ETV Bharat / state

ಕೋವಿಡ್ ಟೆಸ್ಟ್​​ಗೆ ಮುಂದೆ ಬರುವಂತೆ ಉತ್ತರಕನ್ನಡ ಜಿಲ್ಲಾಧಿಕಾರಿ ಕರೆ

author img

By

Published : Sep 1, 2020, 10:21 AM IST

ಕೋವಿಡ್ ಱಪಿಡ್ ಟೆಸ್ಟ್ ಮಾಡಿಸಿಕೊಳ್ಳಲು ಜನರು ಮುಂದೆ ಬರುವಂತೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

DC Dr Harish Kumar appeals
ಜಿಲ್ಲಾಧಿಕಾರಿ ಹರೀಶ್​ ಕುಮಾರ್​

ಭಟ್ಕಳ: ಉತ್ತರಕನ್ನಡ ಜಿಲ್ಲೆಯಲ್ಲಿ ಇದುವರೆಗೆ 52 ಮಂದಿ ಜನರು ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದು, ಜನರು ಕೋವಿಡ್ ಱಪಿಡ್ ಟೆಸ್ಟ್ ಮಾಡಿಸಿಕೊಳ್ಳಲು ಮುಂದೆ ಬರುವಂತೆ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಕೋವಿಡ್ ಟೆಸ್ಟ್​​ಗೆ ಮುಂದೆ ಬರುವಂತೆ ಜಿಲ್ಲಾಧಿಕಾರಿ ಕರೆ

ಸೋಮವಾರ ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಹೆದರುವ ಅವಶ್ಯಕತೆಯಿಲ್ಲ. ಕೊರೊನಾದಿಂದ ಹೋರಾಡಲು ಜಿಲ್ಲೆ ಸಂಪೂರ್ಣ ಸಿದ್ಧವಾಗಿದೆ. ಎಲ್ಲಾ ತಾಲೂಕಾ ಆಸ್ಪತ್ರೆಯಲ್ಲಿ 50 ಬೆಡ್​ನ ಆಮ್ಲಜನಕ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದರು.

ಕೊರೊನಾದಿಂದ ಚೇತರಿಸಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಸೋಂಕಿತರ ಸಂಖ್ಯೆ 4,860 ಆಗಿದ್ದು, ಈ ಪೈಕಿ 3,664 ಮಂದಿ ಚೇತರಿಸಿಕೊಂಡಿದ್ದಾರೆ. ಭಟ್ಕಳದಲ್ಲಿ ಹೆಚ್ಚಿನ ಜನರು ಕೊನೆಯ ಕ್ಷಣದಲ್ಲಿ ವೈದ್ಯರ ಬಳಿಗೆ ಹೋಗುತ್ತಿದ್ದಾರೆ. ಇದರ ಪರಿಣಾಮವಾಗಿ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೊರೊನಾದ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಜನರು ವೈದ್ಯರ ಬಳಿಗೆ ಹೋದರೆ ಅವರು ತಕ್ಷಣ ಚಿಕಿತ್ಸೆ ನೀಡಿ ಉಳಿಸಬಹುದು ಎಂದರು.

ಕೋವಿಡ್ ಪರೀಕ್ಷೆಯನ್ನು ಸಂಪೂರ್ಣವಾಗಿ ಉಚಿತವಾಗಿ ನಡೆಸಲಾಗುತ್ತಿದೆ. ಆ್ಯಂಟಿಜೆನ್ ಪರೀಕ್ಷೆಯ ಮೂಲಕ ಕೊರೊನಾ ಪರೀಕ್ಷಿಸಲಾಗುತ್ತಿದೆ. ಮತ್ತು ಕೆಲವೇ ನಿಮಿಷಗಳಲ್ಲಿ ವರದಿ ಸಿಗಲಿದೆ. ವರದಿ ಪಾಸಿಟಿವ್​ ಬಂದವರಿಗೆ ಅವರವರ ಮನೆಯಲ್ಲೇ ಕ್ವಾರೆಂಟೈನ್ ಸೌಲಭ್ಯವನ್ನು ಒದಗಿಸಲಾಗಿದೆ. ಜ್ವರ ಅಥವಾ ಇನ್ನಾವುದೇ ಕಾಯಿಲೆ ಬಂದರೆ ಭಟ್ಕಳದಲ್ಲೇ ಚಿಕಿತ್ಸಾ ಸೌಲಭ್ಯವನ್ನೂ ಒದಗಿಸಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.