ETV Bharat / state

ಸರ್ಕಾರದ ಧೋರಣೆಗೆ ಬೇಸತ್ತು ಸ್ವಂತ ಹಣದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡ ಗ್ರಾಮಸ್ಥರು - ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಗುಳ್ಳಾಪುರ ಗ್ರಾಮಸ್ಥರು

ಈ ಸೇತುವೆ ಗಂಗಾವಳಿ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ನಿತ್ಯ ಕೆಲಸಗಳಿಗೆ ತೆರಳುವವರು, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಈ ಸೇತುವೆಯ ಮೂಲಕವೇ ನದಿ ದಾಟಿ ಹೋಗುತ್ತಿದ್ದರು..

Ankola taluk Gullapura  villagers build bridge
ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಗುಳ್ಳಾಪುರ ಗ್ರಾಮಸ್ಥರು
author img

By

Published : Jan 14, 2022, 11:50 AM IST

ಕಾರವಾರ : ಮಳೆಗಾಲದಲ್ಲಿ ನದಿಯ ಪ್ರವಾಹಕ್ಕೆ ಸೇತುವೆ ಕೊಚ್ಚಿ ಹೋದ ಪರಿಣಾಮ ಸಂಕಷ್ಟ ಎದುರಿಸಿದ್ದ ಗ್ರಾಮಸ್ಥರೇ ಎಲ್ಲರೂ ಒಟ್ಟಾಗಿ ಸೇರಿ ಸೇತುವೆ ನಿರ್ಮಿಸಿಕೊಳ್ಳುವ ಮೂಲಕ ಮಾದರಿಯಾದ ಘಟನೆ ಜಿಲ್ಲೆಯ ಅಂಕೋಲಾ ತಾಲೂಕಿನ ಗುಳ್ಳಾಪುರ ಗ್ರಾಮದಲ್ಲಿ ನಡೆದಿದೆ.

ಗುಳ್ಳಾಪುರ-ಡೋಂಗ್ರಿ ಗ್ರಾಮಗಳ ನಡುವೆ ಹರಿಯುವ ಗಂಗಾವಳಿ ನದಿಗೆ ಅಡ್ಡಲಾಗಿ 25 ವರ್ಷದ ಹಿಂದೆ ಸೇತುವೆ ನಿರ್ಮಿಸಲಾಗಿದೆ. ಇದು ಪಕ್ಕದ ಹತ್ತಾರು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುತ್ತಿತ್ತು.

ಅಂಕೋಲಾ, ಯಲ್ಲಾಪುರ ಹಾಗೂ ಶಿರಸಿ ತಾಲೂಕುಗಳಿಗೂ ಈ ಸೇತುವೆ ಸಂಪರ್ಕ ಕೊಂಡಿಯಾಗಿತ್ತು. ಆದರೆ, ಕಳೆದ 2021ರ ಜುಲೈ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಗೆ ಗಂಗಾವಳಿ ನದಿ ಉಕ್ಕಿ ಹರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನ ರಭಸಕ್ಕೆ ಸೇತುವೆ ಕೊಚ್ಚಿಹೋಗಿತ್ತು.

ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಗುಳ್ಳಾಪುರ ಗ್ರಾಮಸ್ಥರು

ದಶಕಗಳ ಬಳಿಕ ಗ್ರಾಮಸ್ಥರು ಮತ್ತೆ ದೋಣಿಗಳಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದಷ್ಟು ಶೀಘ್ರ ಸೇತುವೆ ನಿರ್ಮಿಸಿ ಕೊಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್‌ಗೆ ಸ್ಥಳೀಯರು ಮನವಿ ಮಾಡಿದ್ದರು.

ಅದರಂತೆ ಸಚಿವರು 20 ಲಕ್ಷ ಅನುದಾನ ನೀಡಿದ್ದರೂ ಕಾಮಗಾರಿ ಗುತ್ತಿಗೆ ನೀಡುವ ಕಾರ್ಯ ಈವರೆಗೂ ಪೂರ್ಣಗೊಳ್ಳದ ಹಿನ್ನೆಲೆ ಸೇತುವೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿರಲಿಲ್ಲ. ಇದರಿಂದ ಬೇಸತ್ತ ಗ್ರಾಮಸ್ಥರು ತಾವೇ ಒಟ್ಟಾಗಿ ಹಣ ಹೊಂದಿಸಿ ಕೇವಲ 8 ದಿನದಲ್ಲಿ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಓದಿ: ಮೀನು ತುಂಬಿಕೊಂಡು ಹೋಗುತ್ತಿದ್ದ ಟ್ರಕ್ ಪಲ್ಟಿ: ಸ್ಥಳದಲ್ಲೇ ನಾಲ್ವರ ಸಾವು, ಹತ್ತು ಮಂದಿ ಸ್ಥಿತಿ ಗಂಭೀರ

