ETV Bharat / state

ನಿದ್ರೆಗಣ್ಣಿನಲ್ಲಿ ಕಾರು ಚಾಲನೆ: ಸಂಬಂಧಿಕರ ಅಂತ್ಯಕ್ರಿಯೆಗೆ ಬಂದು ಕೆರೆಗೆ ಹಾರವಾದ ದಂಪತಿ - Ammaji Lake of Mundagodi

ಸಿಆರ್​​​​​ಪಿಎಫ್ ಯೋಧರಾಗಿ(CRPF warrior) ನಿವೃತ್ತರಾಗಿದ್ದ ಅವರು ಕರವಳ್ಳಿಯಲ್ಲಿ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ಆಗಮಿಸುವಾಗ ನಿದ್ದೆಗಣ್ಣಿನಲ್ಲಿದ್ದ ಅವರು ತಮ್ಮ ಕಾರಿನ ನಿಯಂತ್ರಣ ಕಳೆದುಕೊಂಡಿದ್ದಾರೆ. ಪರಿಣಾಮ ಕಾರು ಕೆರೆಯಲ್ಲಿ ಮುಳುಗಿದೆ.

Couple died after drowned into lake at karwar
ಸಂಬಂಧಿಕರ ಅಂತ್ಯಕ್ರಿಯೆಗೆ ಬಂದು ಕೆರೆಗೆ ಹಾರವಾದ ದಂಪತಿ
author img

By

Published : Nov 15, 2021, 12:38 PM IST

ಕಾರವಾರ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆ ಕಾರಿನಲ್ಲಿ ಬರುತ್ತಿದ್ದ ದಂಪತಿಗಳಿಬ್ಬರು ಕೆರೆಯಲ್ಲಿ ಮುಳುಗಿ ಸಾವಿಗೀಡಾದ ಘಟನೆ ಮುಂಡಗೋಡದ ಅಮ್ಮಾಜಿ ಕೆರೆ(Ammaji Lake of Mundagod) ಯಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ವಾಸವಾಗಿರುವ ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯ(Mundgod Taluk of Arishinageri) ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ.

ಓದಿ: ಹುಷಾರ್​.. ವರ್ಕ್​ ಫ್ರಂ ಹೋಮ್ ಹೆಸರಿನಲ್ಲಿ ಉದ್ಯೋಗಿಗಳಿಗೆ ​ವಂಚಿಸಿದ ಸೈಬರ್​ ಖದೀಮರು

ಸಿಆರ್​​​ಪಿಎಫ್ ಯೋಧರಾಗಿ ನಿವೃತ್ತರಾಗಿದ್ದ ಅವರು ಕರವಳ್ಳಿಯಲ್ಲಿ ಸಂಬಂಧಿಯೊಬ್ಬರ ಅಂತ್ಯಕ್ರಿಯೆಗೆ ಆಗಮಿಸುವಾಗ ಅವರ ಕಾರು ನಿಯಂತ್ರಣ ತಪ್ಪಿ ಪಕ್ಕದಲ್ಲಿರುವ ಕೆರೆಗೆ ಬಿದ್ದಿದೆ ಎನ್ನಲಾಗುತ್ತಿದೆ. ಕಾರು ಭಾಗಶಃ ಮುಳುಗಡೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಆದರೆ, ಕಾರು ಉಲ್ಟಾ ಆಗಿ ಬಿದ್ದ ಕಾರಣ ಕಾರಿನ ಬಾಗಿಲು ತೆಗೆಯಲಾಗದೇ ಇಬ್ಬರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ಸ್ಥಳಕ್ಕೆ ಸಿಪಿಐ ಎಸ್.ಎಸ್ ಸಿಮಾನಿ, ಪಿಎಸ್ಐ ಎನ್.ಡಿ ಜಕ್ಕಣ್ಣ ಭೇಟಿ ನೀಡಿದರು. ಪೊಲೀಸ್ ಸಿಬ್ಬಂದಿ ಮತ್ತು ಅಗ್ನಿ ಶಾಮಕದಳದವರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.