ETV Bharat / state

ಕಾಡು ಬೆಕ್ಕು, ಮಂಗ ಮಾಂಸ ಸಂಗ್ರಹ.. ಅರಣ್ಯಾಧಿಕಾರಿಗಳಿಂದ ಬೇಟೆಗಾರರ ಬಂಧನ.. - ಭಟ್ಕಳ ಕಾಡು ಪ್ರಾಣಿ ಮಾಂಸ ಸಂಗ್ರಹಣೆ ಬೆಟೆಗಾರರ ಬಂಧನ ಸುದ್ದಿ

ಬೆಳಕೆ ಅರಣ್ಯ ವಲಯದಲ್ಲಿ  ಮಂಗ ಹಾಗೂ ಕಾಡು ಬೆಕ್ಕಿನ ಮಾಂಸ ಶೇಖರಣೆ ವಿಚಾರವಾಗಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಇಂದು 5 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Bhatkal forest department
ಭಟ್ಕಳ ಅರಣ್ಯ ಇಲಾಖೆ
author img

By

Published : Dec 21, 2019, 9:45 PM IST

ಭಟ್ಕಳ: ತಾಲೂಕಿನ ಬೆಳಕೆ ಅರಣ್ಯ ವಲಯದಲ್ಲಿ ಮಂಗ ಹಾಗೂ ಕಾಡು ಬೆಕ್ಕಿನ ಮಾಂಸ ಶೇಖರಣೆ ವಿಚಾರವಾಗಿ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಇಂದು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

ಬಂಧಿತ ಐವರು ಆರೋಪಿಗಳಾದ ರಾಘವೇಂದ್ರ ರಾಮಣ್ಣ (32), ಮರಿಯಣ್ಣ ರಾಮಪ್ಪ ಭೋವಿವಡ್ಡರ (47), ವೆಂಕಟೇಶ ಮುನಿಯಪ್ಪ ಭೋವಿವಡ್ಡರ (47), ನಾಗೇಂದ್ರ ಪೆದ್ದಪ್ಪ ಭೋವಿವಡ್ಡರ (18) ಹಾಗೂ ಕೃಷ್ಣ ಚಿನ್ನಪ್ಪ ಭೋವಿವಡ್ಡರ (32) ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ, ಬೋವಿವಡ್ಡರ ಗಡಿಕಟ್ಟೆ ನಿವಾಸಿಗರು ಎಂದು ತಿಳಿದು ಬಂದಿದೆ.

ಅರಣ್ಯಾಧಿಕಾರಿಗಳಿಂದ ಬೇಟೆಗಾರರ ಬಂಧನ..

ಶುಕ್ರವಾರ ಬೆಳಕೆ‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಾಗರ ಮೂಲದ ಬೇಟೆಗಾರರು ಮಂಗ ಹಾಗೂ ಕಾಡು ಬೆಕ್ಕಿನ ಮಾಂಸವನ್ನು ಶೇಖರಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹೊನ್ನಾವರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪ ವಿಭಾಗದ ಸಮ್ಮುಖದಲ್ಲಿ, ಭಟ್ಕಳ ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್, ದೇವಾಡಿಗ ಅವರ ತಂಡ ಕಾರ್ಯಾಚರಣೆಗಿಳಿದಿದ್ದರು. ಸತತ ಎರಡು ದಿನದ ಕಾರ್ಯಾಚರಣೆಯ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಕಾಂತ, ಮಲ್ಲಿಕಾರ್ಜುನ ಅಂಗಡಿ, ಪ್ರಮೋದ್, ಮಂಜುನಾಥ ಅರಣ್ಯ ರಕ್ಷಕರಾದ ವೀರೇಶ, ಪ್ರಶಾಂತ ಇವರು ಕಾರ್ಯಾಚರಣೆ ತಂಡದಲ್ಲಿದ್ದರು.

Intro:ಭಟ್ಕಳ: ತಾಲೂಕಿನ ಬೆಳಕೆ ಅರಣ್ಯ ವಲಯದ ಸರ್ವೇ ನಂ 100 ರಲ್ಲಿ ಟೆಂಟ ನಿರ್ಮಿಸಿ ಮಂಗ ಹಾಗೂ ಕಾಡು ಬೆಕ್ಕನ್ನು ಬಲೆಯಿಂದ ಹಿಡಿದು ಮಾಂಸ ತಯಾರಿಸಿದ್ದ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಎರಡು ದಿನ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಶನಿವಾರದಂದು 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದಾರೆ. Body:ಬಂಧಿತ ಐವರು ಆರೋಪಿಗಳಾದ ರಾಘವೇಂದ್ರ ರಾಮಣ್ಣ(32), ಮರಿಯಣ್ಣ ರಾಮಪ್ಪ ಭೋವಿವಡ್ಡರ (47), ವೆಂಕಟೇಶ ಮುನಿಯಪ್ಪ ಭೋವಿವಡ್ಡರ (47), ನಾಗೇಂದ್ರ ಪೆದ್ದಪ್ಪ ಭೋವಿವಡ್ಡರ (18) ಹಾಗೂ ಕೃಷ್ಣ ಚಿನ್ನಪ್ಪ ಭೋವಿವಡ್ಡರ (32) ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೊನ್ನೇಸರ, ಬೋವಿವಡ್ಡರ ಗಡಿಕಟ್ಟೆ ನಿವಾಸಿಗರು ಎಂದು ತಿಳಿದು ಬಂದಿದೆ.
ಶುಕ್ರವಾರದಂದು ಬೆಳಕೆ‌ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಸಾಗರ ಮೂಲದ ಬೇಟೆಗಾರರು ಬಲೆಯನ್ನು ಬಳಸಿ ಮಂಗ ಹಾಗೂ ಕಾಡು ಬೆಕ್ಕನ್ನು ಬೇಟೆ ಮಾಡಿ ಪ್ರಾಣಿಯ ಮಾಂಸವನ್ನು ಕತ್ತರಿಸಿ ಅದನ್ನು ಶೇಖರಿಸಿಟ್ಟಿದ್ದರು. ಈ‌ ಬಗ್ಗೆ ಖಚಿತ ಮಾಹಿತಿ ಪಡೆದು ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ರವರ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪ ವಿಭಾಗ ರವರ ಸಮ್ಮುಖದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಶ್ರೀಮತಿ ಸವಿತಾ ಆರ್, ದೇವಾಡಿಗ ಅವರ ತಂಡ ಕಾರ್ಯಾಚರಣೆಗಿಳಿದಿದ್ದರು. ಸತತ ಎರಡು ದಿನದ ಕಾರ್ಯಾಚರಣೆಯ ಬಳಿಕ ಬೇಟೆಗಾರರ ತಂಡವನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಶನಿವಾರದಂದು ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳ ಮೇಲೆ ಅರಣ್ಯ ಕಾಯ್ದೆಯಡಿ ಪ್ರಥಮ ಮಾಹಿತಿ ವರದಿಯನ್ನು ದಾಖಲಸಿ ಭಟ್ಕಳದ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.
ಕಾರ್ಯಚರಣೆ ತಂಡದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಶ್ರೀಕಾಂತ, ಮಲ್ಲಿಕಾರ್ಜುನ ಅಂಗಡಿ, ಪ್ರಮೋದ, ಮಂಜುನಾಥ ಅರಣ್ಯ ರಕ್ಷಕರಾದ ವಿರೇಶ, ಪ್ರಶಾಂತ ಇವರು ಕಾರ್ಯಚರಣೆಯಲ್ಲಿ ಇದ್ದರು.Conclusion:ಉದಯ ನಾಯ್ಕ ಭಟ್ಕಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.