ETV Bharat / state

ಯಲ್ಲಾಪುರದಲ್ಲಿ ಶಿವರಾಮ್ ಹೆಬ್ಬಾರ್​ ಪರ ಮತ ಯಾಚಿಸಿದ ಯಡಿಯೂರಪ್ಪ - ಬೃಹತ್ ಉಪ ಚುನಾವಣಾ ಸಭೆ ಶಿರಸಿ ಸುದ್ದಿ

ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್ ಪರ ಮುಖ್ಯಮಂತ್ರಿ ಯಡಿಯೂರಪ್ಪ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಯಾಚನೆ ಮಾಡಿದರು.

ಉಪ ಚುನಾವಣಾ ಸಭೆ
author img

By

Published : Nov 24, 2019, 3:52 PM IST

ಶಿರಸಿ: ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧವೇ ತೊಡೆತಟ್ಟಿ ಈಗ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್, ಮುಖ್ಯಮಂತ್ರಿ ಯಡಿಯೂರಪ್ಪನವರ ನೇತೃತ್ವದಲ್ಲಿ ಬೃಹತ್ ಉಪ ಚುನಾವಣಾ ಸಭೆ ನಡೆಸಿ ಮತ ಯಾಚಿಸಿದರು.

ಬೃಹತ್ ಉಪ ಚುನಾವಣಾ ಸಭೆ

ವಿವಿಧ ಉಪ ಚುನಾವಣಾ ಕ್ಷೇತ್ರದಲ್ಲಿ ಪ್ರಚಾರ ಸಭೆ ಹಮ್ಮಿಕೊಂಡಿರುವ ಯಡಿಯೂರಪ್ಪ ಇಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಿ ಹೆಬ್ಬಾರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಬಿಜೆಪಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗಿಯಾಗಿದ್ದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾರೂ ಸ್ಪರ್ಧೆ ಮಾಡದಷ್ಟು ದೊಡ್ಡ ಅಂತರದಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಗೆಲ್ಲಿಸಬೇಕು . ಈಗಾಗಲೇ ಶಿವರಾಮ ಹೆಬ್ಬಾರ್ ಗೆದ್ದಾಗಿದೆ. ದೊಡ್ಡ ಅಂತರದಲ್ಲಿ ನಾವು ಗೆಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು.‌

ಇನ್ನು ಸಭೆಯಲ್ಲಿ ಅಂದಾಜು 5 ಸಾವಿರ ಕಾರ್ಯಕರ್ತರು ಭಾಗವಹಿಸಿದ್ದರು. ಮುಂಡಗೋಡ ತಾಲೂಕಿನ ಪಟ್ಟಣ ಪಂಚಾಯತ್​ ಮತ್ತು ತಾಲೂಕ್​ ಪಂಚಾಯತ್​ ಕಾಂಗ್ರೆಸ್ ಸದಸ್ಯರು ಇದೇ ವೇಳೆ ಬಿಜೆಪಿ ಸೇರಿದರು.

Intro:ಶಿರಸಿ :
ಯಲ್ಲಾಪುರ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಕಾಂಗ್ರೆಸ್ ಪಕ್ಷದ ವಿರುದ್ಧವೇ ತೊಡೆತಟ್ಟಿ ಬಿಜೆಪಿ ಅಭ್ಯರ್ಥಿಯಾಗಿ ಕಣ್ಣಕ್ಕಿಳಿದಿರುವ ಅನರ್ಹ ಶಾಸಕ ಶಿವರಾಮ್ ಹೆಬ್ಬಾರ್, ಮುಖ್ಯಮಂತ್ರಿಯಡಿಯೂರಪ್ಪನವರ ನೇತೃತ್ವದಲ್ಲಿ ಬೃಹತ್ ಉಪ ಚುನಾವಣಾ ಸಭೆ ನಡೆಸಿ ಮತ ಯಾಚಿಸಿದರು.

ವಿವಿಧ ಉಪ ಚುನಾವಣಾ ಕ್ಷೇತ್ರದಲ್ಲಿ ಪ್ರಚಾರ ಸಭೆ ಹಮ್ಮಿಕೊಂಡಿರುವ ಯಡಿಯೂರಪ್ಪ ಭಾನುವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಸಭೆ ನಡೆಸಿ ಹೆಬ್ಬಾರನ್ನು ಬೃಹತ್ ಮತಗಳಿಂದ ಗೆಲ್ಲಿಸುವಂತೆ ಕರೆ ನೀಡಿದರು. ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಸಂಸದ ಅನಂತಕುಮಾರ ಹೆಗಡೆ ಸೇರಿದಂತೆ ಶಾಸಕ ಪ್ರಮುಖರು ಭಾಗವಹಿಸಿ ಮತ ಯಾಚಿಸಿದರು.

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಯಾರೂ ಸ್ಪರ್ಧೆ ಮಾಡದಷ್ಟು ದೊಡ್ಡ ಅಂತರದಲ್ಲಿ ಶಿವರಾಮ ಹೆಬ್ಬಾರ್ ಅವರನ್ನು ಗೆಲ್ಲಿಸಬೇಕು . ಈಗಾಗಲೇ ಶಿವರಾಮ ಹೆಬ್ಬಾರ್ ಗೆದ್ದಾಗಿದೆ. ಎಷ್ಟು ಅಂತರ ಎನ್ನುವುದನ್ನು ನೋಡಬೇಕಾಗಿದೆ. ದೊಡ್ಡ ಅಂತರದಲ್ಲಿ ನಾವು ಗೆಲ್ಲಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದರು. ಬನವಾಸಿ ಭಾಗದಲ್ಲಿ ಉತ್ತಮ ಅಭಿವೃದ್ಧಿ ಮಾಡುವುದಾಗಿ ಭರವಸೆ ನೀಡಿದರು. ‌

Body:ಸಭೆಯಲ್ಲಿ ಅಂದಾಜು ೫ ಸಾವಿರ ಕಾರ್ಯಕರ್ತರು ಭಾಗವಹಿಸಿದ್ದರು. ಮುಂಡಗೋಡ ತಾಲೂಕಿನ ಪಟ್ಟಣ ಪಂಚಾಯತ ಮತ್ತು ತಾಲೂಕಾ ಪಂಚಾಯತ ಕಾಂಗ್ರೆಸ್ ಸದಸ್ಯರು ಬಿಜೆಪಿ ಸೇರಿದರು.
...........
ಸಂದೇಶ ಭಟ್ ಶಿರಸಿ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.