ETV Bharat / state

ಕಾರವಾರ: ಮೀನುಗಾರಿಕೆ ಮುಗಿಸಿ ವಾಪಸ್​ ಬರುವಾಗ ಮುಳುಗಿದ ಬೋಟ್

ಹೊನ್ನಾವರದ ಬಂದರಿನಿಂದ ಮೀನುಗಾರಿಕೆಗೆ ತೆರಳಿ ಹಿಂತಿರುಗಿ ಬರುವಾಗ ಅಳವೆ ಪ್ರದೇಶದಲ್ಲಿ ಬೋಟ್​ ಮುಳುಗಡೆಯಾಗಿದೆ.

A submerged the boat in karwar sea
ಮೀನುಗಾರಿಕೆ ಮುಗಿಸಿಕೊಂಡು ವಾಪಸ್​ ಬರುವಾದ ಮುಳುಗಿದ ಬೋಟ್
author img

By

Published : Sep 3, 2021, 7:25 PM IST

ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಡೆಯಾಗಿದ್ದು, 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಈ ಘಟನೆ ಹೊನ್ನಾವರ ತಾಲೂಕಿನ ಕಾಸರಕೋಡ ಟೊಂಕಾದ ಅಳವೆ ಪ್ರದೇಶದಲ್ಲಿ ನಡೆದಿದೆ.

ಹೊನ್ನಾವರದ ಬಂದರಿನಿಂದ ಶಿವರಾಮ ಶ್ರೀಯಾನ್ ಮಾಲೀಕತ್ವದ ಶ್ರೀ ಕೃಷ್ಣ ಭಂಡಾರಿ ಹೆಸರಿನ ಬೋಟ್ ಮೀನುಗಾರಿಕೆಗೆ ತೆರಳಿ ವಾಪಸ್​ ಬರುವಾಗ ಘಟನೆ ನಡೆದಿದೆ.

ಮೀನುಗಾರಿಕೆ ಮುಗಿಸಿ ವಾಪಸ್​ ಬರುವಾಗ ಮುಳುಗಿದ ಬೋಟ್

ಈ ಬಗ್ಗೆ ತಕ್ಷಣ ಕರಾವಳಿ ಕಾವಲು ಪಡೆ ಪೊಲೀಸರಿಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಅಲ್ಲಿಯೇ ಸಮೀಪದಲ್ಲಿದ್ದ ಸ್ಥಳೀಯ ಮೀನುಗಾರರು ರಕ್ಷಣೆಗೆ ಧಾವಿಸಿದ್ದಾರೆ. ಪರಿಣಾಮ, ಬೋಟ್​ನಲ್ಲಿದ್ದ 6 ಮಂದಿ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ.

ಆದರೆ, ಮುಳುಗಡೆಯಾದ ಬೋಟ್‌ನಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸಮುದ್ರಪಾಲಾಗಿವೆ ಎಂದು ಮೀನುಗಾರರು ಬೇಸರ ಹೊರಹಾಕಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.