ಶಿರಸಿ : ಕಳೆದ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಚಾವಣಿ ಕುಸಿದು ಬಿದ್ದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ರಂಗಾಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನೀಲಮ್ಮ ಸುಂದಪ್ಪ ಎಂಬುವರ ಮನೆ ಚಾವಣಿ ಕುಸಿದಿದ್ದು, ಅದೃಷ್ಟವಶಾತ್ ದೊಡ್ಡ ಅನಾಹುತವೊಂದು ತಪ್ಪಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾವಣಿ ಕುಸಿದಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಶಿರಸಿ ತಾಲೂಕಿನಾದ್ಯಂತ ಸೋಮವಾರ ರಾತ್ರಿ ಅಕಾಲಿಕ ಮಳೆ ಸುರಿದಿದ್ದು, ಕೃಷಿ ಜಮೀನುಗಳಿಗೂ ಅಪಾರ ಹಾನಿ ಉಂಟಾಗಿದೆ. ಕೊಯ್ಯಲು ಬಂದಿದ್ದ ಭತ್ತ ಸೇರಿದಂತೆ ಇತರ ಬೆಳೆಗಳು ನಷ್ಟ ಉಂಟಾಗಿದೆ.