ETV Bharat / state

ಜಾಲತಾಣದಲ್ಲಿ ನಕಲಿ ಖಾತೆ ಸೃಷ್ಟಿಸಿ ತೇಜೋವಧೆಗೆ ಸಂಚು.. ದೂರು ನೀಡಿದ ಮಾಜಿ ಶಾಸಕ ಮಂಕಾಳ ವೈದ್ಯ.. - ಫೇಸ್​​ಬುಕ್​ ಸುದ್ದಿ

‘ಕಾಂಗ್ರೆಸ್ ಅಭಿಮಾನಿ ಬಳಗ’ ಫೇಸ್​​​​ಬುಕ್ ಖಾತೆ, ‘ನಮ್ಮ ಸ್ನೇಹಿತರು’ ಗ್ರೂಪ್, ‘ಬಿಜೆಪಿ ಉತ್ತರ ಕನ್ನಡ’ ವಾಟ್ಸ್‌ಆ್ಯಪ್ ಗ್ರೂಪ್, ‘ಪ್ರಾಣಿಪ್ರಿಯ ವಾಟ್ಸ್‌ಆ್ಯಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ..

mla-makala-vaidya
ಶಾಸಕ ಮಂಕಾಳ ವೈದ್ಯ
author img

By

Published : Jan 29, 2021, 4:48 PM IST

Updated : Jan 29, 2021, 5:31 PM IST

ಭಟ್ಕಳ (ಉತ್ತರ ಕನ್ನಡ) : ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ತನ್ನ ಹಾಗೂ ಪಕ್ಷದ ತೇಜೋವಧೆಗೆ ಸಂಚು ನಡೆಸಿದ್ದಾರೆ ಎಂದು ಮಾಜಿ ಶಾಸಕ ಮಂಕಾಳ ವೈದ್ಯ ಮುರ್ಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್​​ನಲ್ಲಿ ಕಾಂಗ್ರೆಸ್ ಅಭಿಮಾನಿ ಬಳಗ ವ್ಯಾಟ್ಸ್‌ಆ್ಯಪ್​​​ನಲ್ಲಿ ‘ನಮ್ಮ ಸ್ನೇಹಿತರು’, ‘ಬಿಜೆಪಿ ಉತ್ತರ ಕನ್ನಡ’, ‘ಬಿಜೆಪಿ ಉತ್ತರಕನ್ನಡ’, ‘ಪ್ರಾಣಿ ಪ್ರಿಯ’ ಎನ್ನುವ ಖಾತೆಗಳನ್ನು ತೆರದು ತೇಜೋವಧೆಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

Poster torn in fake account
ನಕಲಿ ಖಾತೆಯಲ್ಲಿ ಹರಿಬಿಟ್ಟಿದ್ದ ಪೋಸ್ಟರ್​

ಗ್ರಾಪಂ ಚುನಾವಣೆ ನಡೆಯುವ ಸಂದರ್ಭ ‘ಕಾಂಗ್ರೆಸ್ ಅಭಿಮಾನಿ ಬಳಗ’ (ಹಿಂದೆ ಶಿಕ್ಷಣ ಪ್ರೇಮಿ ಮಂಕಾಳ ವೈದ್ಯ ಎಂದಿತ್ತು) ಎನ್ನುವ ಹೆಸರಿನಲ್ಲಿ ಮುಸ್ಲಿಂ ಅಭ್ಯರ್ಥಿಗಳು ಮಂಕಾಳ ವೈದ್ಯರ ಕಾಲಿಗೆ ಬಿದ್ದು, ಮುಸ್ಲಿಂ ಹಿಂದು ಹುಲಿ ತಾನು, ನಿಮಗೆ ತಾಕತ್ ಇದ್ದರೆ ಹಿಂದೂ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಕೋಮು ದ್ವೇಷ ಹರಡುವ ಸಂದೇಶ ಹರಡಿ, ಹಿನ್ನಡೆ ಉಂಟಾಗುವ ಹಾಗೆ ಮಾಡಿದ್ದಾರೆ.

ಅದೇ ರೀತಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮುಖಂಡರು ರಾಮಮಂದಿರ ನಿರ್ಮಾಣ ನಿಧಿ ಸಮರ್ಪಣೆ ಭಾಗವಹಿಸಬಾರದು. ಭಾಗವಹಿಸಿದಲ್ಲಿ ಅಂತವರನ್ನು ಪಕ್ಷದಿಂದ ಉಚ್ಚಾಟಿಸಲಾಗುವು ಎಂದು ಬರೆಯುವ ಮೂಲಕ ಮಾಜಿ ಶಾಸಕ ಮಂಕಾಳು ವೈದ್ಯ ಹಾಗೂ ಕಾಂಗ್ರೆಸ್ ನಾಯಕರ ಫೋಟೋ ಹಾಕಿದ್ದ ಭಟ್ಕಳದ ಕಾಂಗ್ರೆಸ್ ಅಭಿಮಾನಿ ಬಳಗದಿಂದ ಫೋಸ್ಟ್ ಮಾಡಲಾಗಿತ್ತು.

ಸದ್ಯ ‘ಕಾಂಗ್ರೆಸ್ ಅಭಿಮಾನಿ ಬಳಗ’ ಫೇಸ್​​​​ಬುಕ್ ಖಾತೆ, ‘ನಮ್ಮ ಸ್ನೇಹಿತರು’ ಗ್ರೂಪ್, ‘ಬಿಜೆಪಿ ಉತ್ತರ ಕನ್ನಡ’ ವಾಟ್ಸ್‌ಆ್ಯಪ್ ಗ್ರೂಪ್, ‘ಪ್ರಾಣಿಪ್ರಿಯ ವಾಟ್ಸ್‌ಆ್ಯಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ.

ಇದನ್ನೂ ಓದಿ: ಹಳಿಯಾಳದ ವಿದ್ಯಾರ್ಥಿನಿ ಜಿಪಂ ಸಿಇಒ.. ಇವ್ರು ಆತ್ಮಸ್ಥೈರ್ಯ ತುಂಬುವ ಅಧಿಕಾರಿ..

Last Updated : Jan 29, 2021, 5:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.