗಿ ಫರ್ಹಾನಾ ಇರ್ಷಾದ್ ಇಕ್ಕೆರಿ(ಡಾಟಾ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಾಲಿ ಪಟ್ಟಣ ಪಂಚಾಯತ್
ಜಾಲಿ ಪಟ್ಟಣ ಪಂಚಾಯತ್
author img

By

Published : Nov 9, 2020, 7:34 PM IST

ಭಟ್ಕಳ: ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಬಿಬಿ ಶಮೀಮ್ ಪಿರ್ಜಾದೆ ಮತ್ತು ಉಪಾಧ್ಯಕ್ಷರಾಗಿ ಫರ್ಹಾನಾ ಇರ್ಷಾದ್ ಇಕ್ಕೆರಿ(ಡಾಟಾ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 20 ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನಕ್ಕಾಗಿ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕಾಗಿ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿತ್ತು. ಈ ಹುದ್ದೆಗಳಿಗಾಗಿ ಬೇರೆ ಯಾರೂ ಕೂಡ ನಾಮಪತ್ರ ಸಲ್ಲಿಸದ ಕಾರಣ ತಹಶೀಲ್ದಾರ್ ರವಿಚಂದ್ರ ಅವಿರೋಧ ಆಯ್ಕೆ ಮಾಡಿರುವುದಾಗಿ ಘೋಷಿಸಿದರು.

ಜಾಲಿ ಪಟ್ಟಣ ಪಂಚಾಯತ್ ಅಧ್ಯಕ್ಷರಾಗಿ ಬಿಬಿ ಶಮೀಮ್

20 ಮಂದಿ ಸದಸ್ಯರನ್ನೊಳಗೊಂಡ ಜಾಲಿ ಪ.ಪಂಯಲ್ಲಿ ತಂಝೀಮ್ ಬೆಂಬಲಿತ 11 ಪಕ್ಷೇತರರು, 8 ಮಂದಿ ಕಾಂಗ್ರೇಸ್ ಹಾಗೂ ಮೂರು ಬಿಜೆಪಿ ಪಕ್ಷದ ಸದಸ್ಯರಿದ್ದಾರೆ. ಮೂರನೇ ಬಾರಿ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಬಿಬಿ ಶಮೀಮ್ ಈ ಹಿಂದೆ ಒಂದು ಅವಧಿಗೆ ಉಪಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ ಅನುಭವವನ್ನು ಹೊಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.