ಶಿರಸಿ : ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಕುರಿತು ಶಿವರಾಮ ಹೆಬ್ಬಾರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇಂದು ನಾನು ಹಾಗೂ ನನ್ನ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ್ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷೆಗೊಳಗಾಗಿದ್ದು, ವರದಿಯಲ್ಲಿ ಇಬ್ಬರಿಗೂ ಪಾಸಿಟಿವ್ ಬಂದಿದೆ. ಯಾವುದೇ ಹೆಚ್ಚಿನ ರೋಗಲಕ್ಷಣ ಇಲ್ಲದ ಕಾರಣ, ವೈದ್ಯರ ಸಲಹೆ ಪಡೆದು ಹೋಂ ಕ್ವಾರಂಟೈನ್ನಲ್ಲಿದ್ದು, ಚಿಕಿತ್ಸೆ ಪಡೆಯಲಿದ್ದೇವೆ.
ನಿಮ್ಮೆಲ್ಲರ ಆರ್ಶೀವಾದ, ಹಾರೈಕೆಯಿಂದ ಅತೀ ಶೀಘ್ರ ಗುಣಮುಖವಾಗಿ ಜನರ ಸೇವೆಯಲ್ಲಿ ತೊಡಗಿಕೊಳ್ಳುವ ವಿಶ್ವಾಸವಿದೆ. ಕಳೆದ 2 ದಿನಗಳಿಂದ ನಮ್ಮ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸೂಚಿಸಿದ್ದಾರೆ ಕಾರ್ಮಿಕ ಸಚಿವ ಹೆಬ್ಬಾರ್.