ETV Bharat / state

ರಾಜ್ಯದ ಹಲವೆಡೆ ಮುಂದುವರಿದ ಮಳೆ ಅಬ್ಬರ.. ನೆರೆ ಭೀತಿಯಲ್ಲಿ ನದಿ ತೀರದ ಜನ - Heavy rain in mangaluru

ರಾಜ್ಯದ ಹಲವೆಡೆ ಮಳೆ ಆರ್ಭಟ- ಕರಾವಳಿಯ ಜಿಲ್ಲೆಗಳಲ್ಲಿ ನೆರೆ ಭೀತಿ- ಆತಂಕದಲ್ಲಿ ನದಿ ತೀರದ ಜನ

ಹುಬ್ಬಳ್ಳಿಯಲ್ಲಿ ಮಹಾಮಳೆ
ಹುಬ್ಬಳ್ಳಿಯಲ್ಲಿ ಮಹಾಮಳೆ
author img

By

Published : Jul 5, 2022, 3:38 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಆರ್ಭಟ ಮಂಗಳವಾರವೂ ಮುಂದುವರಿದಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ತಗ್ಗು‌ ಪ್ರದೇಶಗಳು ಜಲಾವೃತಗೊಂಡು, ನದಿಪಾತ್ರದ ನಿವಾಸಿಗಳು ನೆರೆ ಭೀತಿ ಎದುರಿಸುವಂತಾಗಿದೆ. ಹವಾಮಾನ ಇಲಾಖೆ ಈಗಾಗಲೇ ಜೂ.7ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ಅದರಂತೆ ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ ಸೋಮವಾರ ಆರಂಭವಾದ ಮಳೆ ಕೆಲವೆಡೆ ಸಂಜೆ ಕೊಂಚ ಬಿಡುವು ನೀಡಿದಂತೆ ಕಂಡರೂ ಮಂಗಳವಾರ ಮತ್ತೆ ಮುಂದುವರೆದಿದೆ. ಮಳೆಯೊಂದಿಗೆ ಗಾಳಿ ಕೂಡ ರಭಸದಿಂದ ಬೀಸುತ್ತಿದ್ದು, ನದಿ ಪಾತ್ರದ ಪ್ರದೇಶಗಳಲ್ಲೆಲ್ಲ ಈಗಾಗಲೇ ನೀರು ತುಂಬಲಾರಂಭಿಸಿದೆ.

ಕಾರವಾರದಲ್ಲಿ ಮುಂದುವರೆದ ಮಳೆ

ಈ ವರ್ಷ ಕೃತಕ ನೆರೆ ಸೃಷ್ಟಿ: ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅಂಕೋಲಾ ತಾಲೂಕು ವ್ಯಾಪ್ತಿಯ ಗಂಗಾವಳಿ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಮೋಟನಕುರ್ವೆ, ದಂಡೆಬಾಗ, ಕುರ್ವೆ ನಡುಗಡ್ಡೆಯ ಭಾಗದಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಇದಲ್ಲದೆ ಕಲ್ಲೇಶ್ವರ- ಡೊಂಗ್ರಿ- ರಾಮನಗುಳಿ ಭಾಗದಲ್ಲಿಯು ನೀರಿನ ಮಟ್ಟ ಏರಿಕೆಯಾಗಿ, ಗುಳ್ಳಾಪುರದಿಂದ ಕಲ್ಲೇಶ್ವರ- ಶೇವಕಾರ ಕೈಗಡಿಗೆ ಹೋಗುವ ತಾತ್ಕಾಲಿಕ ಸೇತುವೆ ಕೂಡ ನೀರಿನಲ್ಲಿ ಮುಳುಗಡೆಯಾಗಿದೆ. ಹೀಗಾಗಿ ಈ ಭಾಗದ ಸಂಪರ್ಕ ಕಡಿತಗೊಂಡಿದೆ. ಮಂಜುಗುಣಿ ಮತ್ತು ಕೊಡ್ಸಣಿ ಬಳಿ ಸೇತುವೆ ನಿರ್ಮಾಣ ಮಾಡಲು ಗಂಗಾವಳಿ ನದಿಯಲ್ಲಿ ಹಾಕಲಾಗಿರುವ ಭಾರಿ ಪ್ರಮಾಣದ ಮಣ್ಣಿನಿಂದ ಈ ವರ್ಷ ಕೃತಕ ನೆರೆ ಸೃಷ್ಟಿಯಾಗುತ್ತಿದೆ.

