ETV Bharat / state

ಎರಡು ತಲೆ, ಆರು ಕಾಲಿರುವ ವಿಚಿತ್ರ ಕರು.. ಶಸ್ತ್ರ ಚಿಕಿತ್ಸೆ ಮೂಲಕ ಹೊರ ತೆಗೆದ ವೈದ್ಯ - ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್​​

ಸಿದ್ದಾಪುರ ತಾಲೂಕಿನಲ್ಲಿ ಮಲೆನಾಡು ಗಿಡ್ಡತಳಿಯ ಹಸುವಿಗೆ ವಿಚಿತ್ರವಾದ ಕರು ಜನಿಸಿದ್ದು, ಅಚ್ಚರಿ ನೋಡಲು ಜನತೆ ಮುಗಿ ಬಿದ್ದಿದ್ದಾರೆ

calf born with 2 heads, 6 legs
ಎರಡು ತಲೆ, ಆರು ಕಾಲಿರುವ ವಿಚಿತ್ರ ಕರು
author img

By

Published : Oct 17, 2020, 7:20 PM IST

Updated : Oct 17, 2020, 8:00 PM IST

ಶಿರಸಿ (ಉತ್ತರ ಕನ್ನಡ): ಸಿದ್ದಾಪುರ ತಾಲೂಕಿನ ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶ್ರೇಯಸ್ ರಾಜ್​​ರವರು ಸತತ 2 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿ ಎರಡು ತಲೆ ಹಾಗೂ ಆರು ಕಾಲುಗಳಿರುವ ಕರುವನ್ನ ಹೊರ ತೆಗೆದಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತಾಳಗುಪ್ಪದ ಮಡಿವಾಳಕೇರಿಯ ಅನಂತ್ ವೀರಭದ್ರ ಎಂಬುವರು ಸಿದ್ದಾಪುರದ ಪಶುವೈದ್ಯಾಧಿಕಾರಿ ಬಳಿ ಮಲೆನಾಡು ಗಿಡ್ಡ ತಳಿಯ ಹಸುವನ್ನು ಕರೆ ತಂದಿದ್ದರು. ಆಪರೇಷನ್ ಮಾಡಿ ಕರುವನ್ನು ಹೊರತೆಗೆದಾಗ ಈ ವಿಚಿತ್ರ ಕರು ಗರ್ಭದಲ್ಲೇ ಸಾವನ್ನಪ್ಪಿತ್ತು.
ಆದರೆ, ಬಲು ಅಪರೂಪಕ್ಕೆ ಈ ರೀತಿ ಜನಿಸಿರುವ ಎರಡು ತಲೆ ಹಾಗೂ ಆರು ಕಾಲುಗಳಿರುವ ಕರುವನ್ನು ಜನತೆ ಮುಗಿಬಿದ್ದು ವೀಕ್ಷಿಸಿದರು. ಅಲ್ಲದೇ ಕರು ಹೊರ‌ ತೆಗೆದು ತಾಯಿ ಆಕಳಿನ ಬದುಕು ಉಳಿಸಿದ ವೈದ್ಯರ ಶ್ರಮಕ್ಕೆ ಶ್ಲಾಘನೆ ವ್ಯಕ್ತವಾಯಿತು.‌

Last Updated : Oct 17, 2020, 8:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.