ಕಾರವಾರ: ರಾಜಕೀಯ ಬದ್ಧ ವೈರಿಯಾದರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಧರ್ಮದಂತೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಸ್ನೋಟಿಕರ್ ಪರ ಇಂದು ಮಾಜಿ ಶಾಸಕ ಸತೀಶ್ ಸೈಲ್ ಪ್ರಚಾರ ನಡೆಸಿದರು.
ಕಾರವಾರ ತಾಲೂಕಿನ ಅಮದಳ್ಳಿ, ಬಿಣಗಾ, ತೋಡೂರು ಸೇರಿದಂತೆ ಇತರ ಭಾಗಗಳಿಗೆ ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ಸೈಲ್, ಮೈತ್ರಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು. ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಮ್ಮ ಪ್ರಧಾನಿಯಾಗಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಮೈತ್ರಿ ಅಭ್ಯರ್ಥಿಗೆ ಮತ ನೀಡಬೇಕಿದೆ ಎಂದರು.
ಐದು ಬಾರಿ ಸಂಸದರಾದರೂ ಕ್ಷೇತ್ರಕ್ಕೆ ಏನೂ ಕೊಡುಗೆ ನೀಡದ ಅನಂತಕುಮಾರ್ ಹೆಗಡೆಯನ್ನು ಕಿತ್ತೊಗೆಯಬೇಕಿದೆ ಎಂದ ಅವರು, ಪ್ರಚಾರದ ವೇಳೆ ಎಲ್ಲಿಯೂ ಆನಂದ್ ಅಸ್ನೋಟಿಕರ್ ಹೆಸರು ಹೇಳಲಿಲ್ಲ. ಕೇವಲ ಮೈತ್ರಿ ಅಭ್ಯರ್ಥಿಗೆ ಮತ್ತು ಜೆಡಿಎಸ್ ಚಿಹ್ನೆಗೆ ಮತ ನೀಡುವಂತೆ ಮನವಿ ಮಾಡಿದರು.