ETV Bharat / state

ಮಹಾಮಳೆಗೆ ಮುಳುಗಿದ ಬದುಕು: ಉತ್ತರ ಕನ್ನಡ ಜಿಲ್ಲೆಯ ಗ್ರಾಮದ ರಸ್ತೆಗಳೆಲ್ಲಾ ಕೆಸರು ಗದ್ದೆ - ಉತ್ತರ ಕನ್ನಡ ಜಿಲ್ಲೆಯ ಪ್ರವಾಹ

ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ ತಾಲೂಕಿನಲ್ಲಿ ತಗ್ಗಿದ ನೆರೆಯಿಂದಾಗಿ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳುತ್ತಿದ್ದಾರೆ. ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಕೆಸರಲ್ಲಿ ಮುಳುಗಿದ್ದು, ತಹಶೀಲ್ದಾರ್​, ಪೊಲೀಸರು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳಿಂದ ತೆರವು ಕಾರ್ಯಾಚರಣೆ ನಡೆದಿದೆ.

ಪ್ರವಾಹದ ನೀರಿನಮಟ್ಟ ತಗ್ಗಿದ್ದು, ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ
author img

By

Published : Aug 11, 2019, 7:42 PM IST

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ ಕಡಿಮೆಯಾಗಿದೆ. ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನರು ತಮ್ಮ ತಮ್ಮ ಮನೆಗಳತ್ತ ತೆರಳುತ್ತಿದ್ದಾರೆ.

ಪ್ರವಾಹದ ನೀರಿನ ಮಟ್ಟ ತಗ್ಗಿದ್ದು, ರಸ್ತೆಗಳೆಲ್ಲ ಕೆಸರು ಗದ್ದೆಗಳಾಗಿವೆ

ಅಪಾರ ಪ್ರಮಾಣದಲ್ಲಿ ಕೆಸರು ನೀರಿನೊಂದಿಗೆ ಮನೆಯೊಳಗೆ ಸೇರಿದ್ದರಿಂದ ಗಬ್ಬು ವಾಸನೆ ಹಬ್ಬಿದೆ. ನೆರೆಯಿಂದ ಮುಳುಗಡೆಯಾಗಿದ್ದ ಕಾರವಾರ, ಅಂಕೋಲಾ ಹಾಗೂ ಕುಮಟಾ ಭಾಗದ ಗ್ರಾಮಗಳು ಕಾಣಿಸಿಕೊಳ್ಳುತ್ತಿವೆ.

ಉತ್ತರ ಕನ್ನಡ ಜಿಲ್ಲೆಯ ಪ್ರವಾಹಕ್ಕೆ ಅಂಕೋಲಾ ತಾಲೂಕಿನ ಗಂಗಾವಳಿ ನದಿಯಂಚಿನ ವಾಸರೆ ಕುದರಿಗಿ ಗ್ರಾಮಸ್ಥರು ತಮ್ಮ ಮನೆಗಳನ್ನು ಕಂಡು ಆಶ್ವರ್ಯಗೊಂಡಿದ್ದಾರೆ. ಮನೆಯ ಸುತ್ತೆಲ್ಲಾ ಅರ್ಧ ಅಡಿಯಷ್ಟು ಕೆಸರು ತುಂಬಿಕೊಂಡಿದೆ. ಮನೆಯಲ್ಲಿಯೇ ಬಿಟ್ಟಿದ್ದ ವಸ್ತುಗಳು ನದಿಪಾಲಾಗಿದೆ. ಇನ್ನೂ ಕೆಲವು ಮನೆಗಳು ಗುರುತೇ ಸಿಗದಷ್ಟು ಹಾನಿಗೊಳಗಾಗಿವೆ. ನಾಟಿ ಮಾಡಿದ ಗದ್ದೆಗಳ ಗುರುತು ಸಿಗದಂತಾಗಿದೆ.

