ಭಟ್ಕಳ: ಶುಕ್ರವಾರ ಸೇರಿದಂತೆ ಪ್ರತಿದಿನ ಐದು ಹೊತ್ತಿನ ಪ್ರಾರ್ಥನೆಯನ್ನು ತಮ್ಮ ಮನೆಯಲ್ಲಿಯೇ ನಿರ್ವಹಿಸುವಂತೆ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ.
ಮಂಗಳವಾರ ಸಂಜೆ ಭಟ್ಕಳದ ಎರಡೂ ಜಮಾತ್ ನ ಮುಖಂಡರು, ತಂಝೀಮ್ ಸಂಸ್ಥೆ ಹಾಗೂ ವಿವಿಧ ವಿದ್ವಾಂಸರೊಂದಿಗೆ ನಡೆದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಭಟ್ಕಳದಲ್ಲಿ ಮಂಗಳವಾರ ಇಬ್ಬರಲ್ಲಿ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.