ಕಾರವಾರ: ಹೊಲಕ್ಕೆ ಹೊರಟಿದ್ದ ರೈತನ ಮೇಲೆ ಕರಡಿ ದಾಳಿ ನಡೆಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ. ತಾಲೂಕಿನ ಹರೆಗಾಳಿ ನಿವಾಸಿ ನಾಗರಾಜ ಬೊಮ್ಮು ಜಂಗಲೇ(31) ಕರಡಿ ದಾಳಿಗೊಳಗಾದವರು. ಇವರು ನಿನ್ನೆ (ಗುರುವಾರ) ಬೆಳಗ್ಗೆ ಗದ್ದೆಗೆ ತೆರಳುತ್ತಿದ್ದಾಗ ಎರಡು ಮರಿಗಳೊಂದಿಗೆ ಕರಡಿ ಕಾಣಿಸಿಕೊಂಡಿತ್ತು.
![Bear Attack: Farmer Serious Injury](https://etvbharatimages.akamaized.net/etvbharat/prod-images/15954822_thum.jpg)
ರೈತನನ್ನು ಕಂಡ ಮರಿಗಳೊಂದಿಗಿದ್ದ ಕರಡಿ ಏಕಾಏಕಿ ದಾಳಿ ನಡೆಸಿದೆ. ನಾಗರಾಜ ಅವರ ಮುಖ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿವೆ. ದಾಂಡೇಲಿಯ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.