ಎರಡು ದಿನಗಳಿಂದ ಸ್ವಚ್ಛಗೊಳಿಸುವ ಕಾರ್ಯ ನಡೆದಿದೆ. ಒಂದು ತಿಂಗಳ ಹಿಂದೆ ನಾಟಿ ಮಾಡಿದ್ದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಭತ್ತದ ಸಸಿ ಕೊಳೆತು ಹೋಗಿದ್ದು, ಕೆಲ ಭಾಗಗಳಲ್ಲಿ ಗದ್ದೆಯೋ, ಮಣ್ಣು ಗುಡ್ಡೆಯೋ ಎಂಬ ಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆಗಳು ಸಂಪೂರ್ಣ ಕೆಸರಿನಿಂದ ತುಂಬಿಕೊಂಡು, ಅಂಕೋಲಾ ತಹಶೀಲ್ದಾರ್ ಹಾಗೂ ಪೊಲೀಸರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸಂಪರ್ಕಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎನ್ನಲಾಗಿದೆ.

Intro:ಮಹಾಮಳೆಗೆ ಮುಳುಗಿದ ಬದುಕು... ಕರುಳೆ ಕಿತ್ತು ಬರುವಂತಿದೆ ಈ ಗ್ರಾಮದ ಸ್ಥಿತಿ

ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಇದೀಗ ತಣ್ಣಗಾಗಿದೆ. ಆದರೆ ನೆರೆವೇಳೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನರು ಇದೀಗ ಮನೆಗಳತ್ತ ಮುಖಮಾಡಿದ್ದು, ಮನೆಯೊಳಗಿನ ಕೆಸರು, ಗಬ್ಬು ವಾಸನೆಯಿಂದಾಗಿ ಕಂಗಾಲಾಗಿದ್ದಾರೆ.
ಹೌದು ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದ ಎಂಟತ್ತು ದಿನಗಳಿಂದ ಬಿಡದೆ ಸುರಿಯುತ್ತಿದ್ದ ಮಳೆ ಕಳೆದ ಎರಡು ದಿನಗಳಿಂದ ಬಿಡವು ಪಡೆದುಕೊಂಡಿದೆ. ಇದರಿಂದ ನೆರೆಯಿಂದ ಮುಳುಗಡೆಯಾಗಿದ್ದ ಕಾರವಾರ, ಅಂಕೋಲಾ ಹಾಗೂ ಕುಮಟಾ ಭಾಗದ ಗ್ರಾಮಗಳು ಕಣ್ಣಿಗೆ ಕಾಣತೊಡಗಿದ್ದು, ಜನರು ತಮ್ಮ ಮನೆಗಳತ್ತ ಮುಖಮಾಡಿದ್ದಾರೆ.
ಹೀಗೆ ಕಳೆದ ಎರಡು ದಿನಗಳಿಂದ ಮನೆಗಳಿಗೆ ತೆರಳುತ್ತಿರುವ ಅಂಕೋಲಾ ತಾಲ್ಲೂಕಿನ ಗಂಗಾವಳಿ ನದಿಯಂಚಿನ ವಾಸರೆ ಕುದರಿಗಿ ಗ್ರಾಮಸ್ಥರು ಮನೆಗಳನ್ನು ಕಂಡು ಹೌಹಾರುತ್ತಿದ್ದಾರೆ. ಮನೆಗಳಲ್ಲಿ ಅರ್ಧ ಅಡಿಯಷ್ಟು ಕೆಸರು ತುಂಬಿಕೊಂಡಿದ್ದು, ಈಡಿ ಮನೆಯೇ ಗಬ್ಬುನಾರುತ್ತಿದೆ. ಅಲ್ಲದೆ ಮನೆಯಲ್ಲಿ ಸರಕು ಸಾಮಾನಗಳು ನದಿಪಾಲಾಗಿದ್ದು, ಕೆಲಮನೆಗಳು ಸಂಪೂರ್ಣವಾಗಿ ಕುಸಿದು ನೀರಾಗಿದೆ. ಜತೆಗೆ ಕೃಷಿಭೂಮಿಗಳು ಸಂಪೂರ್ಣವಾಗಿ ನಾಶವಾಗಿದ್ದು, ನಾಟಿ ಮಾಡಿದ ಗದ್ದೆಗಳನ್ನು ನೋಡಿದರೇ ಕಣ್ಣೀರು ಬರುವಂತಹ ಸ್ಥಿತಿ ಈ ಭಾಗದಲ್ಲಿ ನಿರ್ಮಾಣವಾಗಿದೆ.
