ಕಾರವಾರ(ಉತ್ತರಕನ್ನಡ): ಪತ್ನಿಯ ಮೇಲೆ ಸಂಶಯಗೊಂಡ ಪತಿಯೋರ್ವ ಮನಬಂದಂತೆ ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಹೊನ್ನಾವರ ತಾಲೂಕಿನ ಕಡತೋಕಾದಲ್ಲಿ ನಡೆದಿದೆ. ಮಂಜುನಾಥ ಶೆಟ್ಟಿ ಎಂಬಾತನೆ ಹಲ್ಲೆ ಮಾಡಿರುವ ಆರೋಪಿಯಾಗಿದ್ದಾನೆ.
ಡತೋಕಾದ ಆಶಾ ಶೆಟ್ಟಿ (50) ಹಲ್ಲೆಗೊಳಗಾದ ಮಹಿಳೆ. ಪತ್ನಿ ಮೇಲೆ ಸಂಶಯಗೊಂಡು ಸಿಟ್ಟಿಗೆದ್ದ ಮಂಜುನಾಥ ಚಾಕುವಿನಿಂದ ಕೈ, ಹೊಟ್ಟೆ, ಮುಖದ ಭಾಗಗಳಿಗೆ ಗಾಯಗೊಳಿಸಿದ್ದು ತೀವ್ರ ರಕ್ತಸ್ರಾವದಿಂದ ನಿತ್ರಾಣಗೊಂಡಿದ್ದ ಮಹಿಳೆಯನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೋಯಿಡಾದಲ್ಲಿ ರೈತನ ಮೇಲೆ ಕರಡಿ ದಾಳಿ: ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತನೋರ್ವನ ಮೇಲೆ ಕರಡಿ ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಬರಪಾಲಿ ಗ್ರಾಮದಲ್ಲಿ ನಡೆದಿದೆ. ಬರಪಾಲಿಯ ಸಂದೀಪ ಅಣಶಿಕರ (32) ಗಾಯಗೊಂಡ ರೈತ.
ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿಯಾಗಿ ಎರಗಿದ ಕರಡಿ, ಸಂದೀಪ ಮೇಲೆ ದಾಳಿ ನಡೆಸಿದೆ. ಗಾಬರಿಗೊಂಡು ಕರಡಿಯಿಂದ ತಪ್ಪಿಸಿಕೊಳ್ಳಲು ಕೂಗಾಡಿ ಸಾಕಷ್ಟು ಪ್ರಯತ್ನ ನಡೆಸಿದರೂ ಸಹ ಸಾಧ್ಯವಾಗಿಲ್ಲ. ಕೊನೆಗೂ ತಪ್ಪಿಸಿಕೊಂಡಿದ್ದು ಮೈ ಮೇಲೆ ಸಾಕಷ್ಟು ಗಾಯಗಳಾಗಿವೆ. ರೈತನನ್ನು ತಕ್ಷಣ ಸ್ಥಳೀಯರು ಜೋಯಿಡಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಜೋಯಿಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೊಚ್ಚಿ ವಿಮಾನನಿಲ್ದಾಣದಲ್ಲಿ ಪ್ರಯಾಣಿಕನ ಕಿರಿಕ್; ತಪಾಸಣೆಗೆ ಸಿಟ್ಟಾಗಿ ಬ್ಯಾಗಲ್ಲಿ 'ಬಾಂಬ್' ಇದೆ ಎಂದ!