ಕಾರವಾರ: ಅರಣ್ಯಾಧಿಕಾರಿಗಳೇ ನಿಯಮಗಳನ್ನು ಮೀರಿ ಹುಲಿ ಸಂರಕ್ಷಿತಾರಣ್ಯದಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಕೊಟ್ಟಿರುವ ಆರೋಪ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಕೇಳಿಬಂದಿದೆ.
ಜೋಯಿಡಾದ ಹುಲಿ ಸಂರಕ್ಷಿತ ಪ್ರದೇಶವಾದ ಕುಳಗಿ-ಸಾತಖಂಡ ಅರಣ್ಯ ಪ್ರದೇಶದಲ್ಲಿ ಅರಣ್ಯ ಅಧಿಕಾರಿಗಳು ಬೃಹತ್ ಯಂತ್ರಗಳನ್ನು ಬಳಸಿ ಅರಣ್ಯದಲ್ಲಿ ಜಂಗಲ್ ಸಫಾರಿಗೆ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ. ಇದಕ್ಕಾಗಿ ನೂರಾರು ಮರಗಳನ್ನು ಕಡಿದು ಬೃಹತ್ ಯಂತ್ರಗಳನ್ನು ಬಳಸಿ ರಸ್ತೆ ನಿರ್ಮಿಸುತ್ತಿದ್ದಾರೆ.
ಪ್ರಸ್ತುತ ಕೆಲಸ ಮಾಡುತ್ತಿರುವ ಪ್ರದೇಶ ಕಾಳಿ ಹುಲಿ ಸಂರಕ್ಷಿತ ಪ್ರದೇಶವಾಗಿದ್ದು ರಸ್ತೆ ನಿರ್ಮಾಣ, ಮರಗಳನ್ನು ಕಡಿಯಲು ಯಾವುದೇ ಅವಕಾಶ ಇರುವುದಿಲ್ಲ. ಆದ್ರೆ ಅರಣ್ಯ ಇಲಾಖೆಯವರು ಜಂಗಲ್ ಸಫಾರಿ ಮೂಲಕ ಆದಾಯ ಗಳಿಸುವ ಸಂಬಂಧ ಈ ರೀತಿ ಅರಣ್ಯ ನಾಶ ಮಾಡುತ್ತಿದ್ದಾರೆ ಎಂದು ಸ್ಥಳೀಯ ಪರಿಸರವಾದಿಗಳು ಆರೋಪಿಸಿದ್ದಾರೆ.
ಜನಸಾಮಾನ್ಯರು ಅರಣ್ಯ ಪ್ರದೇಶದಲ್ಲಿ ಕುಡಿಯುವ ನೀರಿನ ಸಣ್ಣ ಪೈಪ್ ಹಾಕಲು ಮುಂದಾದರೂ ವಿರೋಧ ವ್ಯಕ್ತಪಡಿಸುವ ಅರಣ್ಯ ಸಿಬ್ಬಂದಿ ಇದೀಗ ಅವರೇ ಅರಣ್ಯವನ್ನು ನಾಶ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.