ETV Bharat / state

ಉತ್ತರಕನ್ನಡಕ್ಕೂ ವಕ್ಕರಿಸಿತು ಮಹಾರಾಷ್ಟ್ರ ನಂಜು: ಇಂದು ಮತ್ತೆರಡು ಕೊರೊನಾ ಕೇಸ್​ ಪತ್ತೆ - ಕೊರೊನಾ ಕೇಸ್​ ಪತ್ತೆ ಉತ್ತರಕನ್ನಡ

ಉತ್ತರ ಕನ್ನಡ ಜಿಲ್ಲೆಯಲ್ಲಿನ ಭಟ್ಕಳ ತಾಲೂಕಿಗೆ ಅಂಟಿದ್ದ ಕೊರೊನಾ ಇದೀಗ ಜಿಲ್ಲಾದ್ಯಂತ ಹರಡಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ತಗುಲಿರುವುದು ಇಂದು ದೃಢಪಟ್ಟಿದೆ.

Uttarakannada
ಉತ್ತರಕನ್ನಡ
author img

By

Published : May 30, 2020, 6:31 PM IST

ಕಾರವಾರ: ಮಹಾರಾಷ್ಟ್ರದಿಂದ ವಾಪಸಾದ ಉತ್ತರಕನ್ನಡ ಜಿಲ್ಲೆಯ ಇಬ್ಬರಲ್ಲಿ ಇಂದು ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಮಹಾರಾಷ್ಟ್ರದಿಂದ ವಾಪಸಾದ ದಾಂಡೇಲಿ ಮೂಲದ 35 ವರ್ಷದ ಮಹಿಳೆಗೆ ಹಾಗೂ ಕಾರವಾರ ಮೂಲದ 38 ವರ್ಷದ ಪುರುಷ ನೊಬ್ಬನಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ ಈ ಇಬ್ಬರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ನಂತರ ಗಂಟಲು ದ್ರವ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ಖಚಿತವಾಗಿದೆ.

ಈ ಎರಡು ಪ್ರಕರಣಗಳು ಸೇರಿ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 77ಕ್ಕೆ ಏರಿಕೆಯಾಗಿದೆ. ಇದರಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 34ಕ್ಕೆ ಏರಿಕೆಯಾಗಿದ್ದು, ಇದುವರೆಗೆ 43 ಮಂದಿ ಗುಣಮುಖರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.