ಕಾರವಾರ- ಜೊಯಿಡಾ ಸಂಪರ್ಕಿಸುವ ಅಣಶಿ ಘಟ್ಟದಲ್ಲಿ ಮತ್ತೆ ಈ ಬಾರಿಯೂ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ವರ್ಷದ ಮಳೆಗೆ ಇಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿತವಾಗಿ ಸಂಪರ್ಕ ಕಡಿತಗೊಂಡಿತ್ತು. ಈ ಬಾರಿ ಕೂಡ ಎರಡು ದಿನಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಕಲ್ಲು-ಮಣ್ಣು ರಸ್ತೆಗೆ ಬಿದ್ದಿದ್ದು, ಮಂಗಳವಾರ ಕೂಡ ಬೃಹತ್ ಕಲ್ಲು ರಸ್ತೆಗೆ ಉರುಳಿಬಿದ್ದಿದೆ. ಹೀಗಾಗಿ, ಈ ಭಾಗದಲ್ಲಿ ಜೀವಭಯದಲ್ಲೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಮುಂಜಾನೆಯಿಂದಲೇ ಭಾರಿ ಮಳೆ : ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂದು ಮುಂಜಾನೆಯಿಂದ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆಯಿಂದಲೇ ಎಡಬಿಡದೆ ಭಾರಿ ಮಳೆ ಸುರಿಯುತ್ತಿದ್ದು, ಜಿಲ್ಲೆಯಾದ್ಯಂತ ಮಳೆ ಅಬ್ಬರ ಹೆಚ್ಚಿದೆ. ಜಿಲ್ಲೆಯ ನದಿಗಳು ತುಂಬಿಕೊಂಡಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಳೆದ ವಾರದಲ್ಲಿ ಸುರಿದ ಭಾರಿ ಮಳೆಗೆ ತತ್ತರಿಸಿದ ಮಂಗಳೂರಿನಲ್ಲಿ ಮತ್ತೊಂದು ಸುತ್ತಿನ ಮಳೆ ಆತಂಕ ಸೃಷ್ಟಿಸಿದೆ.

ಮಂಗಳೂರಿನಲ್ಲಿ ಮುಂದುವರೆದ ಮಹಾಮಳೆ

ಮಳೆಯ ಅಬ್ಬರಕ್ಕೆ ರಸ್ತೆ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ತೊಡಕಾಗಿದೆ. ಭಾರಿ ಮಳೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ.

ಎರಡನೇ ದಿನವೂ ಮುಂದುವರಿದ ಮಳೆ ಆರ್ಭಟ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಎರಡನೇ ದಿನವಾದ ಇಂದು ವರುಣನ ಆರ್ಭಟ ಮುಂದುವರಿದಿದೆ. ಮಳೆಯಿಂದಾಗಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವಿದ್ಯಾನಗರ, ಗಿರಣಿಚಾಳ, ಮೂರುಸಾವಿರ ಮಠ, ವಿಕ್ಟೋರಿಯಾ ರಸ್ತೆ ಸೇರಿದಂತೆ ಕೆಲವೆಡೆ ತೊಂದರೆಯಾಯಿತು.

ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆ

ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಮಳೆಯಲ್ಲಿ ನೆನೆದುಕೊಂಡೇ ಹೋಗುತ್ತಿದ್ದ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಕೆಲ ದಿನಗಳಿಂದ ಬಿತ್ತನೆಯಾದರೂ ಸುರಿಯದ ಮಳೆಯಿಂದಾಗಿ ಚಿಂತೆಗೀಡಾಗಿದ್ದ ರೈತರು, ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂತಸಗೊಂಡರು. ಜೊತೆಗೆ, ಹೊಲಗಳಲ್ಲಿ ಬಿತ್ತನೆ ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳು ಬಿರುಸುಗೊಂಡವು.

ಓದಿ: ಏಕಾಏಕಿ ಕುಸಿದ ಕೆರೆ ಏರಿ.. ರಸ್ತೆಯಿಂದ ಕೆರೆಗೆ ಬಿದ್ದ ನಂದಿನಿ ಹಾಲಿನ ವಾಹನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.