ಕಾರವಾರ: ಚಿನ್ನದ ಅಂಗಡಿ ಬಾಗಿಲು ಮುರಿದು ಲಕ್ಷಾಂತರ ರೂ. ಬೆಳ್ಳಿ ಆಭರಣ ದೋಚಿದ ಘಟನೆ ಕಾರವಾರದಲ್ಲಿ ನಡೆದಿದೆ.
ನಗರದ ವೈಷ್ಣವಿ ಸ್ಟೋರ್ಸ್ ರಸ್ತೆಯಲ್ಲಿ ಬಾಲಾಜಿ ಜ್ಯೂವೆಲರಿ ಶಾಪ್ಗೆ ನುಗ್ಗಿದ ಕಳ್ಳರು, ಬೆಳ್ಳಿ ಆಭರಣ ದೋಚಿ ಪರಾರಿಯಾಗಿದ್ದಾರೆ. ಕಬ್ಬಿಣದ ಸಲಾಕೆಯಿಂದ ಅಂಗಡಿ ಬಾಗಿಲು ಮುರಿದ ಕಳ್ಳರು, ಅಂಗಡಿಯಲ್ಲಿದ್ದ ಸಿಸಿಟಿವಿಗಳನ್ನು ತಿರುಗಿಸಿ ಅದಕ್ಕೆ ಬಟ್ಟೆ ಕಟ್ಟಿ ಬಳಿಕ ಅಂಗಡಿಯಲ್ಲಿದ್ದ ಬೆಳ್ಳಿ ಆಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ತಡರಾತ್ರಿ 3 ಗಂಟೆ ಸುಮಾರಿಗೆ ಕಳ್ಳರು ಅಕ್ಕಪಕ್ಕದ ಏರಿಯಾದಲ್ಲಿ ತಿರುಗಾಡಿದ ಬಗ್ಗೆ ಕ್ಯಾಮರಾಗಳಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳರಿಗಾಗಿ ಬಲೆ ಬೀಸಿದ್ದಾರೆ.