ಭಟ್ಕಳ: ಶಾಸಕರ ಪ್ರಾದೇಶಿಕಾಭಿವೃದ್ಧಿ ನಿಧಿ ಯೋಜನೆಯಿಂದ ಭಟ್ಕಳ ಮತ್ತು ಹೊನ್ನಾವರ ತಾಲೂಕು ಆಸ್ಪತ್ರೆಗೆ, ಆಂಬ್ಯುಲೆನ್ಸ್ ವಾಹನವನ್ನು ಸ್ವತಃ ಶಾಸಕ ಸುನೀಲ್ ನಾಯ್ಕ ಚಲಾಯಿಸಿಕೊಂಡು ಬಂದು ಹಸ್ತಾಂತರಿಸಿದರು.
ಓದಿ: ಭಟ್ಕಳ - ತಿರುಪತಿ ನೂತನ ಬಸ್ಗೆ ಶಾಸಕ ಸುನೀಲ್ ನಾಯ್ಕ ಚಾಲನೆ
ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಹಸ್ತಾಂತರಿಸುವ ಒಂದು ಆಂಬ್ಯುಲೆನ್ಸ್ ಅನ್ನು, ದೇವಸ್ಥಾನದಿಂದ ಭಟ್ಕಳ ತಾಲೂಕು ಆಸ್ಪತ್ರೆಯವರೆಗೆ ಸಂಶುದ್ದೀನ್ ಸರ್ಕಲ್ ಮಾರ್ಗವಾಗಿ ಸ್ವತಃ ಶಾಸಕರೇ ಚಲಾಯಿಸಿದರು. ನೂತನ ಆಂಬ್ಯುಲೆನ್ಸ್ ಗುಣಮಟ್ಟವನ್ನು ಪರಿಶೀಲಿಸಿ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಸವಿತಾ ಕಾಮತ್ ಅವರಿಗೆ ಹಸ್ತಾಂತರಿಸಿದರು.
ಆಸ್ಪತ್ರೆಯ ಹಲವು ವರ್ಷಗಳ ಬೇಡಿಕೆಯಾದ್ದರಿಂದ, ಆಸ್ಪತ್ರೆಯ ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿ ತಮ್ಮ ಆಸ್ಪತ್ರೆಯ ನೂತನ ಆಂಬ್ಯುಲೆನ್ಸ್ಗೆ ಚಪ್ಪಾಳೆ ತಟ್ಟಿ ಹೂವು ಚೆಲ್ಲುವುದರ ಮೂಲಕ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.