ETV Bharat / state

ಉತ್ತರ ಕನ್ನಡದಲ್ಲಿ ವಿಶೇಷ ಚೇತನರಿಗೆ ಕೋವಿಡ್‌ ಲಸಿಕಾ ಅಭಿಯಾನ ಯಶಸ್ವಿ - covid 2nd wave

ವಿಶೇಷ ಚೇತನರು ಕೊರೊನಾ ಸೋಂಕಿಗೆ ತುತ್ತಾಗುವುದನ್ನು ತಪ್ಪಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಲಸಿಕಾ ಅಭಿಯಾನ ಆಯೋಜಿಸಲಾಗಿತ್ತು. ಈ ವೇಳೆ ಒಟ್ಟು 4,871 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

uttara kannada
ಉತ್ತರಕನ್ನಡದಲ್ಲಿ ವಿಶೇಷ ಚೇತನರಿಗೆ ಕೋವಿಡ್‌ ಲಸಿಕಾ ಅಭಿಯಾನ ಯಶಸ್ವಿ
author img

By

Published : May 29, 2021, 10:35 AM IST

Updated : Jun 7, 2021, 6:14 PM IST

ಕಾರವಾರ:‌ ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷ ಚೇತನರಿಗೆ ಆಯೋಜಿಸಲಾಗಿದ್ದ ಕೋವಿಡ್‌ ಲಸಿಕಾ ಅಭಿಯಾನ ಯಶಸ್ವಿಯಾಗಿದ್ದು, ಒಟ್ಟು 4,871 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

ವಿಕಲಚೇತನರಿಗೆ ಲಸಿಕೆ ಹಾಕಿಕೊಳ್ಳಲು ತೊಂದರೆ ಉಂಟಾಗದಂತೆ ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಎರಡು ವಾಹನಗಳ ವ್ಯವಸ್ಥೆ ಮಾಡಲಾಗಿತ್ತು. ನಡೆದಾಡಲು ಸಾಧ್ಯವೇ ಇಲ್ಲದವರಿಗೆ ಮನೆ ಬಾಗಿಲಿಗೆ ವಾಹನ ಕಳುಹಿಸಿ ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ನೀಡಲಾಗಿದೆ. ಲಸಿಕಾ ಕೇಂದ್ರದಲ್ಲಿಯೂ ಅಂಗವಿಕಲರಿಗೆ ಕುಳಿತುಕೊಳ್ಳಲು ಆಸನ, ಕುಡಿಯುವ ನೀರು ಸೇರಿದಂತೆ ಇನ್ನಿತರ ವ್ಯವಸ್ಥೆ ಕಲ್ಪಿಸಿ ಜಿಲ್ಲಾಡಳಿತ ಲಸಿಕಾ ಅಭಿಯಾನ ಯಶಸ್ವಿಗೊಳಿಸಿದೆ.

ಅಭಿಯಾನದಲ್ಲಿ 18ರಿಂದ 44 ವರ್ಷ ಒಳಗಿನ 3,452 ಹಾಗೂ 44 ವರ್ಷ ಮೇಲ್ಪಟ್ಟ 2,789 ವಿಶೇಷ ಚೇತನರು ಕೊವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಕುಮಟಾ ತಾಲೂಕಿನ ತೊರ್ಕೆ ಗ್ರಾಮದಲ್ಲಿ ಶೇಕಡಾ 95ರಷ್ಟು ವಿಶೇಷ ಚೇತನರು ಲಸಿಕೆ ಪಡೆದಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 13,354 ವಿಶೇಷ ಚೇತನರಿದ್ದು, ಈ ಪೈಕಿ 6,241 ಜನರು ಈಗಾಗಲೇ ಲಸಿಕೆ ಪಡೆದುಕೊಂಡಿದ್ದಾರೆ.

ಓದಿ: ಉಚಿತ ಶಿಕ್ಷಣ: ಕೊರೊನಾದಿಂದ ಅನಾಥರಾದ ಮಕ್ಕಳ ನೆರವಿಗೆ ಬಂತು ಕೊಪ್ಪಳದ ಮಿಲೇನಿಯಂ ಶಾಲೆ

Last Updated : Jun 7, 2021, 6:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.