ಕಾರವಾರ (ಉತ್ತರ ಕನ್ನಡ): ವಾರದ ಹಿಂದೆ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದ ವಿಕಲಚೇತನನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಕಾರವಾರ ಮೂಲದವನು ಎನ್ನಲಾಗುತ್ತಿರುವ ರಾಜೇಶ್ (42) ಆತ್ಮಹತ್ಯೆ ಮಾಡಿಕೊಂಡ ವಿಕಲಚೇತನ. ಈತನನ್ನು ಜ.6ರಂದು ಅನಾರೋಗ್ಯದ ಹಿನ್ನೆಲೆ, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ವಿಕಲ ಚೇತನರ ಪ್ರತ್ಯೇಕ ವಾರ್ಡ್ನಲ್ಲಿದ್ದ ರಾಜೇಶ್, ಇಂದು ಬೆಳಗ್ಗೆ ಕಿಟಕಿಗೆ ಟಾವೆಲ್ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.