ಅಲ್ಲದೆ ಮನೆಗಳಿಗೆ ತೆರಳಿದ ಜನರು ತಮ್ಮ ಮನೆಗಳನ್ನು ಸ್ವಚ್ಚಗೊಳಿಸಲು ಕಳೆದ ಎರಡು ದಿನಗಳಿಂದ ಪ್ರಯತ್ನಿಸುತ್ತಿದ್ದರು ಅದು ಸಾಧ್ಯವಾಗುತ್ತಿಲ್ಲ. ಮನೆಗಳಲ್ಲಿ ಕೆಸರು, ಕಸ ಕಡ್ಡಿ ತುಂಬಿಕೊಂಡಿದ್ದು, ಕಾಲಿಡಲಾಗದ ಸ್ಥಿತಿ ಇದೆ. ಎಷ್ಟೆ ಸ್ವಚ್ಚಗೊಳಿಸಿದರು ಮನೆ ಸ್ವಚ್ಚವಾಗುತ್ತಿಲ್ಲ. ಅಲ್ಲದೆ ಮನೆಗಳಿಂದ ಗಬ್ಬು ವಾಸನೆ ಬರುತ್ತಿದ್ದು, ಮನೆಗಳಲ್ಲಿ ವಾಸ ಮಾಡಲು ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಕೇವಲ ಅಂಗಳ ತುಂದಿಗೆ ಬಂದು ಹೋಗುತ್ತಿದ್ದ ನೆರೆ ಈ ಭಾರಿ ಸರ್ವಸ್ವವನ್ನು ತೊಳೆದುಕೊಂಡು ಹೋಗಿದೆ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ಇನ್ನು ಈ ಭಾಗದಲ್ಲಿನ ಗದ್ದೆ ತೋಟಗಳಿಗೂ ಹಾನಿಯಾಗಿದೆ. ಅಡಿಕೆ ಬಾಳೆ ನೆಲಕಚ್ಚಿದ್ದು, ಕಬ್ಬು ಸೇರಿದಂತೆ ಇತರ ಬೆಳೆಗಳು ಹಾನಿಯಾಗಿದೆ. ಆದರೆ ಈ ಭಾಗದ ಕಳೆದ ಒಂದು ತಿಂಗಳ ಹಿಂದೆ ನಾಟಿ ಮಾಡಿದ್ದ ಗದ್ದೆಗಳು ಸಂಪೂರ್ಣ ನಾಶವಾಗಿದೆ. ಭತ್ತದ ಸಸಿ ಕೊಳೆತು ಹೋಗಿದ್ದು, ಕೆಲ ಭಾಗಗಳಲ್ಲಿ ಗದ್ದೆಯೋ ಮಣ್ಣು ಗುಡ್ಡೆಯೋ ಎಂಬ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆಗಳು ಸಂಪೂರ್ಣ ಕೆಸರಿನಿಂದ ತುಂಬಿಕೊಂಡು ಅಂಕೋಲಾ ತಹಶೀಲ್ದಾರ್ ಹಾಗೂ ಪೊಲೀಸರು ಮತ್ತು ಸ್ಥಳೀಯ ಸಂಘ ಸಂಸ್ಥೆಗಳ ನೆರವಿನೊಂದಿಗೆ ಸಂಪರ್ಕಕ್ಕೆ ವ್ಯವಸ್ಥೆ ಮಾಡಲಾಗಿದೆ. ಆದರೆ ನೆರೆಯೇನೋ ನಿಂತಿದೆ. ಇಲ್ಲಿನ ಹಾನಿಯನ್ನು ಊಹಿಸಲು ಸಾಧ್ಯವಾಗುವುದಿಲ್ಲ. ನಾಟಿ ಮಾಡಿದ ಗದ್ದೆಗಳು ಹೂಳು ತುಂಬಿಕೊಂಡಿದ್ದು, ಇದನ್ನು ನೋಡಿದವರಿಗೆ ಕರುಳು ಕಿತ್ತು ಬರುವಂತಿದೆ. ಇದರಿಂದ ಗ್ರಾಮಸ್ಥರಿಗೆ ಮುಂದೇನು ಎನ್ನುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನು ಗ್ರಾಮದ ಈಗಿನ ಸ್ಥಿತಿಗತಿಯ ಬಗ್ಗೆ ನಮ್ಮ ಪ್ರತಿನಿಧಿ ಪ್ರತ್ಯಕ್ಷ ವರದಿ ನೀಡಿದ್ದು ಇಲ್ಲಿದೆ ನೋಡಿ.

Body:ಕ

Conclusion:ಕ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.