ETV Bharat / state

ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಚ್ಚಿ ಕೊಂದ ಅಣ್ಣ... ಎಸ್ಕೇಪ್​ ಆಗಲು ಹೋಗಿ ಅಂದರ್​ - Karwar latest news

ಮನೆಯಲ್ಲಿ ಕಾಲಹರಣ ಮಾಡುವ ಬದಲಾಗಿ ಕೆಲಸಕ್ಕೆ ಹೋಗು ಎಂದು ಬುದ್ಧಿವಾದ ಹೇಳಿರುವ ತಮ್ಮನನ್ನೇ ಅಣ್ಣ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ.

Elder brother murder his Younger brother

author img

By

Published : Jul 13, 2021, 2:58 AM IST

ಕಾರವಾರ: ಅವರಿಬ್ಬರೂ ರಕ್ತ ಹಂಚಿಕೊಂಡು ಹುಟ್ಟಿರುವ ಸಹೋದರರು. ತಾಯಿಯೊಂದಿಗೆ ವಾಸವಾಗಿದ್ದ ಇಬ್ಬರಲ್ಲೂ ಸಣ್ಣ-ಪುಟ್ಟ ವಿಚಾರಕ್ಕಾಗಿ ವೈಮನಸ್ಸು ಏರ್ಪಟ್ಟಿತ್ತು. ಇಷ್ಟು ದಿನ ಕೇವಲ ಮಾತಿಗೆ ಸಿಮೀತವಾಗಿದ್ದ ಜಗಳ ಇದೀಗ ಓರ್ವನ ಸಾವಿನಲ್ಲಿ ಅಂತ್ಯ ಕಂಡಿದೆ.

Elder brother murder
ಕೊಲೆಯಾಗಿರುವ ಅರ್ಜುನ್​​

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣದ ಚರ್ಚ್ ರಸ್ತೆಯಲ್ಲಿ ತಾರಾ ಮೇಸ್ತಾ ಎಂಬುವವರು ತನ್ನಿಬ್ಬರು ಮಕ್ಕಳಾದ ಕೃಷ್ಣ ಹಾಗೂ ಅರ್ಜುನ್​​ನೊಂದಿಗೆ ವಾಸವಾಗಿದ್ದರು. ಮನೆಯಲ್ಲಿ ತಾಯಿ ತಾರಾ ಹಾಗೂ 2ನೇ ಮಗ ಅರ್ಜುನ್​ ಕೆಲಸ ಮಾಡುತ್ತಿದ್ದರು. ಆದರೆ ದೊಡ್ಡ ಮಗ ಕೃಷ್ಣ ಯಾವುದೇ ಕೆಲಸ ಮಾಡದೇ ಮನೆಯಲ್ಲಿಯೇ ಇರುತ್ತಿದ್ದನು. ಇದೇ ವಿಚಾರಕ್ಕಾಗಿ ಅರ್ಜುನ್​ ಅಣ್ಣನೊಂದಿಗೆ ಅನೇಕ ಸಲ ಜಗಳ ಸಹ ಮಾಡಿದ್ದನು. ಕಾಲಹರಣ ಮಾಡದೇ ಕೆಲಸಕ್ಕೆ ಹೋಗುವಂತೆ ಬುದ್ದಿವಾದ ಹೇಳಿದ್ದನು. ಇದರಿಂದ ಆಕ್ರೋಶಗೊಂಡ ಅಣ್ಣ ಕೃಷ್ಣ ತಮ್ಮನನ್ನ ಕೊಲೆ ಮಾಡಿದ್ದಾನೆ.

ಇದನ್ನೂ ಓದಿರಿ: 6 ಗ್ರಾಂ ಚಿನ್ನಕ್ಕಾಗಿ ನಡೆದಿತ್ತು ಕೊಲೆ... ಮಕ್ಕಳಿಗೆ ಕನ್ನಡದ 'ದೃಶ್ಯಂ' ಸಿನಿಮಾ ಕಥೆ ಹೇಳಿಕೊಟ್ಟಿದ್ದ ಕೊಲೆಗಡುಕರು

ಜುಲೈ 11ರಂದು ತಾಯಿ ತಾರಾ ಎಂದಿನಂತೆ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗಿದ್ದರು. ಆದರೆ ಮನೆ ಬೀಗ ಹಾಕಿದ್ದರಿಂದ ಮಕ್ಕಳು ಬರಬಹುದು ಎಂದು ಪಕ್ಕದ ಮನೆಯಲ್ಲಿ ಕಾಯುತ್ತ ಕುಳಿತಿದ್ದರು. ಆದರೆ ತುಂಬಾ ಸಮಯವಾದ್ರೂ ಮನೆಗೆ ಮಕ್ಕಳು ಬಂದಿಲ್ಲ. ಹೀಗಾಗಿ ಬೇರೆ ದಾರಿಯಿಲ್ಲದೇ ನೆರೆಮನೆಯವರ ಸಹಾಯದಿಂದ ಮನೆಯ ಬೀಗ ಒಡೆದು ಒಳಹೋಗಿದ್ದಾಳೆ.

ಪ್ರಕರಣದ ಮಾಹಿತಿ ಬಿಚ್ಚಿಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ತಾಯಿಗೆ ದಿಢೀರ್ ಶಾಕ್​

ಮನೆಯ ಬೀಗ ಒಡೆದು ಒಳಹೋಗುತ್ತಿದ್ದಂತೆ ತಾಯಿಗೆ ದಿಢೀರ್​ ಶಾಕ್​ ಆಗಿದೆ. ಕೆಲಸಕ್ಕೆ ಹೋಗಬೇಕಾಗಿದ್ದ 2ನೇ ಮಗ ಅರ್ಜುನ್​ ಮನೆಯೊಳಗೆ ರಕ್ತಸಿಕ್ತವಾಗಿ ಸತ್ತು ಬಿದ್ದಿದ್ದನು. ಎರಡನೇ ಮಗ ಮನೆಗೆ ಬಾರದೇ ನಾಪತ್ತೆಯಾಗಿದ್ದನು. ಇದೇ ವಿಚಾರವಾಗಿ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದರು. 23 ವರ್ಷದ ಅರ್ಜುನ್​ ತಲೆಗೆ ಬಲವಾಗಿ ಪೆಟ್ಟು ಬಿದ್ದಿರುವ ಕಾರಣ ಸಾವನ್ನಪ್ಪಿದ್ದಾನೆಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಕೃಷ್ಣನಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು ಆತನ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಸೆಕ್ಷನ್​ 202, 201 ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.