ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಂದು 45 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 13,020ಕ್ಕೆ ಏರಿಕೆಯಾಗಿದೆ.
ಕಾರವಾರದ 03, ಕುಮಟಾ 09, ಹೊನ್ನಾವರ 18, ಶಿರಸಿ 10, ಯಲ್ಲಾಪುರ 01, ಜೊಯಿಡಾ 01, ಹಳಿಯಾಳದ ಮೂವರಲ್ಲಿ ಸೋಂಕು ತಗುಲಿದೆ. ಇನ್ನು, ಕಾರವಾರದಲ್ಲಿ 09, ಕುಮಟಾದಲ್ಲಿ 04, ಹೊನ್ನಾವರದಲ್ಲಿ 05, ಮುಂಡಗೋಡದ 225 ಹಾಗೂ ಹಳಿಯಾಳದಲ್ಲಿ ಮೂವರು ಸೇರಿ ಒಟ್ಟು 246 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈವರೆಗೆ 165 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಸದ್ಯ, ಜಿಲ್ಲೆಯಲ್ಲಿ 629 ಸಕ್ರಿಯ ಪ್ರಕರಣಗಳಿದ್ದು, 230 ಮಂದಿ ಹೋಂ ಐಸೋಲೇಷನ್ ಹಾಗೂ 399 ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.