ETV Bharat / state

ಶಿರಸಿ ಬಳಿ ನೌಕಾಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ: ಸೆಲ್ಫಿಗಾಗಿ ಮುಗಿಬಿದ್ದ ಜನತೆ

author img

By

Published : Nov 13, 2020, 4:35 PM IST

Updated : Nov 13, 2020, 4:45 PM IST

8 ಮಂದಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ. ಅನಿರೀಕ್ಷಿತವಾಗಿ ಲ್ಯಾಂಡ್​ ಆಗಿರುವ ಹೆಲಿಕಾಪ್ಟರ್ ಕಂಡ ಜನತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

Indian Navy helicopter makes emergency landing in Sirsi
ಶಿರಸಿ ಬಳಿ ತುರ್ತು ಭೂಸ್ಪರ್ಶ ಮಾಡಿದ ನೌಕಾಪಡೆ ಕಾಪ್ಟರ್

ಶಿರಸಿ (ಉ.ಕ): ಭಾರತೀಯ ನೌಕಾಪಡೆಗೆ ಸೇರಿದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಶಿರಸಿ ತಾಲೂಕಿನ ದಾಸನಕೊಪ್ಪ ಬಳಿ ಲ್ಯಾಂಡ್ ಆಗಿದ್ದು, ಹೆಲಿಕಾಪ್ಟರ್ ನೋಡಲು ಸ್ಥಳೀಯ ಜನರು ಮುಗಿಬಿದ್ದ ಘಟನೆ ನಡೆದಿದೆ.

8 ಮಂದಿ ಸೇನಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಎಲ್ಲರೂ ಸೇಫ್ ಆಗಿದ್ದಾರೆ. ದಾಸನಕೊಪ್ಪದ ಎಪಿಎಂಸಿ ಗ್ರೌಂಡ್​​ನಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಹೆಲಿಕಾಪ್ಟರ್​ ಬೆಂಗಳೂರಿನಿಂದ ಗೋವಾಕ್ಕೆ ತೆರಳುತ್ತಿತ್ತು ಎನ್ನಲಾಗಿದೆ.

ಶಿರಸಿ ಬಳಿ ನೌಕಾಪಡೆ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ

ತಾಂತ್ರಿಕ ದೋಷ ಸರಿಪಡಿಸಲು ಗೋವಾದಿಂದ ತಜ್ಞರ ತಂಡವೊಂದು ಶಿರಸಿಗೆ ಆಗಮಿಸುತ್ತಿದೆ. ಇನ್ನು ಹೆಲಿಕಾಪ್ಟರ್ ಲ್ಯಾಂಡ್ ಆಗುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿದ್ದು, ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.

Last Updated : Nov 13, 2020, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.