ಕಾರವಾರ: ಅಕ್ರಮ ಗೋವಾ ಮದ್ಯವನ್ನು ಮನೆಯಲ್ಲಿಟ್ಟು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಅಬಕಾರಿ ಸಿಬ್ಬಂದಿ ಮದ್ಯ ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಕಾರವಾರ ತಾಲೂಕಿನ ಸುಂಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದೊಡ್ಡ ಮಶ್ಜಿದಿಯ ಹತ್ತಿರದ ನಿವಾಸಿಯಾದ ಜಯಪ್ರಕಾಶ್ ಜೋಷಿ ಎಂಬುವರ ಮನೆಯ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿಗಳು, 16 ಸಾವಿರ ರೂ. ಮೌಲ್ಯದ 39 ಲೀಟರ್ ಗೋವಾ ಮದ್ಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಓದಿ:ಡ್ರಗ್ಸ್ ಪ್ರಕರಣ: ಆದಿತ್ಯ ಆಳ್ವಾಗೆ ಡೋಪಿಂಗ್ ಟೆಸ್ಟ್
ಅಬಕಾರಿ ನಿರೀಕ್ಷಕಿ ಸುವರ್ಣಾ ಬಿ. ನಾಯ್ಕ ಅವರ ನೇತೃತ್ವದಲ್ಲಿ ನಿರೀಕ್ಷಕರಾದ ಬಸವರಾಜ, ಅಬಕಾರಿ ರಕ್ಷಕರಾದ ಸಿವಾನಂದ, ಪ್ರವೀಣ, ವಿರೇಶ, ನಾಗರಾಜ, ಪಾಟೀಲ, ರವಿ ಮತ್ತು ದಿನಗೂಲಿ ವಾಹನ ಚಾಲಕ ಪರೇಶ್ ದಾಳಿಯಲ್ಲಿ ಪಾಲ್ಗೊಂಡಿದ್ದರು.