ಕಾರವಾರ: ಮೀನುಗಾರಿಕೆಗೆ ತೆರಳಿದ ಬೋಟ್ನ ಎಂಜಿನ್ ಬಂದ್ ಆಗಿ ರಾಜ್ಯದ 8 ಜನ ಮೀನುಗಾರರು ಗೋವಾ ರಾಜ್ಯದ ಲೋಲೆಮ್ ಬಳಿ ಸಿಲುಕಿಕೊಂಡಿದ್ದಾರೆ.
ಉಡುಪಿ ಮೂಲದ ರಾಜ್ ಕಿರಣ್ ಎನ್ನುವ ಬೋಟ್ನಲ್ಲಿದ್ದ ಮೀನುಗಾರರು, ಉಡುಪಿಯಿಂದ ಮೀನುಗಾರಿಕೆಗೆ ಗೋವಾ ಕಡೆ ತೆರಳುವಾಗ ಎಂಜಿನ್ ಬಂದ್ ಆಗಿದೆ. ಹೀಗಾಗಿ ಸಮುದ್ರದ ಮಧ್ಯದಲ್ಲಿಯೇ ಸಿಲುಕಿಕೊಂಡಿದ್ದಾರೆ. ಅರಬ್ಬೀ ಸಮುದ್ರದಲ್ಲಿ ಚಂಡಮಾರುತದ ಅಬ್ಬರ ಹೆಚ್ಚಿರುವ ಕಾರಣ ಆತಂಕದಲ್ಲಿರುವ ಮೀನುಗಾರರು, ರಕ್ಷಣೆಗಾಗಿ ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಿದ್ದಾರೆ.
ಅದರಂತೆ ಗೋವಾ ರಾಜ್ಯದ ಅಧಿಕಾರಿಗಳೊಂದಿಗೆ ರಾಜ್ಯದ ಆಧಿಕಾರಿಗಳು ಬೋಟ್ ಹಾಗೂ ಮೀನುಗಾರರನ್ನು ಸುರಕ್ಷಿತವಾಗಿ ಕರೆತರುವ ಪ್ರಯತ್ನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.