ಶಿರಸಿ: ಮತದಾನದ ಸಂದರ್ಭದಲ್ಲಿ ಬೂತ್ ನಲ್ಲಿ ಕಾರ್ಯನಿರ್ವಹಿಸಲು ತಮ್ಮ ಪಕ್ಷದವರೇ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಆರೋಪಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ತಾಲೂಕು ಅಧ್ಯಕ್ಷ ರವಿ ಚಂದ್ರ ನಾಯ್ಕ ದುಡ್ಡಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ದೂರಿದ್ದಾರೆ. ಪ್ರತಿ ಬೂತಿಗೆ 10 ಸಾವಿರದಂತೆ 2 ಲಕ್ಷಕ್ಕೂ ಅಧಿಕ ಹಣ ಜೆಡಿಎಸ್ ಅಭ್ಯರ್ಥಿಯಿಂದ ಬೇಡಿಕೆ ಇಟ್ಟಿದ್ದು ಜನ ಸೇರಿಸಲು, ಮತದಾನದ ದಿನ ಬೂತ್ ನಲ್ಲಿ ಕೆಲಸ ಮಾಡಲು ದುಡ್ಡಿನ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ವೈರಲ್ ಆಗಿದೆ. ತಮ್ಮ ಬಳಿ ಹಣ ಬೇಡಿಕೆ ಇಟ್ಟಿರುವ ಕುರಿತು ಸ್ವತಃ ಯಲ್ಲಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೈತ್ರಾ ಗೌಡ ಒಪ್ಪಿಕೊಂಡಿದ್ದಾರೆ.
![shirasi](https://etvbharatimages.akamaized.net/etvbharat/prod-images/kn-srs-01-pracharakke-money-vis-ka10005_04122019130247_0412f_1575444767_290.jpg)
ಪಕ್ಷದಲ್ಲಿ ಜಿಲ್ಲಾಧ್ಯಕ್ಷರು ಸೇರಿದಂತೆ ತಾಲೂಕು ಅಧ್ಯಕ್ಷರು ಬಹಿರಂಗವಾಗಿ ಹಣ ನೀಡುವಂತೆ ಕೇಳಿದ್ದಾರೆ ಎಂದಿರುವ ಚೈತ್ರಾ ಗೌಡ ಅವರು ತಾನು ಪಕ್ಷೇತರ ಅಭ್ಯರ್ಥಿ ಎಂಬಂತೆ ಭಾಸವಾಗ್ತಿದೆ ಎಂದು ಹೇಳಿಕೊಂಡಿದ್ದಾರೆ.