ಈ ಸೇತುವೆ ಗಂಗಾವಳಿ ನದಿ ಪಕ್ಕದ ಹಳವಳ್ಳಿ, ಡೋಂಗ್ರಿ, ಕಮ್ಮಾಣಿ ಸೇರಿದಂತೆ ಹತ್ತಾರು ಗ್ರಾಮಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ನಿತ್ಯ ಕೆಲಸಗಳಿಗೆ ತೆರಳುವವರು, ಶಾಲೆ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಈ ಸೇತುವೆಯ ಮೂಲಕವೇ ನದಿ ದಾಟಿ ಹೋಗುತ್ತಿದ್ದರು.

ತಾಲೂಕಿನ ಸುಂಕಸಾಳ ಹಾಗೂ ರಾಮನಗುಳಿ ಗ್ರಾಮಗಳ ಬಳಿ ಇದೇ ಗಂಗಾವಳಿ ನದಿಗೆ ಅಡ್ಡಲಾಗಿ ಎರಡು ತೂಗುಸೇತುವೆಗಳನ್ನ ನಿರ್ಮಿಸಲಾಗಿತ್ತು. ಆದರೆ, 2019ರಲ್ಲಿ ಉಂಟಾಗಿದ್ದ ನೆರೆ ಸಂದರ್ಭದಲ್ಲಿ ಎರಡೂ ತೂಗು ಸೇತುವೆ ಕೊಚ್ಚಿ ಹೋಗಿದ್ದು, ಇದೊಂದೇ ಸೇತುವೆ ಆಸರೆಯಾಗಿತ್ತು.

ಕಳೆದ ಮಳೆಗಾಲದಲ್ಲಿ ಈ ಸೇತುವೆಯೂ ಕೊಚ್ಚಿ ಹೋದ ಪರಿಣಾಮ ಗ್ರಾಮಸ್ಥರಿಗೆ ಸಂಕಷ್ಟ ಎದುರಾಗಿತ್ತು. ಇದೀಗ ಗ್ರಾಮಸ್ಥರೇ ಒಟ್ಟಾಗಿ ಸೇರಿ ತಮಗೆ ಅಗತ್ಯವಿದ್ದ ತಾತ್ಕಾಲಿಕ ಸೇತುವೆ ನಿರ್ಮಿಸಿಕೊಂಡಿದ್ದಾರೆ.

ಓದಿ: ದೂರುದಾರರನ್ನು ತಮ್ಮ ಕಾರಿನಲ್ಲೇ ಇನ್ಸ್​​ಪೆಕ್ಟರ್ ಕಚೇರಿಗೆ ಕಳುಹಿಸಿಕೊಟ್ಟ ಎಸ್​​ಪಿ.. ಎಸ್​​​ಐ ಕಕ್ಕಾಬಿಕ್ಕಿ!

ಈ ಸೇತುವೆ ಕೇವಲ ತಾತ್ಕಾಲಿಕ ವ್ಯವಸ್ಥೆಯಾಗಿದೆ. ಸಚಿವರು ಮುತುವರ್ಜಿ ವಹಿಸಿ ಆದಷ್ಟು ಶೀಘ್ರದಲ್ಲಿ ಶಾಶ್ವತ ಸೇತುವೆ ನಿರ್ಮಿಸಿ ಕೊಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಮನಸ್ಸು ಮಾಡಿದ್ರೆ ಯಾವುದೂ ಅಸಾಧ್ಯವಿಲ್ಲ ಎನ್ನುವುದನ್ನ ಡೋಂಗ್ರಿ ಗ್ರಾಮಸ್ಥರು ತೋರಿಸಿಕೊಟ್ಟಿದ್ದಾರೆ.

ಓದಿ: ಗುವಾಹಟಿ-ಬಿಕನೇರ್ ರೈಲು ದುರಂತ: 9 ಮಂದಿ ಸಾವು,42ಕ್ಕೂ ಅಧಿಕ ಪ್ರಯಾಣಿಕರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.